ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃದಯದಲ್ಲಿ ಸಮಸ್ಯೆಯಿರುವ ಈ ಪುಟ್ಟ ಮಗುವಿಗೆ ನೆರವಾಗಿ...

Google Oneindia Kannada News

ಎಲ್ಲರಂತೆ ಈ ಪೋಷಕರು ಕೂಡ ತಮ್ಮ ಮಗು ಆರೋಗ್ಯವಾಗಿ ಹುಸಟ್ಟಿದರೆ ಸಾಕು ಎಂದುಕೊಂಡಿದ್ದರು. ಹಾಗೆ ಮಗುವೂ ಆರೋಗ್ಯವಾಗಿಯೇ ಜನಿಸಿತು. ಆದರೆ ಐದು ತಿಂಗಳಾಗುತ್ತಿದ್ದಂತೆ ಮಗುವಿನಲ್ಲಿ ಸಣ್ಣದಾಗಿ ಉಸಿರಾಟ ಸಮಸ್ಯೆ ಶುರುವಾಯಿತು. ಆ ಸಮಸ್ಯೆ ದಿನಗಳೆದಂತೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು ಕೂಡ.

ಇದೀಗ ದೇವಾಂಶ್‌ಗೆ ಒಂದೂವರೆ ವರ್ಷ. 2019ರಲ್ಲಿ ಹುಟ್ಟಿದ ದೇವಾಂಶ್‌ಗೆ ಉಸಿರಾಟದಲ್ಲಿ ತೀವ್ರ ಕಷ್ಟ ಕಾಣಿಸಿಕೊಂಡಿದೆ. ಎದೆಯಲ್ಲಿ ಕಫ ತುಂಬಿಕೊಂಡಿದ್ದು, ಚಿಕಿತ್ಸೆ ನಡೆಸಲೇಬೇಕಾದ ಅನಿವಾರ್ಯತೆ ಬಂದಿದೆ. ಅಪರೂಪದ ಹೃದಯ ಸಮಸ್ಯೆಯಿಂದ ಈ ಪುಟಾಣಿ ಬಳಲುತ್ತಿದ್ದು, ಪೋಷಕರಿಗೆ ಆರ್ಥಿಕವಾಗಿ ದುರ್ಬಲರಾಗಿರುವ ಕಾರಣ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ನೆರವು ಈ ಪುಟ್ಟ ಜೀವವನ್ನು ಉಳಿಸಬಹುದಾಗಿದೆ.

 ಮಗುವಿಗೆ ಉಸಿರಾಟದಲ್ಲಿ ತೊಂದರೆ

ಮಗುವಿಗೆ ಉಸಿರಾಟದಲ್ಲಿ ತೊಂದರೆ

ದೇವಾಂಶ್ ಪೋಷಕರಾದ ನಾಗರಾಜನ್ ಹಾಗೂ ರಾಜೇಶ್ವರಿ ಆಂಧ್ರದ ಅನಂತಪುರ ಜಿಲ್ಲೆಯ ಗುಟ್ಟಿಮಂಡಲ್‌ನವರು. ತಮ್ಮ ಮಗುವಿಗೆ ಉಸಿರಾಡಲು ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದಂತೆ ಅವರು ಮೊದಲು ಹೋಗಿದ್ದು ಅನಂತಪುರ ಜಿಲ್ಲಾಸ್ಪತ್ರೆಗೆ. ಅಲ್ಲಿ ವೈದ್ಯರು ಪರಿಶೀಲನೆ ನಡೆಸಿ, ಇದು ಹೃದಯ ನಾಳದ ವ್ಯವಸ್ಥೆಯಲ್ಲಿನ ಸಮಸ್ಯೆ (chest congestion) ಎಂದು ತಿಳಿಸಿ, ಚೆನ್ನೈನಲ್ಲಿನ ಮಕ್ಕಳ ಆಸ್ಪತ್ರೆಯಲ್ಲಿ ತೋರಿಸುವಂತೆ ಹೇಳಿದರು. ಅದರಂತೆ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

 ಶಸ್ತ್ರಚಿಕಿತ್ಸೆಗೆ ಸೂಚಿಸಿರುವ ವೈದ್ಯರು

ಶಸ್ತ್ರಚಿಕಿತ್ಸೆಗೆ ಸೂಚಿಸಿರುವ ವೈದ್ಯರು

ಈ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಚೆನ್ನೈನ MIOT ಆಸ್ಪತ್ರೆಗೆ ಬರುವಂತೆ ನಿರ್ದೇಶನ ನೀಡಲಾಗಿದೆ. ಉಸಿರಾಟದ ನೆರವಿಗೆ ನಾಳ ಅಳವಡಿಸಿದ್ದು, ಇಲ್ಲಿಯವರೆಗೂ ನಿರ್ವಹಣೆ ಮಾಡಲಾಗಿದೆ. ಆದರೆ ಈಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲೇಬೇಕೆಂದು ಪೋಷಕರಿಗೆ ಸೂಚಿಸಿದ್ದಾರೆ.

 ಅಪರೂಪದ ಹೃದಯ ಸಮಸ್ಯೆ

ಅಪರೂಪದ ಹೃದಯ ಸಮಸ್ಯೆ

ಹೃದಯ ಹಾಗೂ ಶ್ವಾಸಕೋಶದ ರಕ್ತನಾಳಗಳಲ್ಲಿ ತೊಂದರೆ ಕಾಣಿಸಿಕೊಳ್ಳುವ Scimitar syndrome ಸಮಸ್ಯೆ ಮಗುವಿನಲ್ಲಿದ್ದು, ಭಾಗಶಃ ಶ್ವಾಸಕೋಶ ನಾಳದ ತೊಂದರೆ (Two systemic collaterals from abdominal Aorta to R Lower lobe), ಹೃದಯದಲ್ಲಿ ಕಾಣಿಸಿಕೊಳ್ಳುವ ಅಪರೂಪದ ಸಮಸ್ಯೆ ಮಗುವಿನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದಕ್ಕೆ ಎಲೆಕ್ಟಿವ್ ಶಸ್ತ್ರಚಿಕಿತ್ಸೆ ನಡೆಸಬೇಕಿದ್ದು, ಶ್ವಾಸಕೋಶದ ರಕ್ತನಾಳಗಳ ಮರುಹೊಂದಿಸುವಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Recommended Video

Rohini Sindhuri ಪರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೂಗು | Oneindia Kannada
 ಚಿಕಿತ್ಸೆಗೆ 3,00,000 ರೂ ಅಗತ್ಯವಿದೆ

ಚಿಕಿತ್ಸೆಗೆ 3,00,000 ರೂ ಅಗತ್ಯವಿದೆ

ಆದರೆ ಐಸಿಯು, ಶಸ್ತ್ರಚಿಕಿತ್ಸೆ ಔಷಧಗಳು ಸೇರಿ ಸುಮಾರು 3,00,000 ರೂ ಖರ್ಚಾಗಲಿದ್ದು, ಕ್ಯಾಬ್ ಡ್ರೈವರ್ ಆಗಿರುವ ನಾಗರಾಜನ್ ಅವರಿಗೆ ಈ ಹಣವನ್ನು ಭರಿಸಲು ಸಾಧ್ಯವಿಲ್ಲ. ಜೊತೆಗೆ ಕೊರೊನಾ ಸೋಂಕಿನ ಲಾಕ್‌ಡೌನ್ ಕೂಡ ಅವರ ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ತಮ್ಮ ಮಗುವನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಿರುವ ಈ ಪೋಷಕರಿಗೆ ನಿಮ್ಮ ನೆರವಿನ ಅಗತ್ಯವಿದೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X