ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಹೆಲ್ಕಾ: ಸಂಸ್ಥೆ ತೊರೆದ ಹಿರಿಯ ಸಂಪಾದಕಿ

By Mahesh
|
Google Oneindia Kannada News

ನವದೆಹಲಿ, ನ.26: ತೆಹಲ್ಕಾ ಸುದ್ದಿಸಂಸ್ಥೆ ಸ್ಥಾಪಕ ಹಾಗೂ ಮುಖ್ಯ ಸಂಪಾದಕ ತರುಣ್ ತೇಜಪಾಲ್ ತನ್ನ ಸಹದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಪಾಲ್ ಪರ ನಿಂತಿರುವ ಎಂಡಿ ಶೋಮಾ ಅವರ ನಿಲುವನ್ನು ಖಂಡಿಸಿ ತೆಹೆಲ್ಕಾ ಸಂಸ್ಥೆ ಹಿರಿಯ ಉದ್ಯೋಗಿಗಳು ಸಂಸ್ಥೆ ತೊರೆಯುತ್ತಿದ್ದಾರೆ.

ತೇಜಪಾಲ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿದ ಯುವತಿ ತೆಹೆಲ್ಕಾ ಸಂಸ್ಥೆ ತೊರೆದ ನಂತರ ಸಾಲು ಸಾಲು ಹಿರಿಯ ಪತ್ರಕರ್ತರು ತೆಹೆಲ್ಕಾ ಬಿಡುತ್ತಿದ್ದಾರೆ. ಹಿರಿಯ ಸಂಪಾದಕಿ ರಾಣಾ ಅಯೂಬ್ ಅವರು ಮಂಗಳವಾರ(ನ.26) ರಾಜೀನಾಮೆ ನೀಡಿದ್ದಾರೆ. ಇವರಿಗಿಂತ ಮುಂಚೆ ಸೌಗಾತ್ ದಾಸ್ ಗುಪ್ತಾ,ಅಯೇಷಾ ಸಿದ್ದಿಕಾ, ಜಾಯ್ ಮಜೂಂದಾರ್ ಹಾಗೂ ರೇವತಿ ಲಾಲ್ ಅವರು ಸಂಸ್ಥೆ ತೊರೆದಿದ್ದಾರೆ.

One more senior journalist quits Tehelka

'ಈಗಾಗಲೇ ಕ್ಷಮೆಯಾಚಿಸಿ, ಸಂಸ್ಥೆ ನಿಯಮದಂತೆ ನಡೆದುಕೊಂಡಿದ್ದೇನೆ. ಯಾವುದೇ ರೀತಿಯ ತನಿಖೆಗೆ ಸಿದ್ಧ' ಎಂದಿದ್ದ ಆರೋಪಿ ತರುಣ್ ತೇಜಪಾಲ್ ಅವರ ಅರ್ಜಿ ನಾಳೆ ವಿಚಾರಣೆಗೆ ಬರಲಿದೆ. ಅಲ್ಲಿ ತನಕ ತರುಣ್ ಅವರನ್ನು ಬಂಧಿಸದಂತೆ ಕೋರ್ಟ್ ಆದೇಶಿಸಿದೆ. ಗೋವಾ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ 344 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಗೋವಾದ ಹೋಟೆಲ್ ವೊಂದರಲ್ಲಿ ತರುಣ್ ಅವರು ಎರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಹದ್ಯೋಗಿ ಆರೋಪಿಸಿದ್ದರು. ತರುಣ್ ಅವರ ಮೇಲೆ ಲೈಂಗಿಕ ಆರೋಪ ಕೇಳಿ ಬರುತ್ತಿದ್ದಂತೆ, ನೈತಿಕ ಹೊಣೆ ಹೊತ್ತು ಕ್ಷಮೆಯಾಚಿಸಿ, ತಮ್ಮ ಸಹ ಸಂಪಾದಕ ಸ್ಥಾನದಿಂದ ಆರು ತಿಂಗಳ ಕಾಲ ದೂರಸರಿದಿದ್ದರು.

English summary
One more journalist has resigned from Tehelka, in protest over the way the organisation has been handling the sexual assault case filed by a woman journalist against its former editor-in-chief Tarun Tejpal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X