ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛತ್ತೀಸ್‌ಗಡ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಾವು

|
Google Oneindia Kannada News

ರಾಯ್ಪುರ್, ಜೂನ್ 27: ಛತ್ತೀಸ್ ಗಢದಲ್ಲಿ ಭದ್ರತಾ ಸಿಬ್ಬಂದಿ ನಡೆಸಿರುವ ಎನ್‌ಕೌಂಟರ್‌ನಲ್ಲಿ ಬಂಡುಕೋರರ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಂತೋಷ್ ಮಾರ್ಕಮ್ ಅನ್ನು ಹೊಡೆದುರುಳಿಸಲಾಗಿದೆ.

ದಾಂತೇವಾಡ ಜಿಲ್ಲೆಯ ಪೊರ್ದಮ್ ಎಂಬಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ಭದ್ರತಾ ಸಿಬ್ಬಂದಿ ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ 25 ಪ್ರಕರಣಗಳಲ್ಲಿ ಬೇಕಾಗಿರುವ ಸಂತೋಷ್ ಮಾರ್ಕೆಮ್ ಅನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿತ್ತು. ಇದೀಗ ಭದ್ರತಾ ಪಡೆಯ ಗುಂಡಿಗೆ ಅದೇ ಭಯೋತ್ಪಾದಕ ಬಲಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಛತ್ತೀಸ್ ಗಢ ಎನ್‌ಕೌಂಟರ್‌ನಲ್ಲಿ PLGA ಮಾವೋವಾದಿ ಹತ್ಯೆಛತ್ತೀಸ್ ಗಢ ಎನ್‌ಕೌಂಟರ್‌ನಲ್ಲಿ PLGA ಮಾವೋವಾದಿ ಹತ್ಯೆ

"ಛತ್ತೀಸ್ ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ) ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ತದನಂತರದಲ್ಲಿ ನಂತರ ಭದ್ರತಾ ಸಿಬ್ಬಂದಿ ನಡೆಸಿದ ಪ್ರತಿದಾಳಿಯಲ್ಲಿ ಸಂತೋಷ್ ಮಾರ್ಕೆಮ್ ಮೃತಪಟ್ಟಿದ್ದಾನೆ," ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

One Most Wanted Criminal is Dead In Security Force Encounter At Chattisgarhs Dantewad

ಶೋಧ ಕಾರ್ಯಚರಣೆ ವೇಳೆ ಮೃತದೇಹ ಪತ್ತೆ:

ದಾಂತೇವಾಡ ಜಿಲ್ಲೆಯ ಪೊರ್ದಮ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿಗೆ ಒಂದು ಪಿಸ್ತೂಲ್ ಮತ್ತು ಮದ್ದು ಗುಂಡಿನ ಜೊತೆಗೆ ಮೃತದೇಹವೊಂದು ಪತ್ತೆಯಾಗಿದೆ. ಈ ಮೃತದೇಹ ಸಂತೋಷ್ ಮಾರ್ಕಮ್ ಎಂಬ ಭಯೋತ್ಪಾದಕನದ್ದು ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಅರ್ನಪುರ್ ಪೊಲೀಸ್ ಠಾಣೆಯಲ್ಲಿ 25 ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು ಎಂದು ತಿಳಿದು ಬಂದಿದೆ.

"ರಾಯ್‌ಪುರದಿಂದ 400 ಕಿ.ಮೀ ದೂರದಲ್ಲಿನ ಕಾಡಿನಲ್ಲಿ ಇರುವ ದಟ್ಟವಾದ ಸಸ್ಯರಾಶಿ ನಡುವೆ ಅಗತ್ಯವಿರುವ ಸಸ್ಯಗಳನ್ನು ತೆಗೆದುಕೊಂಡ ಭಯೋತ್ಪಾದಕರು ಅಲ್ಲಿಂದ ಪರಾರಿಯಾಗಿದ್ದರು," ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.

English summary
One Most Wanted Criminal is Dead In Security Force Encounter At Chattisgarh's Dantewad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X