ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬ ಪೈಲೆಟ್ ನಮ್ಮ ವಶದಲ್ಲಿ ಎಂದು ಹೇಳಿದ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಫೆಬ್ರವರಿ 27 : ಭಾರತದ ವಾಯುಪಡೆಯ ಒಬ್ಬ ಪೈಲೆಟ್ ತನ್ನ ವಶದಲ್ಲಿದ್ದಾನೆ ಎಂದು ಪಾಕಿಸ್ತಾನ ಖಚಿತಪಡಿಸಿದೆ. ಭಾರತದ ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾನೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಮಧ್ಯಾಹ್ನ ಹೇಳಿತ್ತು.

ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಗಫೂರ್ ಈ ಕುರಿತು ಬುಧವಾರ ಸಂಜೆ ಟ್ವೀಟ್ ಮಾಡಿದ್ದಾರೆ. ಒಬ್ಬ ಪೈಲೆಟ್‌ ತಮ್ಮ ವಶದಲ್ಲಿದ್ದಾನೆ. ಸೇನಾ ನಿಯಮದಂತೆ ಅವರಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನಕ್ಕೆ ಸಮನ್ಸ್ ನೀಡಿದ ಭಾರತಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನಕ್ಕೆ ಸಮನ್ಸ್ ನೀಡಿದ ಭಾರತ

 Pakistan

ಬುಧವಾರ ಬೆಳಗ್ಗೆ ಇಬ್ಬರು ಪೈಲೆಟ್‌ಗಳು ತಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ಹೇಳಿತ್ತು. ಒಬ್ಬರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿತ್ತು. ಪೈಲೆಟ್ ಬಗ್ಗೆ ಮಾಹಿತಿ ನೀಡುವಂತೆ ಭಾರತದ ವಿದೇಶಾಂಗ ಸಚಿವಾಲಯ ಈಗಾಗಲೇ ಪಾಕಿಸ್ತಾನದ ಡೆಪ್ಯೂಟಿ ಹೈ ಕಮೀಷನರ್‌ಗೆ ಸಮನ್ಸ್ ಜಾರಿಗೊಳಿಸಿದೆ.

ಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗುಅಭಿನಂದನ್ ಅವರನ್ನು ವಾಪಸ್ ಕರೆತನ್ನಿ : ಟ್ವಿಟ್ಟಿಗರ ಒಕ್ಕೊರಲ ಕೂಗು

ಬುಧವಾರ ಸಂಜೆ ಟ್ವೀಟ್ ಮಾಡಿರುವ ಜನರಲ್ ಗಫೂರ್ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದು, ಸೇನಾ ನಿಯಮದಂತೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು 'ಇಂದು ಬೆಳಗಿನ ಆಪರೇಷನ್ ಸಂದರ್ಭದಲ್ಲಿ ನಾವು ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ' ಎಂದು ಹೇಳಿದ್ದರು.

'ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲೆಟ್ ನಮ್ಮ ವಶದಲ್ಲಿದ್ದಾನೆ ಎಂದು ಹೇಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಒಂದು ವಿಮಾನವನ್ನು ಹೊಡೆದುರುಳಿಸಲಾಗಿದೆ' ಎಂದು ತಿಳಿಸಿದ್ದರು.

English summary
Pakistan military spokesperson Major General Ghafoor said that they have only one IAF pilot in their custody. Wing Commander Abhinandan is being treated as per norms of military ethics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X