ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರಿಗಾಗಿ ಮುಂದಿನ ವರ್ಷದಿಂದ ಆನ್‌ಲೈನ್ ಸಿಇಟಿ ಪರೀಕ್ಷೆ

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗಾಗಿ ದೇಶಾದ್ಯಂತ ಆನ್‌ಲೈನ್ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

ಸರ್ಕಾರಿ ನೌಕರಿಗೆ ಸೇರಲು ಇಚ್ಛಿಸುವ ಯುವಕರಿಗೆ ಈ ಪರೀಕ್ಷೆ ವರವಾಗಲಿದ್ದು, ಸಿಇಟಿ ನಡೆಸಲು ಕೇಂದ್ರ ಸಚಿವ ಸಂಪುಟದ ಅನುಮತಿ ಪಡೆದು ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು(ಎನ್‌ಆರ್‌ಎ) ರಚಿಸಲಾಗಿದೆ.

ಗ್ರೂಪ್‌-ಬಿ ಮತ್ತು ಗ್ರೂಪ್‌-ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎನ್‌ಆರ್‌ಎ ಈ ಪರೀಕ್ಷೆ ನಡೆಸಲಿದೆ. ಸಿಇಟಿಯು, ಉದ್ಯೋಗಕ್ಕಾಗಿ ಪ್ರಾಥಮಿಕ ಹಂತದ ಆಯ್ಕೆ ಪ್ರಕ್ರಿಯೆ ಆಗಿರಲಿದೆ ಎಂದು ಜಿತೇಂದ್ರ ಸಿಂಗ್‌ ಹೇಳಿದರು.

ಹಾಗೆಯೇ 'ಈ ಸುಧಾರಣೆಯಿಂದಾಗಿ, ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಹಳ್ಳಿಗಳಿಂದ ಬರುವ ಅಭ್ಯರ್ಥಿಗಳಿಗೂ ಅನುಕೂಲವಾಗಲಿದೆ.

ಈ ಸುಧಾರಣೆಯ ಒಂದು ಪ್ರಮುಖ ಉದ್ದೇಶವೆಂದರೆ ಪ್ರತಿಯೊಬ್ಬ ಅಭ್ಯರ್ಥಿಗೂ ಅವಕಾಶ ನೀಡುವುದು, ಇದರಿಂದಾಗಿ ಯಾವುದೇ ಉದ್ಯೋಗ ಆಕಾಂಕ್ಷಿಗಳು ಅನಾನುಕೂಲಕ್ಕೆ ಒಳಗಾಗುವುದಿಲ್ಲ ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಸಮಾನ ಅವಕಾಶವನ್ನು ಒದಗಿಸಲಾಗುತ್ತದೆ.

ಇದು ಮಹಿಳೆಯರು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಮತ್ತು ಅನೇಕ ಕೇಂದ್ರಗಳಿಗೆ ಪ್ರಯಾಣಿಸುವ ಮೂಲಕ ಬಹು ಪರೀಕ್ಷೆಗಳಿಗೆ ಹಾಜರಾಗಲು ಆರ್ಥಿಕವಾಗಿ ಅಸಾಧ್ಯ ಎಂದುಕೊಳ್ಳುವವರಿಗೆ ದೊಡ್ಡ ಲಾಭವಾಗಲಿದೆ ಎಂದು ಹೇಳಿದರು.

exam

ದೂರದ ಊರುಗಳಲ್ಲಿ ಇರುವ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಮಹಿಳೆಯರು, ಅಂಗವಿಕಲರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಭ್ಯರ್ಥಿಗಳಿಗೂ ಇದು ಸಹಕಾರಿಯಾಗಲಿದೆ.

ಅಸ್ತಿತ್ವದಲ್ಲಿರುವ ಕೇಂದ್ರ ನೇಮಕಾತಿ ಸಂಸ್ಥೆಗಳಾದ ಎಸ್‌ಎಸ್‌ಸಿ, ಆರ್‌ಆರ್‌ಬಿಗಳು ಮತ್ತು ಐಬಿಪಿಎಸ್ ಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿರ್ದಿಷ್ಟ ನೇಮಕಾತಿಗಳನ್ನು ನಡೆಸುತ್ತಲೇ ಇರುತ್ತವೆ ಮತ್ತು ಸಾಮಾನ್ಯ ಅರ್ಹತಾ ಪರೀಕ್ಷೆಯು ಉದ್ಯೋಗಗಳಿಗೆ ಅಭ್ಯರ್ಥಿಗಳ ಪ್ರಾಥಮಿಕ ತಪಾಸಣೆಯ ಪರೀಕ್ಷೆಯಾಗಿರುತ್ತದೆ ಎಂದು ಹೇಳಿದರು.

2021 ಜೂನ್‌ ಬಳಿಕ ಎನ್‌ಆರ್‌ಎ ಮೊದಲ ಸಿಇಟಿ ನಡೆಸುವ ಸಾಧ್ಯತೆ ಇದೆ. ಹೀಗಿದ್ದರೂ, ಪ್ರಸ್ತುತ ಇರುವ ಏಜೆನ್ಸಿಗಳಾದ ಎಸ್‌ಎಸ್‌ಸಿ, ಆರ್‌ಆರ್‌ಬಿ ಹಾಗೂ ಐಬಿಪಿಎಸ್‌ಗಳು ಅಗತ್ಯತೆಗೆ ತಕ್ಕಂತೆ ನೇಮಕಾತಿಯನ್ನು ನಡೆಸಲಿವೆ ಎಂದು ಮಾಹಿತಿ ನೀಡಿದರು.

English summary
A Common Eligibility Test (CET) will be conducted online across the country from next year to screen and shortlist candidates for recruitment to select central government jobs, Union Minister Jitendra Singh said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X