ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ! ಸರ್ಕಾರ ಬೀಳೋದು ಗ್ಯಾರಂಟಿ?

|
Google Oneindia Kannada News

ಎಂಥ ಕಲ್ಲು ಹೃದಯದವರಲ್ಲೂ ಕಣ್ಣೀರು ಹಾಕಿಸುವ ತಾಕತ್ತಿದ್ದರೆ ಅದು ಈರುಳ್ಳಿಗೆ ಮಾತ್ರ! ಪ್ರತಿನಿತ್ಯದ ಬಹುತೇಕ ಆಹಾರ ಪದಾರ್ಥಗಳಲ್ಲಿ ಉಪಯೋಗವಾಗುವ ಈರುಳ್ಳಿಯ ಬೆಲೆ ಕೈಗೆಟುಕದಷ್ಟು ಮೇಲೇರಿದರೆ...?

ಈರುಳ್ಳಿ ಬೆಲೆ ಹೆಚ್ಚಾಗುವುದು ಜನಸಾಮಾನ್ಯನ ಜೇಬಿಗೆ ಕತ್ತರಿ ಹಾಕುವುದಷ್ಟೇ ಆಗಿದ್ದರೆ ರಾಜಕಾರಣಿಗಳೆಲ್ಲ ನಿದ್ದೆ ಬಿಟ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ! ಪ್ರತಿ ಬಾರಿ ಈ ಈರುಳ್ಳಿ ಬೆಲೆಏರಿದಾಗಲೂ ನಡೆಯುವ ರಾಜಕೀಯ ಸ್ಥಿತ್ಯಂತರಗಳ ಇತಿಹಾಸ ನೋಡಿದರೆ 'ಈರುಳ್ಳಿ' ಬೆಲೆ ಏರಿಕೆಗೂ ರಾಜಕಾರಣಕ್ಕೂ ಇರುವ ಸಂಬಂಧ ಕುತೂಹಲ ಕೆರಳಿಸುತ್ತದೆ.

ಸದ್ಯಕ್ಕೆ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿಈ ಈರುಳ್ಳಿ ಬೆಲೆ ಕೆಜಿಗೆ 60ರ ಗಡಿ ದಾಟಿದೆ. ಪಂಜಾಬ್‌ನಲ್ಲಿ ಈಗಲೇ 70 ರೂ. ಆಗಿದ್ದು, ಇತರ ರಾಜ್ಯಗಳಲ್ಲೂ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಹಲವು ರಾಜ್ಯಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಈರುಳ್ಳಿ ಬೆಲೆಯೂ ಹೆಚ್ಚಾಗಿದೆ. ಜನಸಾಮಾನ್ಯನಿಗೆ ಈರುಳ್ಳಿ ಬೆಲೆ ಏರಿಕೆಯ ಚಿಂತೆಯಾದರೆ, ರಾಜಕಾರಣಿಗಳಿಗೆ ಸೀಟು ಕಳೆದುಕೊಳ್ಳುವ ಭೀತಿ ಎದುರಾಗಿದೆ..! ಅದಕ್ಕೆ ಕಾರಣವೂ ಇದೆ!

ಇಂದಿರಾ ಗಾಂಧಿಯನ್ನು ಗೆಲ್ಲಿಸಿದ್ದ ಈರುಳ್ಳಿ ಬೆಲೆ!

ಇಂದಿರಾ ಗಾಂಧಿಯನ್ನು ಗೆಲ್ಲಿಸಿದ್ದ ಈರುಳ್ಳಿ ಬೆಲೆ!

1980 ರಲ್ಲಿ ಇಂದಿರಾ ಗಾಂಧಿಯವರು ಮೊತ್ತ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿದ್ದ ಜನತಾ ಪಕ್ಷದ ಸರ್ಕಾರವನ್ನು ಸೋಲಿಸಿ, ಮತ್ತೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲೂ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಆಗ ಇಂದಿರಾ ಗಾಂಧಿಯವರನ್ನು ಕೈಹಿಡಿದಿದ್ದೇ ಈರುಳ್ಳಿ ಬೆಲೆ ಎಂದು ಇಂದಿಗೂ ನಂಬಿಕೊಂಡವರಿದ್ದಾರೆ!

ಭಾರತದಲ್ಲಿ ಸೇಬಿಗಿಂತ ದುಬಾರಿಯಾದ ಈರುಳ್ಳಿ, ನೂರರ ಗಡಿ ದಾಟಲಿದೆಭಾರತದಲ್ಲಿ ಸೇಬಿಗಿಂತ ದುಬಾರಿಯಾದ ಈರುಳ್ಳಿ, ನೂರರ ಗಡಿ ದಾಟಲಿದೆ

ಸುಷ್ಮಾ ಸ್ವರಾಜ್ ರನ್ನು ಸೋಲಿಸಿದ್ದು!

ಸುಷ್ಮಾ ಸ್ವರಾಜ್ ರನ್ನು ಸೋಲಿಸಿದ್ದು!

1998 ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ನಾಯಕಿ, ದಿ. ಸುಷ್ಮಾ ಸವರಾಜ್ ಅವರು ಸೋಲನುಭವಿಸಿದ್ದರು. ಆ ಸಂದರ್ಭದಲ್ಲಿ ರಾಜಸ್ಥಾನ ಮತ್ತು ದೆಹಲಿಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಕೆಜಿಗೆ 40 (ಅಂದಿನ ಬೆಲೆ) ರೂ. ಇದ್ದ ಈರುಳ್ಳಿ ಬೆಲೆಯಿಂದಲೇ ಸುಷ್ಮಾ ಸ್ವರಾಜ್ ಸೋಲನುಭವಿಸಿದರು ಎಂಬ ಮಾತು ಆಗ ಎಲ್ಲೆಡೆ ಕೇಳಿಬಂದಿತ್ತು.

ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ.

ಒಂದು ಸೀರೆ ಕೊಂಡ್ರೆ ಕೆಜಿ ಈರುಳ್ಳಿ ಫ್ರಿ.

ಈರುಳ್ಳಿ ಬೆಲೆ ಪ್ರತಿ ಬಾರಿ ಹೆಚ್ಚಾದಾಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಜೋಕುಗಳು ಸದ್ದುಮಾಡುತ್ತವೆ. ಈಗಲೂ ಈರುಳ್ಳಿ ಬೆಲೆ ಏರುತ್ತಿದ್ದಂತೆಯೇ, "ಒಂದು ಸೀರೆ ಕೊಂಡ್ರೆ ಒಂದು ಕೆಜಿ ಈರುಳ್ಳಿ ಫ್ರೀ, 1 ಡಾಲರ್= 750 ಗ್ರಾಂ ಈರುಳ್ಳಿ" ಎಂಬೆಲ್ಲ ಟ್ವೀಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

328 ಚೀಲ ಈರುಳ್ಳಿ ಗೋದಾಮಿನಿಂದ ಕದ್ದೊಯ್ದ ಕಳ್ಳರು328 ಚೀಲ ಈರುಳ್ಳಿ ಗೋದಾಮಿನಿಂದ ಕದ್ದೊಯ್ದ ಕಳ್ಳರು

ಈರುಳ್ಳಿ ಅಡವಿಟ್ಟು ಸಾಲ!

ಈರುಳ್ಳಿ ಅಡವಿಟ್ಟು ಸಾಲ!

"ಈರುಳ್ಳಿ ಅಡವಿಟ್ಟರೆ ಸಾಲ ಕೊಡ್ತೀರಾ" ಎಂದು ವ್ಯಕ್ತಿಯೊಬ್ಬರು ಬ್ಯಾಂಕಿಗೆ ಕೇಳಿದ್ದಾರೆ!

ಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ, ಪಾತಾಳಕ್ಕಿಳಿದ ಟೊಮೆಟೋಬೆಂಗಳೂರಲ್ಲಿ ಗಗನಕ್ಕೇರಿದ ಈರುಳ್ಳಿ ಬೆಲೆ, ಪಾತಾಳಕ್ಕಿಳಿದ ಟೊಮೆಟೋ

English summary
Onion Price rising, Social media reacts wiith historical facts, jokes and witty comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X