ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸೇಬಿಗಿಂತ ದುಬಾರಿಯಾದ ಈರುಳ್ಳಿ, ನೂರರ ಗಡಿ ದಾಟಲಿದೆ

|
Google Oneindia Kannada News

Recommended Video

ನೂರರ ಗಡಿ ದಾಟಲಿದೆ ಈರುಳ್ಳಿ ದರ | Oneindia Kannada

ನವದೆಹಲಿ, ಸೆಪ್ಟೆಂಬರ್ 24: ಇಷ್ಟು ದಿನ ಅಯ್ಯೋ ಸೇಬು ಹಣ್ಣಾ ಅದು ಶ್ರೀಮಂತರಿಗೆ ಮೀಸಲು ಅದನ್ನ ನಮ್ಮಂಥವರು ದಿನಾ ತಿನ್ನೋಕಾಗುತ್ತಾ ಅಂತಿದ್ದೋರು ಈಗ ಅಯ್ಯೋ ಸೇಬುನಾದರೂ ತಗೋಬಹುದು ಈರುಳ್ಳಿ ಕೊಳ್ಳೋಕಾಗಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕೆಜಿಗೆ 60ರ ಗಡಿ ದಾಟಿದೆ. ಪಂಜಾಬ್‌ನಲ್ಲಿ ಈಗಲೇ 70 ರೂ ಆಗಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ದರದ ರೀತಿ ಈರುಳ್ಳಿ ಕೂಡ 100ರ ಗಡಿ ದಾಟಿದರೆ ಆಶ್ಚರ್ಯವೇನಿಲ್ಲ.

ಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ, ಪಾತಾಳಕ್ಕಿಳಿದ ಟೊಮೆಟೋಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ, ಪಾತಾಳಕ್ಕಿಳಿದ ಟೊಮೆಟೋ

ಕರ್ನಾಟಕದಲ್ಲಿ ಈರುಳ್ಳಿ ಕೊರತೆ ಆಗಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಈರುಳ್ಳಿ ಕೊರತೆ ಇಲ್ಲ. ಇನ್ನೂ ಒಂದೂವರೆ ತಿಂಗಳಿಗಾಗುವಷ್ಟು ಈರುಳ್ಳಿ ರಾಜ್ಯದಲ್ಲಿ ಸಂಗ್ರಹವಿದೆ.

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಕಾಣಿಸಿಕೊಂಡ ಪರಿಣಾಮ ಈರುಳ್ಳಿ ಕೊರತೆ ಕಂಡುಬಂದಿದೆ. ಬೆಂಗಳೂರಲ್ಲಿ ಉತ್ತಮ ಈರುಳ್ಳಿ 40-50 ರೂ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.

ಪಂಜಾಬ್‌ನಲ್ಲಿ ಸೇಬುಹಣ್ಣಿನ ದರ ಎಷ್ಟು?

ಪಂಜಾಬ್‌ನಲ್ಲಿ ಸೇಬುಹಣ್ಣಿನ ದರ ಎಷ್ಟು?

ಪಂಜಾಬ್‌ನಲ್ಲಿ ಸೇಬು ಹಣ್ಣಿನ ದರ ಕೆಜಿಗೆ 60ರೂ ಇದ್ದರೆ, ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಈರುಳ್ಳಿ ದರ 40-41 ರೂ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 60-70 ರೂ ಇದೆ. ಶಿಮ್ಲಾ ಸೇಬು ಕೆಜಿಗೆ 30 ರೂಕ್ಕೆ ಮಾರಾಟವಾಗುತ್ತಿದ್ದರೆ ಈರುಳ್ಳಿ ದರ 60 ರೂ ಇದೆ.

ಈರುಳ್ಳಿ ದರ ಹೆಚ್ಚಳಕ್ಕೆ ಕಾರಣ ಏನು?

ಈರುಳ್ಳಿ ದರ ಹೆಚ್ಚಳಕ್ಕೆ ಕಾರಣ ಏನು?

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಈರುಳ್ಳಿ ಉತ್ಪಾದನೆ ಕುಂಠಿತವಾಗಿದೆ. ಜೊತೆಗೆ ರಾಜ್ಯಗಳಲ್ಲಿ ಮಳೆ ಹಾಗೂ ಶೀತದ ಹವಾಮಾನ ಇರುವ ಕಾರಣ ಗೋಡೌನ್‌ನಲ್ಲಿರುವ ಈರುಳ್ಳಿ ಕೂಡ ಕೊಳೆಯಲಾರಂಭಿಸಿದೆ. ಹೀಗಾಗಿ ದೀಪಾವಳಿ ಮುಗಿಯುವವರೆಗೆ ಈರುಳ್ಳಿ ಬೆಲೆ ಏರಿಕೆ ಮುಂದುವರೆಯುವ ಎಲ್ಲಾ ಸಾಧ್ಯತೆ ಇದೆ.

328 ಚೀಲ ಈರುಳ್ಳಿ ಗೋದಾಮಿನಿಂದ ಕದ್ದೊಯ್ದ ಕಳ್ಳರು328 ಚೀಲ ಈರುಳ್ಳಿ ಗೋದಾಮಿನಿಂದ ಕದ್ದೊಯ್ದ ಕಳ್ಳರು

ಈರುಳ್ಳಿ ಬೆಲೆ ಎಲ್ಲಿ ಎಷ್ಟೆಷ್ಟಿದೆ?

ಈರುಳ್ಳಿ ಬೆಲೆ ಎಲ್ಲಿ ಎಷ್ಟೆಷ್ಟಿದೆ?

ಪಂಜಾಬ್- ಈರುಳ್ಳಿ-40 ರೂ- ಸೇಬು-60-70 ರೂ
ಶಿಮ್ಲಾ-ಈರುಳ್ಳಿ-60ರೂ.-ಸೇಬು 30 ರೂ.
ಧರ್ಮಶಾಲಾ-ಈರುಳ್ಳಿ-60 ರೂ-ಸೇಬು 90ರೂ.
ಬೆಂಗಳೂರು-ಈರುಳ್ಳಿ-50-60-ಸೇಬು-60-80 ರೂ ಇದೆ.

ಅಫ್ಘಾನ್ ಈರುಳ್ಳಿಗೆ ಬೇಡಿಕೆ ಹೆಚ್ಚು

ಅಫ್ಘಾನ್ ಈರುಳ್ಳಿಗೆ ಬೇಡಿಕೆ ಹೆಚ್ಚು

ಭಾರತದಲ್ಲಿ ಈರುಳ್ಳಿ ದರ ಏರಿಕೆಯಾದಾಗಲೆಲ್ಲಾ ಆಸರೆಯಾಗುತ್ತಿದ್ದದ್ದು ಪಾಕಿಸ್ತಾನ. ಆದರೆ ಈ ಬಾರಿ ಪಾಕಿಸ್ತಾನದಿಂದ ಈರುಳ್ಳಿ ಬರುವುದು ಅನುಮಾನ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನ ಕಲಂ 370ರದ್ದು ಮಾಡಿದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಅಷ್ಟು ಸರಿಯಾಗಿಲ್ಲ. ಹೀಗಾಗಿ ಭಾರತಕ್ಕೆ ಈರುಳ್ಳಿ ಸಿಗುವ ರಾಷ್ಟ್ರವೆಂದರೆ ಅಫ್ಘಾನಿಸ್ತಾನ. ಅಫ್ಘಾನಿಸ್ತಾನದಿಂದ ಈರುಳ್ಳಿ ಬರಲು ಸಿದ್ಧವಿದೆ. ಅದು ಭಾರತಕ್ಕೆ ಬರಬೇಕಾದರೆ ಪಾಕಿಸ್ತಾನದ ಮೂಲಕವೇ ತರಿಸಿಕೊಳ್ಳಬೇಕಾಗಿದೆ.ಅದಕ್ಕೆ ಪಾಕಿಸ್ತಾನದ ಅನುಮತಿಯೂ ಕೂಡ ಬೇಕಾಗುತ್ತದೆ.

ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!ನಾಡಿನ ಸಮಸ್ತ 'ಈರುಳ್ಳಿ' ಬಳಕೆದಾರರಿಗೆ ಮಹಾರಾಷ್ಟ್ರದಿಂದ ಶಾಕಿಂಗ್ ನ್ಯೂಸ್!

English summary
Onion Price Shoot Up In India, The price of onions was recorded at Rs 756 per quintal on the same day in 2018, Due to heavy rain Onion Prices gradually increases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X