ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣವನ್ನು 1 ಡೋಸ್ ಲಸಿಕೆ ಎಷ್ಟು ತಗ್ಗಿಸಬಲ್ಲದು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿರುವ ನಡುವೆಯೇ ಎಲ್ಲರೂ ತಪ್ಪದೇ ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ತಜ್ಞರು ಮನವಿ ಮಾಡುತ್ತಿದ್ದಾರೆ.

ಇದೀಗ ಕೇಂದ್ರ ಸರ್ಕಾರ, ದೇಶದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಯ ದಕ್ಷತೆ ಕುರಿತು ವಿಶ್ಲೇಷಣೆ ನಡೆಸಿದ್ದು, ಕೊರೊನಾ ಸೋಂಕಿನ ವಿರುದ್ಧ ಈ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಗುರುವಾರ ಮಾಹಿತಿ ಹಂಚಿಕೊಂಡಿದೆ.

ದೇಶದಲ್ಲಿ ಕೊರೊನಾ ಸ್ಥಿತಿಗತಿ; ವಾರದ ಸರಾಸರಿ ಪ್ರಕರಣಗಳಲ್ಲಿ ಇಳಿಕೆದೇಶದಲ್ಲಿ ಕೊರೊನಾ ಸ್ಥಿತಿಗತಿ; ವಾರದ ಸರಾಸರಿ ಪ್ರಕರಣಗಳಲ್ಲಿ ಇಳಿಕೆ

ಕೊರೊನಾ ಲಸಿಕೆಯ ಒಂದು ಡೋಸ್ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆಯನ್ನು 96.6% ಕಡಿಮೆ ಮಾಡಿದರೆ, ಎರಡು ಡೋಸ್‌ಗಳ ಲಸಿಕೆ 97.5% ಪರಿಣಾಮಕಾರಿಯಾಗಿವೆ ಎಂದು ತಿಳಿಸಿದೆ. ಈ ವರ್ಷದ ಏಪ್ರಿಲ್ ಹಾಗೂ ಆಗಸ್ಟ್‌ ತಿಂಗಳಿನಲ್ಲಿ, ಅಂದರೆ ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿನ ದತ್ತಾಂಶಗಳನ್ನು ವಿಶ್ಲೇಷಣೆ ನಡೆಸಿದ್ದು, ಗುರುವಾರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ಲಸಿಕೆ, ಸೋಂಕಿನಿಂದ ಸಂಭವಿಸಬಹುದಾದ ಮರಣ ಪ್ರಮಾಣವನ್ನು ತಗ್ಗಿಸುತ್ತದೆ ಎಂಬುದನ್ನು ಸರ್ಕಾರ ಪುನರುಚ್ಚರಿಸಿದ್ದು, ಕೊರೊನಾ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ ಬಹುಪಾಲು ಮಂದಿ ಲಸಿಕೆ ಪಡೆದಿರಲಿಲ್ಲ ಎಂಬುದನ್ನು ಉಲ್ಲೇಖಿಸಿದೆ.

One Dose of Covid Vaccine 96.6 Percent Effective Against Virus Says Govt

ಸೋಂಕಿನ ವಿರುದ್ಧ ಲಸಿಕೆ ಬಹುಮುಖ್ಯ ಕವಚ. ಈಗ ಲಸಿಕೆಗಳು ಸಾಕಷ್ಟು ಲಭ್ಯವಿವೆ. ಜನರು ಅವುಗಳನ್ನು ಪಡೆದುಕೊಳ್ಳಬೇಕು. ಮೊದಲ ಡೋಸ್ ಲಸಿಕೆ ಪಡೆದುಕೊಂಡ ನಂತರವಷ್ಟೇ ಎರಡನೇ ಡೋಸ್ ಪಡೆಯಲು ಸಾಧ್ಯ. ಲಸಿಕೆ ಪಡೆದರೆ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆ ತಗ್ಗುತ್ತದೆ ಎಂಬ ಕುರಿತು ಭರವಸೆ ನೀಡುತ್ತದೆ ಎಂದು ಕೊರೊನಾ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.

ಸಂಪೂರ್ಣ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಂಡರೂ ಸಾವಿನ ಹಂತದವರೆಗೆ ಗಂಭೀರ ಸ್ವರೂಪ ಪಡೆಯುವುದಿಲ್ಲ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯೂ ತಗ್ಗುತ್ತದೆ ಎಂದರು.

ಮೊದಲ ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸಾಧ್ಯತೆಯನ್ನು 96.6% ಹಾಗೂ ಎರಡು ಡೋಸ್‌ ಪಡೆದವರಲ್ಲಿ 97.5% ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ.

 ಲಸಿಕೆ ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆ ಪಡೆಯಿರಿ ಲಸಿಕೆ ಪಡೆಯದೇ ಇರುವುದಕ್ಕಿಂತ ಯಾವುದಾದರೂ ಒಂದು ಲಸಿಕೆ ಪಡೆಯಿರಿ

ದೇಶದಲ್ಲಿನ ಲಸಿಕಾ ಅಭಿಯಾನದ ಸ್ಥಿತಿಗತಿ ಕುರಿತು ಗುರುವಾರ ವಿವರಣೆ ನೀಡಿದ ಆರೋಗ್ಯ ಸಚಿವಾಲಯ, ದೇಶದ 58% ಜನಸಂಖ್ಯೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 18% ಜನಸಂಖ್ಯೆ ಎರಡೂ ಡೋಸ್‌ಗಳ ಲಸಿಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಲಸಿಕೆ ಪಡೆದವರ ಸಂಖ್ಯೆ 72 ಕೋಟಿಯನ್ನು ದಾಟಿದೆ ಎಂದು ತಿಳಿಸಿದೆ.

One Dose of Covid Vaccine 96.6 Percent Effective Against Virus Says Govt

ಸಿಕ್ಕಿಂ, ದಾದ್ರ, ನಗರ್ ಹವೇಲಿ, ಮಿಜೋರಾಂ, ಉತ್ತರಾಖಂಡ, ಲಕ್ಷದ್ವೀಪ, ಲಡಾಖ್, ಹಿಮಾಚಲ ಪ್ರದೇಶ, ತ್ರಿಪುರ ರಾಜ್ಯಗಳು 85% ಅರ್ಹ ವಯಸ್ಕರಿಗೆ ಲಸಿಕೆ ನೀಡಿವೆ.

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದ್ದು, 35 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಇನ್ನೂ 10%ಗೂ ಅಧಿಕವಿದೆ. 30 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 5-10% ಇದೆ ಎಂದು ಮಾಹಿತಿ ನೀಡಿದೆ.

ಕಳೆದ ವಾರ ದೇಶದಲ್ಲಿ ದಾಖಲಾದ ಪ್ರಕರಣಗಳಲ್ಲಿ ಕೇರಳವೊಂದರಿಂದಲೇ 68.59% ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು:
ಶುಕ್ರವಾರ ಭಾರತದಲ್ಲಿ 34,973 ಹೊಸ ಕೋವಿಡ್- 19 ಪ್ರಕರಣ ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 37,681 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 260 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,90,646 ಆಗಿದೆ.
ದೇಶದಲ್ಲಿ ಇದುವರೆಗೂ ಒಟ್ಟಾರೆ 3,31,74,954 ಪ್ರಕರಣಗಳು ದಾಖಲಾಗಿದ್ದು, 3,23,42,299 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಇದುವರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,42,009 ಆಗಿದೆ. 72,37,84,586 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

English summary
Effectiveness of coronavirus vaccines against death is 96.6 percent with one dose, and 97.5 percent with two doses, said the health ministry,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X