ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವದ ಸಂಘರ್ಷಣೆಯಲ್ಲಿ ಯುವಕ ಬಲಿ

|
Google Oneindia Kannada News

ಪುಣೆ, ಜನವರಿ 02 : ಪುಣೆಯಲ್ಲಿ ನಡೆಯುತ್ತಿರುವ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ ಓರ್ವ ದಲಿತ ಯುವಕ ಮೃತಪಟ್ಟಿದ್ದಾನೆ.

ಭೀಮಾ ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್‌ ಸೇನೆಯು ಮೇಲ್ಜಾತಿಯವರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಸೋಮವಾರ ಪುಣೆಯಲ್ಲಿ ಆಯೋಜಿಸಿದ್ದ 200ನೇ ವಿಜಯೋತ್ಸವದಲ್ಲಿ ಲಕ್ಷಾಂತರ ದಲಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷಣೆ ಉಂಟಾಗಿದೆ. ಘಟನೆಯಲ್ಲಿ ಓರ್ವ ದಲಿತ ಯುವಕ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

One dead as violence hits Bhima Koregaon 200th anniversary of Mahars' victory over Peshwas

1818 ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಪೇಶ್ವೆ ಸೇನೆಯನ್ನು ಸೋಲಿಸಿತ್ತು. ಇದರ ಸ್ಮರಣಾರ್ಥವಾಗಿ 200ನೇ ವಿಜಯೋತ್ಸವನ್ನು ಪುಣೆಯಲ್ಲಿ ಆಯೋಜಿಸಲಾಗಿತ್ತು, ಸುಮಾರು 5 ಲಕ್ಷ ದಲಿತರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.

English summary
The event to mark 200th anniversary of the Bhima Koregaon battle in Pune district, in which forces of the East India Company defeated Peshwa's army, was marred by incidents of violence today, with at least one person getting killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X