ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2: ಆ ಅಮೋಘ ಕ್ಷಣಕ್ಕೆ ನೀವೂ ಪ್ರತ್ಯಕ್ಷ ಸಾಕ್ಷಿಯಾಗಬಹುದು!

|
Google Oneindia Kannada News

ಶ್ರೀಹರಿಕೋಟ, ಜುಲೈ 18: ತಾಂತ್ರಿಕ ಸಮಸ್ಯೆಯಿಂದ ರದ್ದಾಗಿದ್ದ ಚಂದ್ರಯಾನ-2 ಕ್ಕೆ ಜುಲೈ 22 ರಂದು ಮತ್ತೆ ಮುಹೂರ್ತ ನಿಗದಿಯಾಗಿದ್ದು, ಸೋಮವಾರ ಮಧ್ಯಾಹ್ನ 2:43 ಕ್ಕೆ ಬಾಹುಬಲಿ ನಭಕ್ಕೆ ಚಿಮ್ಮಲಿದೆ.

ಚಂದ್ರಯಾನ 02 ಮಿಷನ್ LIVE ಕಣ್ತುಂಬಿಸಿಕೊಳ್ಳುವುದು ಹೇಗೆ?ಚಂದ್ರಯಾನ 02 ಮಿಷನ್ LIVE ಕಣ್ತುಂಬಿಸಿಕೊಳ್ಳುವುದು ಹೇಗೆ?

ಈ ಅಮೋಘ ಕ್ಷಣವನ್ನು ಕಣ್ತುಂಬಿಸಿಕೊಳ್ಳುವ ಅವಕಾಶವನ್ನು ಇಸ್ರೋ ಜನಸಾಮಾನ್ಯರಿಗೂ ನೀಡಿದೆ. ಹೌದು, ನೀವೂ ಬಾಹುಬಲಿ ಉಡ್ಡಯನಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಬಹುದು!

ಚಂದ್ರಯಾನ-2: ಜುಲೈ 22ರಂದು ಬಾಹುಬಲಿಯ ಉಡಾವಣೆಚಂದ್ರಯಾನ-2: ಜುಲೈ 22ರಂದು ಬಾಹುಬಲಿಯ ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 22 ಮಧ್ಯಾಹ್ನ 2:43ಕ್ಕೆ ಚಂದ್ರಯಾನ-2 ಉಡಾವಣೆಯಾಗಲಿದೆ. ಇಲ್ಲಿನ ಗ್ಯಾಲರಿಯಲ್ಲಿ 5000 ಮಂದಿ ಕುಳಿತುಕೊಂಡು ವೀಕ್ಷಿಸಬಹುದಾದ ಸಾಮರ್ಥ್ಯವಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಇಲ್ಲಿ ಕುಳಿತು ನೇರವಾಗಿ ಉಡಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಇಷ್ಟು ಕಾಲ ಕೇವಲ ಸೀಮಿತ ಗಣ್ಯರಿಗಷ್ಟೇ ಈ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರು ಜನಸಾಮಾನ್ಯರಿಗೂ ಈ ಅವಕಾಶ ಕಲ್ಪಿಸಲಾಗಿದೆ.

Online registration for witnessing Chandrayaan 2

ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಬಯಸುವವರು ಈ ಲಿಂಕ್(https://www.shar.gov.in/VSCREGISTRATION/index.jsp) ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತರು ಜುಲೈ 19 ರಂದು ಸಂಜೆ 6 ಗಂಟೆಯ ಒಳಗೆ ತಮ್ಮ ಹೆಸರನ್ನು ನೋಂದಾಯಿಸಲು ಕೋರಲಾಗಿದೆ.

ನಭಕ್ಕೆ ಚಿಮ್ಮದ 'ಬಾಹುಬಲಿ': ಚಂದ್ರಯಾನ-2 ಗೆ ತಾಂತ್ರಿಕ ಅಡಚಣೆನಭಕ್ಕೆ ಚಿಮ್ಮದ 'ಬಾಹುಬಲಿ': ಚಂದ್ರಯಾನ-2 ಗೆ ತಾಂತ್ರಿಕ ಅಡಚಣೆ

ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸುವ ಚಂದ್ರಯಾನ-2 ಜುಲೈ 15 ರಂದು ಆಗಸಕ್ಕೆ ಚಿಮ್ಮಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಾದ ತಾಂತ್ರಿಕ ಅಡಚಣೆಯಿಂದ ಉಡಾವಣೆಯನ್ನು ಇಸ್ರೋ ರದ್ದುಗೊಳಿಸಿತ್ತು.

English summary
Online registration for witnessing the launch of GSLVMkIII-M1/Chandrayaan2 from viewer's gallery at Satish Dhawan Space Centre SHAR, Sriharikota will commence from 18:00 hrs IST on July 19, 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X