ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಎನ್-95 ಮಾಸ್ಕ್, ಪಿಪಿಇ ಕಿಟ್ ಗಳೆಲ್ಲ ಉಚಿತ ಉಚಿತ!

|
Google Oneindia Kannada News

ನವದೆಹಲಿ, ಜುಲೈ.03: ನೊವೆಲ್ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ರಾಜ್ಯಗಳಿಗೆ ಉಚಿತವಾಗಿ ಎರಡು ಕೋಟಿ ಎನ್-95 ಮಾಸ್ಕ್ ಹಾಗೂ ಒಂದು ಕೋಟಿಗೂ ಹೆಚ್ಚು ಪಿಪಿಐ ಕಿಟ್ ಗಳನ್ನು ನೀಡಲಾಗಿದೆ.

Recommended Video

15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

ಏಪ್ರಿಲ್.01ರಿಂದ ಜುಲೈ.03ರವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಿರುವ ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

Breaking: ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆBreaking: ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆ

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಇದುವರೆಗೂ ಒಟ್ಟಾರೆಯಾಗಿ 2.02 ಕೋಟಿಗೂ ಹೆಚ್ಚು ಎನ್-95 ಮಾಸ್ಕ್ ಗಳು, 1.18 ಕೋಟಿಗೂ ಅಧಿಕ ಪಿಪಿಇ ಕಿಟ್ ಗಳನ್ನು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಣೆ ಮಾಡಲಾಗಿದೆ. ಜೊತೆಗೆ 6.12 ಕೋಟಿ ಹೈಡ್ರೋಕ್ಸಿಕ್ಲೂರಿನ್ ಮಾತ್ರೆಗಳನ್ನು ಸರಬರಾಜು ಮಾಡಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ವೆಂಟಿಲೇಟರ್ ಸರಬರಾಜು

ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ವೆಂಟಿಲೇಟರ್ ಸರಬರಾಜು

ಕೊರೊನಾವೈರಸ್ ವಿರುದ್ಧ ಹೋರಾಟಕ್ಕಾಗಿ ವೈದ್ಯರಿಗೆ ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳು, ಮತ್ತು ಹೈಡ್ರೋಕ್ಸಿಕ್ಲೂರಿನ್ ಮಾತ್ರೆಗಳಷ್ಟೇ ಅಲ್ಲ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲೇ ಸಿದ್ಧಪಡಿಸಿದ 11,300 ವೆಂಟಿಲೇಟರ್ ಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ. ಈ ಪೈಕಿ 6154 ವೆಂಟಿಲೇಟರ್ ಗಳನ್ನು ಆಸ್ಪತ್ರೆಗಳಿಗೆ ಕಳುಹಿಸಿ ಕೊಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶಾದ್ಯಂತ 1.02 ಲಕ್ಷ ಆಮ್ಲಜನಕ ಸಿಲಿಂಡರ್ ರವಾನೆ

ದೇಶಾದ್ಯಂತ 1.02 ಲಕ್ಷ ಆಮ್ಲಜನಕ ಸಿಲಿಂಡರ್ ರವಾನೆ

ಭಾರತದಾದ್ಯಂತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗುವಂತೆ ಆಮ್ಲಜನಕದ ಸಿಲಿಂಡರ್ ಗಳ ವ್ಯವಸ್ಥೆ ಕಲ್ಪಿಸಿ ಕೊಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಳೆದ ಏಪ್ರಿಲ್.1ರಿಂದ ಈರೆಗೂ 1.02 ಲಕ್ಷ ಆಮ್ಲಜನಕದ ಸಿಲಿಂಡರ್ ಗಳನ್ನು ರವಾನಿಸಲಾಗಿದೆ. ಈ ಪೈಕಿ 72,293 ಆಕ್ಸಿಜನ್ ಸಿಲಿಂಡರ್ ಗಳನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯವಾರು ಸರಬರಾಜು ಆಗಿರುವ ಪಿಪಿಇ ಕಿಟ್ ಗಳೆಷ್ಟು?

ರಾಜ್ಯವಾರು ಸರಬರಾಜು ಆಗಿರುವ ಪಿಪಿಇ ಕಿಟ್ ಗಳೆಷ್ಟು?

ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಸಾವಿರ ಸಾವಿರದ ಗಡಿ ದಾಟುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ನವದೆಹಲಿಗೆ 7.81 ಲಕ್ಷ ಪಿಪಿಇ ಕಿಟ್, 12.76 ಲಕ್ಷ ಎನ್-95 ಮಾಸ್ಕ್ ಗಳನ್ನು ಸರಬರಾಜು ಮಾಡಲಾಗಿದೆ. ಮಹಾರಾಷ್ಟ್ರಕ್ಕೆ 11.81 ಪಿಪಿಇ ಕಿಟ್ ಗಳು ಹಾಗೂ 20.64 ಎನ್-95 ಮಾಸ್ಕ್ ಗಳನ್ನು ಕಳುಹಿಸಿ ಕೊಡಲಾಗಿದೆ. ಇನ್ನು, ತಮಿಳುನಾಡಿಗೆ 5.39 ಲಕ್ಷ ಪಿಪಿಇ ಕಿಟ್ ಗಳು ಹಾಗೂ 9.81 ಲಕ್ಷ ಎನ್-95 ಮಾಸ್ಕ್ ಗಳನ್ನು ಸರಬರಾಜು ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.

ಭಾರತದಲ್ಲಿ ಒಂದೇ ದಿನ 20,903 ಪ್ರಕರಣ ದೃಢ

ಭಾರತದಲ್ಲಿ ಒಂದೇ ದಿನ 20,903 ಪ್ರಕರಣ ದೃಢ

ದೇಶದಲ್ಲಿ ಒಂದೇ ದಿನ 20,903 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6,25,544ಕ್ಕೆ ಏರಿಕೆಯಾಗಿದೆ. ಈ ಪೈಕಿ 22,74,439 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 3,79,892 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ ಗುಣಮುಖ ಪ್ರಕರಣಗಳ ಪ್ರಮಾಣ ಶೇ.60.73ಕ್ಕೆ ಏರಿಕೆಯಾಗಿದೆ. ಇನ್ನು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,41,576 ಮಂದಿಯ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ.

English summary
One Crore PPE Kits, Two Crore N95 Masks Distributed To States Free Of Cost In Last Three Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X