ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರಿಗೆ ಕೊರೊನಾ ವೈರಸ್

|
Google Oneindia Kannada News

ನವದೆಹಲಿ, ಆಗಸ್ಟ್ 21: ಭಾರತದಲ್ಲಿ ನಾಲ್ವರಲ್ಲಿ ಕನಿಷ್ಠ ಒಬ್ಬರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಸರ್ಕಾರವು ತಿಳಿಸುವ ಅಂಕಿ ಅಂಶಗಳಿಗಿಂತಲೂ ಇದು ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಮುಂಚೂಣಿ ಖಾಸಗಿ ಲ್ಯಾಬೊರೇಟರಿಯೊಂದು ಹೇಳಿದೆ.

Recommended Video

ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

ತಮ್ಮ ಕಂಪೆನಿ ಥೈರೋಕೇರ್ ಭಾರತದಾದ್ಯಂತ ಸುಮಾರು 2.70 ಲಕ್ಷ ಜನರ ಆಂಟಿಬಾಡಿ ಪರೀಕ್ಷೆ ಮಾಡಿದ್ದು, ಅದರ ವಿಶ್ಲೇಷಣೆಯಡಿ, ಸರಾಸರಿ ಶೇ 26 ಮಂದಿಯಲ್ಲಿ ಪ್ರತಿಕಾಯಗಳು ಇರುವುದು ಕಂಡುಬಂದಿದೆ. ಇದರ ಅರ್ಥ ಅವರೆಲ್ಲರೂ ಈಗಾಗಲೇ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಡಾ. ಎ. ವೇಲುಮಣಿ ಹೇಳಿದ್ದಾರೆ.

Johnson And Johnson: 60 ಸಾವಿರ ಜನರ ಮೇಲೆ ಕೊರೊನಾ ಲಸಿಕೆ ಪ್ರಯೋಗJohnson And Johnson: 60 ಸಾವಿರ ಜನರ ಮೇಲೆ ಕೊರೊನಾ ಲಸಿಕೆ ಪ್ರಯೋಗ

'ಇದು ನಾವು ನಿರೀಕ್ಷೆ ಮಾಡಿರುವುದಕ್ಕಿಂದಲೂ ಹೆಚ್ಚಿನ ಪ್ರಮಾಣದಲ್ಲಿದೆ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಗುಂಪುಗಳಲ್ಲಿಯೂ ಈ ಪ್ರತಿಕಾಯಗಳ ಅಸ್ತಿತ್ವ ಏಕರೂಪದ್ದಾಗಿವೆ' ಎಂದು ವೇಲುಮಣಿ ಹೇಳಿದ್ದಾರೆ.

One In Four Indians Could Have Been Infected With Coronavirus: Thyrocare

ಮುಂಬೈನಂತಹ ನಗರಗಳಲ್ಲಿ ಸರ್ಕಾರ ನಡೆಸಿರುವ ಸಮೀಕ್ಷೆಗಳಂತೆಯೇ ಥೈರೋ ಕೇರ್ ಸಮೀಕ್ಷೆ ಹಲವು ಸಂಗತಿಗಳನ್ನು ತೆರೆದಿಟ್ಟಿದೆ. ಜನನಿಬಿಡ ಕೊಳೆಗೇರಿಗಳಲ್ಲಿ ಶೇ 57ರಷ್ಟು ಜನಸಂಖ್ಯೆ ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದೆ ಎಂದು ಅದು ತಿಳಿಸಿದೆ.

ಕೊರೊನಾ ಲಸಿಕೆ ತಯಾರಿಕೆಗೆ ಭಾರತದ ಸಹಕಾರ ಕೇಳಿದ ರಷ್ಯಾಕೊರೊನಾ ಲಸಿಕೆ ತಯಾರಿಕೆಗೆ ಭಾರತದ ಸಹಕಾರ ಕೇಳಿದ ರಷ್ಯಾ

ಹಣ ಪಾವತಿಸಿ ಪರೀಕ್ಷೆಗೆ ಒಳಗಾದ ರೋಗಿಗಳನ್ನು ಸಹ ಥೈರೋ ಕೇರ್ ಸಮೀಕ್ಷೆ ಒಳಗೊಂಡಿದೆ. ಕಳೆದ ಏಳು ವಾರಗಳಲ್ಲಿ ದೇಶದ 600 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಡಿಸೆಂಬರ್ ಅಂತ್ಯದೊಳಗೆ ಪ್ರತಿಕಾಯ ಹೊಂದಿರುವ ಭಾರತೀಯರ ಜನಸಂಖ್ಯೆ ಶೇ 40ಕ್ಕೆ ಏರಲಿದೆ ಎಂದು ವೇಲುಮಣಿ ಹೇಳಿದ್ದಾರೆ.

English summary
Thyrocare lab head Dr A Velumani said, at least one in four people in India could have been infected with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X