ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒನ್ ನೇಷನ್, ಒನ್ ರೇಶನ್ ಕಾರ್ಡ್‌' 32 ರಾಜ್ಯಗಳಿಗೆ ವಿಸ್ತರಣೆ

|
Google Oneindia Kannada News

ನವದೆಹಲಿ, ಫೆಬ್ರವರಿ 1: ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಜಾರಿಗೆ ತರುವ ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆ 'ಒನ್ ನೇಷನ್, ಒನ್ ರೇಶನ್ ಕಾರ್ಡ್‌' ಕುರಿತಂತೆ ಮಹತ್ವದ ಘೋಷಣೆಯನ್ನು ವಿತ್ತ ಸಚಿವೆ ನಿರ್ಮಲಾ ಅವರು ಬಜೆಟ್ ಭಾಷಣದ ವೇಳೆ ಮಾಡಿದ್ದಾರೆ. ಇದೀಗ ಈ ಯೋಜನೆಯ ಜಾಲಕ್ಕೆ 32 ರಾಜ್ಯಗಳು ಹಾಗೂ 1 ಕೇಂದ್ರಾದಳಿತ ಒಳಪಡಿಸಲಾಗುತ್ತದೆ, ಇದರಿಂದ 69 ಕೋಟಿ ಜನರಿಗೆ ಲಾಭವಾಗಲಿದೆ ಎಂದು ಹೇಳಿದರು.

ಈ ರೇಷನ್ ಕಾರ್ಡ್‌ ತೋರಿಸಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯಬಹುದಾಗಿದೆ. ಈಗಿರುವ ಪಡಿತರ ವ್ಯವಸ್ಥೆಯ ಪ್ರಕಾರ ಕುಟುಂಬವೊಂದು, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿದರೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಬೇಕಾಗುತ್ತದೆ ಇದು ತ್ರಾಸದಾಯಕ ವ್ಯವಸ್ಥೆ, ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿದ್ದಾಗ ವಲಸೆ ಸಮಸ್ಯೆ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವ ಪಡೆದುಕೊಂಡಿದೆ.

ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ

ಮಾರ್ಚ್ 2021ರೊಳಗೆ ದೇಶದೆಲ್ಲೆಡೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಆಗಸ್ಟ್ 2020ರ ವೇಳೆಗೆ ಶೇ 67ರಷ್ಟು ಮಂದಿ 'ಒನ್ ನೇಷನ್, ಒನ್ ರೇಶನ್ ಕಾರ್ಡ್‌' ಯೋಜನೆಗೆ ಒಳಪಡಲಿದ್ದಾರೆ. ಪ್ರತಿ ಕುಟುಂಬಕ್ಕೆ 1 ಕೆಜಿ ಅಕ್ಕಿ ಅಥವಾ 1 ಕೆಜಿ ಗೋಧಿ ಜೊತೆಗೆ ಹೆಚ್ಚುವರಿ 1ಕೆಜಿ ಧಾನ್ಯ ಸಿಗಲಿದೆ. ಒಂದೇ ಪಡಿತರ ವಿತರಣೆ ಅಂಗಡಿ ಮೇಲೆ ಅವಲಂಬನೆ ತಪ್ಪುವುದರಿಂದ ಭ್ರಷ್ಟಾಚಾರ ತಪ್ಪಿಸಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಯೋಜನೆಯ ಸದ್ಯದ ಸ್ಥಿತಿಗತಿ

ಯೋಜನೆಯ ಸದ್ಯದ ಸ್ಥಿತಿಗತಿ

ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೊಳ್ಳುವುದರಿಂದ 30ರಾಜ್ಯಗಳಲ್ಲಿ 67 ಕೋಟಿ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಕಾಣುವುದು ಸರ್ಕಾರ ಗುರಿ, ಉದ್ದೇಶ. ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರು ಅಲ್ಲಿರುವ ಪಡಿತರ ವಿತರಣೆ ಅಂಗಡಿಯಲ್ಲಿ ರೇಷನ್ ಕಾರ್ಡ್‌ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ ಎಂದರು. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ.

20 ರಾಜ್ಯಗಳಲ್ಲಿಹೊಸ ಪಿಡಿಎಸ್ ಸೌಲಭ್ಯ ಜಾರಿ

20 ರಾಜ್ಯಗಳಲ್ಲಿಹೊಸ ಪಿಡಿಎಸ್ ಸೌಲಭ್ಯ ಜಾರಿ

ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಒದಗಿಸುತ್ತಿವೆ. ತಮಿಳುನಾಡು, ಪಂಜಾಬ್, ಒಡಿಶಾ ಮತ್ತು ಮಧ್ಯಪ್ರದೇಶ ಸೇರಿದಂತೆ 20 ರಾಜ್ಯಗಳಲ್ಲಿ ಪಿಡಿಎಸ್ ಸೌಲಭ್ಯವನ್ನು ಸುಲಭವಾಗಿ ಜಾರಿಗೊಳಿಸಬಹುದು. ಈ ರಾಜ್ಯಗಳಲ್ಲಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಲಾಗಿದೆ.

ರೇಷನ್ ಕಾರ್ಡ್ - ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಮಹತ್ವದ ಆದೇಶರೇಷನ್ ಕಾರ್ಡ್ - ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಮಹತ್ವದ ಆದೇಶ

ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ

ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ

ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ: ಬಯೋಮೆಟ್ರಿಕ್/ ಆಧಾರ್ ಸಂಖ್ಯೆ ದೃಢೀಕರಣವಾಗಿಲ್ಲ ಎಂಬ ಕಾರಣಕ್ಕೆ NFSC ಅಡಿಯಲ್ಲಿ ಸಿಗಬೇಕಿರುವ ಆಹಾರ ಧಾನ್ಯಗಳನ್ನು ವಿತರಣೆ ಮಾಡದಿರುವುದು ಸರಿಯಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ತಾಂತ್ರಿಕ ತೊಂದರೆಗಳನ್ನು ಬದಿಗೊತ್ತಿ, ಮಾನವೀಯ ದೃಷ್ಟಿಯಿಂದ ಪಡಿತರ, ಆಹಾರ ಧಾನ್ಯ ವಿತರಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವಾಲಯ ಸೂಚನೆ ನೀಡಿದೆ.

ಇ -ಕೆವೈಸಿ ಅಪ್ಡೇಟ್ ಬಗ್ಗೆ ಏನಿದೆ ಮಾಹಿತಿ

ಇ -ಕೆವೈಸಿ ಅಪ್ಡೇಟ್ ಬಗ್ಗೆ ಏನಿದೆ ಮಾಹಿತಿ

ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳಲು ಇದ್ದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ, ನವೆಂಬರ್ ತಿಂಗಳದ ಅಂತ್ಯದವರೆಗೂ ಇಂಥದ್ದೊಂದು ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಕಲ್ಪಿಸಿದೆ. ನಿಯಮಾನುಸಾರ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡುದಾರರು ಇ-ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳಬೇಕಿದೆ. ಇ -ಕೆವೈಸಿ ಅಪ್ಡೇಟ್ ಮಾಡಿಸಿಕೊಂಡ ಬಳಿಕ ನೈಜ ಫಲಾನುಭವಿಗಳ ಲೆಕ್ಕ ಸಿಗಲಿದೆ. ಇಕೆವೈಸಿ ಅಪ್ಡೇಡ್ ಗಾಗಿ ಪಡಿತರ ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇನ್ನು ವೃದ್ಧರು, ವಿಶೇಷಚೇತನರು ಮತ್ತು ಕುಟುಂಬದವರೊಂದಿಗೆ ವಾಸವಿಲ್ಲದ ಸದಸ್ಯರು ಈ ಕೆವೈಸಿ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದರೆ ಆಹಾರ ನಿರೀಕ್ಷಕರ ಪರಿಶೀಲನೆಗೆ ಒಳಪಟ್ಟು ಅವರಿಗೆ ವಿನಾಯಿತಿ ಪಡೆಯಬಹುದು.

ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರ ಗಮನಕ್ಕೆ ಈ ಸುದ್ದಿಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರ ಗಮನಕ್ಕೆ ಈ ಸುದ್ದಿ

English summary
We have launched one nation, one ration card scheme through which beneficiaries can claim their rations anywhere in the country. Migrant workers in particular benefit from scheme. One nation, One ration card plan is under implementation by 32 states & UTs: FM Nirmala Sithraman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X