ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಕೃಷಿ ಮಾರುಕಟ್ಟೆ ಯಾವ ರಾಜ್ಯಗಳಲ್ಲಿ ಆರಂಭ?

|
Google Oneindia Kannada News

ನವದೆಹಲಿ, ಏಪ್ರಿಲ್, 14: ರೈತರ ಬೆಳೆಗೆ ಸ್ಪರ್ಧಾತ್ಮಕ ಬೆಲೆ ಮತ್ತು ಉತ್ತಮ ಮಾರುಕಟ್ಟೆ ಅವಕಾಶ ಒದಗಿಸುವ ಏಕೀಕೃತ ಆನ್‌ಲೈನ್‌ ಕೃಷಿ ಮಾರುಕಟ್ಟೆಗೆ ಏಪ್ರಿಲ್ 14 ರಂದು ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಲಿದೆ. ಪ್ರಾಯೋಗಿಕವಾಗಿ 8 ರಾಜ್ಯಗಳಲ್ಲಿ ಯೋಜನೆ ಕಾರ್ಯಾರಂಭ ಮಾಡಲಿದೆ.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕಿಸಿ ಕೊಡಿಸುವ ಉದ್ದೇಶದಿಂದ ಆರಂಭಿಸಲಾಗಿರುವ ರಾಷ್ಟ್ರೀಯ ಆನ್‌ಲೈನ್‌ ಕೃಷಿ ಮಾರುಕಟ್ಟೆ ವ್ಯವಸ್ಥೆ ಗುರುವಾರ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಎಂಟು ರಾಜ್ಯಗಳಲ್ಲಿ ಆರಂಭಗೊಳ್ಳಲಿದೆ.[ಕೇಂದ್ರದ ಯೋಜನೆ, ರೈತರಿಗೂ ಆನ್‌ಲೈನ್ ಮಾರುಕಟ್ಟೆ]

agriculture

ಉತ್ತರ ಪ್ರದೇಶ, ಗುಜರಾತ್‌, ತೆಲಂಗಾಣ, ರಾಜಸ್ತಾನ, ಮಧ್ಯ ಪ್ರದೇಶ, ಜಾರ್ಖಂಡ್‌, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ಇ-ಕೃಷಿ ಮಾರುಕಟ್ಟೆ ಕಾರ್ಯಾರಂಭ ಮಾಡಲಿದೆ. ಎಂಟು ರಾಜ್ಯಗಳ ರೈತರು 21 ಸಗಟು ಮಾರುಕಟ್ಟೆಗಳಲ್ಲಿ 25 ಕೃಷಿ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಬಹುದಾಗಿದೆ.

ಹೊಸ ವ್ಯವಸ್ಥೆಯನ್ನು 365 ಸಗಟು ಮಾರುಕಟ್ಟೆಗಳಿಗೆ ವಿಸ್ತರಿಸಲು ಕೋರಿ 12 ರಾಜ್ಯಗಳು ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಆರಂಭದಲ್ಲಿ ಎಂಟು ರಾಜ್ಯಗಳ 21 ಮಾರುಕಟ್ಟೆಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಆರಂಭಿಸುತ್ತಿದ್ದೇವೆ. ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಬುಧವಾರ ಇಲ್ಲಿ ತಿಳಿಸಿದರು.

ಈರುಳ್ಳಿ, ಆಲೂಗೆಡ್ಡೆ, ಗೋಧಿ, ಸೇಬು, ಬೇಳೆ ಕಾಳುಗಳು, ಆಹಾರ ಧಾನ್ಯಗಳು, ಹತ್ತಿ ಸೇರಿದಂತೆ 21 ಕೃಷಿ ಉತ್ಪನ್ನಗಳನ್ನು ರೈತರು ಆನ್‌ಲೈನ್‌ ಮೂಲಕ ಮಾರಾಟ ಮಾಡಬಹುದಾಗಿದೆ.

English summary
The Central government will integrate 21 regulated wholesale markets, or mandis, in eight states under an online platform on Thursday as part of the proposed National Agriculture Market (NAM), On April 14, on the 125 birth anniversary of BR Ambedkar, Prime Minister Narendra Modi will launch the e-trading platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X