ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಮಾ ದಾಳಿಗೆ ಪ್ರತೀಕಾರ; ಬಾಲಕೋಟ್‌ ದಾಳಿ ಯೋಜನೆ ಹೇಗಿತ್ತು?

|
Google Oneindia Kannada News

ನವದೆಹಲಿ, ಫೆಬ್ರವರಿ 14 : ಭಾರತದಲ್ಲಿ ಹಲವಾರು ಭಯೋತ್ಪಾಕ ದಾಳಿ ನಡೆದಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಮಾದಲ್ಲಿ ನಡೆದ ದಾಳಿಯನ್ನು ದೇಶದ ಜನರು ಎಂದಿಗೂ ಮರೆಯುವುದಿಲ್ಲ. ಪುಲ್ವಮಾ ದಾಳಿಗೆ ಒಂದು ವರ್ಷವಾಗಿದ್ದು, ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಪುಲ್ವಮಾ ದಾಳಿ ಮತ್ತು ಈ ದಾಳಿ ಬಳಿಕ ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಉತ್ತರದ ಬಗ್ಗೆ ಭಾರತೀಯರು ಇಂದಿಗೂ ಹೆಮ್ಮೆ ಪಡುತ್ತಾರೆ. ಪುಲ್ವಮಾ ದಾಳಿಯ ಪ್ರತೀಕಾರವಾಗಿ ನಡೆದ ಬಾಲಾಕೋಟ್ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ಭಾರತೀಯ ಯೋಧರು ಧ್ವಂಸ ಮಾಡಿದ್ದರು.

ಬಾಲಾಕೋಟ್ ದಾಳಿ ಬಗ್ಗೆ ಸಿನಿಮಾ; ವಿವೇಕ್ ಒಬೆರಾಯ್ ನಾಯಕ ಬಾಲಾಕೋಟ್ ದಾಳಿ ಬಗ್ಗೆ ಸಿನಿಮಾ; ವಿವೇಕ್ ಒಬೆರಾಯ್ ನಾಯಕ

ಬಾಲಾಕೋಟ್‌ನಲ್ಲಿ ನಡೆದ ವಾಯುದಾಳಿಗೆ 'Operation Bandar' ಎಂದು ಹೆಸರಿಡಲಾಗಿತ್ತು. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಲಾಗಿತ್ತು. ದಾಳಿಯಿಂದಾಗಿ ಪಾಕಿಸ್ತಾನ ಬೆಚ್ಚಿ ಬಿದ್ದಿತ್ತು.

ಪುಲ್ವಮಾ ದಾಳಿ : ಹುತಾತ್ಮ ಸೈನಿಕರ ಸ್ಮರಣೆಗಾಗಿ ರಾಷ್ಟ್ರೀಯ ಸ್ಮಾರಕ ಪುಲ್ವಮಾ ದಾಳಿ : ಹುತಾತ್ಮ ಸೈನಿಕರ ಸ್ಮರಣೆಗಾಗಿ ರಾಷ್ಟ್ರೀಯ ಸ್ಮಾರಕ

ಬಾಲಕೋಟ್ ಮೇಲಿನ ದಾಳಿಗೆ ಸುಮಾರು 6 ಸಾವಿರ ಯೋಧರು ಕೆಲಸ ಮಾಡಿದ್ದಾರೆ. ಆದರೆ, ಎಲ್ಲಿಯೂ ಕೂಡ ದಾಳಿಯ ಮಾಹಿತಿ ಸೋರಿಕೆಯಾಗಂತೆ ಎಚ್ಚರಿಕೆ ವಹಿಸಲಾಗಿತ್ತು. ಫೆಬ್ರವರಿ 14 ಪುಲ್ವಾಮಾ ದಾಳಿಗೆ ಒಂದು ವರ್ಷವಾಗಿದೆ. ಬಾಲಕೋಟ್ ದಾಳಿಯ ಬಗ್ಗೆ ಸಿನಿಮಾಗಳು ಬರುತ್ತಿವೆ.

ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು

ಪುಲ್ವಮಾ ದಾಳಿಯ ಪ್ರತೀಕಾರ

ಪುಲ್ವಮಾ ದಾಳಿಯ ಪ್ರತೀಕಾರ

ಫೆಬ್ರವರಿ 14ರಂದು ಪುಲ್ವಮಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ಯೋಧರ ಬಸ್‌ಗೆ ಸ್ಫೋಟಕ ತುಂಬಿದ್ದ ವಾಹನ ಡಿಕ್ಕಿ ಹೊಡೆಸಲಾಗಿತ್ತು. ಈ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಬಾಲಾಕೋಟ್‌ನಲ್ಲಿ ನಡೆದ ವಾಯುದಾಳಿಗೆ ಪ್ರತೀಕಾರವಾಗಿ ಬಾಲಕೋಟ್ ಮೇಲೆ ನಡೆಸಿದ ದಾಳಿಗೆ 'Operation Bandar' ಎಂದು ಹೆಸರಿಡಲಾಗಿತ್ತು.

ಬಾಲಕೋಟ್ ದಾಳಿ

ಬಾಲಕೋಟ್ ದಾಳಿ

ಬಾಲಕೋಟ್ ದಾಳಿಯ ಒಂದು ಪ್ರಮುಖ ಅಂಶ ರಹಸ್ಯವಾದ ಕಾರ್ಯಾಚರಣೆ. ಅದೂ ಸಹ ಯೋಧರು ಪಾಕಿಸ್ತಾನದ ನೆಲಕ್ಕೆ ಹೋಗಿ ಅಲ್ಲಿದ್ದ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿದ್ದು. ಭಾರತೀಯ ವಾಯುಪಡೆ ದಾಳಿಯ ಬಗ್ಗೆ ವಿವರವಾದ ಯೋಜನೆ ತಯಾರು ಮಾಡಿತ್ತು. ಗಡಿಯಲ್ಲಿ ಪಾಕಿಸ್ತಾನದ ಕಣ್ಣು ತಪ್ಪಿಸಿ ವಿಮಾನದ ಮೂಲಕ ಬಾಂಬ್ ದಾಳಿ ನಡೆಸಲಾಗಿತ್ತು.

ಬೆಚ್ಚಿ ಬಿದ್ದಿದ್ದ ಪಾಕಿಸ್ತಾನ

ಬೆಚ್ಚಿ ಬಿದ್ದಿದ್ದ ಪಾಕಿಸ್ತಾನ

ಮಿರಾಜ್-2000ಎಸ್ ವಿಮಾನದ ಮೂಲಕ ಬಾಲಕೋಟ್‌ನಲ್ಲಿ ದಾಳಿ ನಡೆಸಲಾಗಿತ್ತು. ವಿಮಾನ ಪಾಕಿಸ್ತಾನದ ನೆಲಕ್ಕೆ ಹೋಗಿ ಬಾಂಬ್ ಹಾಕಿ ವಾಪಸ್ ಬಂದ ಬಳಿಕ ದಾಳಿ ಬಗ್ಗೆ ತಿಳಿದ ಪಕ್ಕದ ರಾಷ್ಟ್ರ ಬೆಚ್ಚಿ ಬಿದ್ದಿತ್ತು. ಉಗ್ರರ ಶಿಬಿರ ಪತ್ತೆ ಹಚ್ಚುವಲ್ಲಿ ಗುಪ್ತಚರ ಇಲಾಖೆ ನಡೆಸಿದ ಕಾರ್ಯವೂ ಈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಮಾಹಿತಿ ಸೋರಿಕೆ ಆಗಲಿಲ್ಲ

ಮಾಹಿತಿ ಸೋರಿಕೆ ಆಗಲಿಲ್ಲ

ಬಾಲಕೋಟ್ ದಾಳಿಯಲ್ಲಿ ಸುಮಾರು 6000 ಯೋಧರು ಪಾಲ್ಗೊಂಡಿದ್ದರು. ಅತ್ಯಂತ ರಹಸ್ಯವಾದ ಕಾರ್ಯಾಚರಣೆ ಇದಾಗಿತ್ತು. ಎಲ್ಲಿಯೂ ದಾಳಿಯ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿತ್ತು. ಐದರಿಂದ ಆರು ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಯನ್ನು ನಡೆಸಲಾಗಿತ್ತು.

English summary
India has witnessed several terror attacks. Pulwama was one of the most deadly. 40 CRPF personnel killed in the attack. India pay Pakistan back with Balakot air strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X