• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರವಾ ಇಡ್ಲಿಗೂ ವಿಶ್ವಯುದ್ಧಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ?

By ಅನುಶಾ ರವಿ
|

ಇಡ್ಲಿ ಎಂಬ ಮಲ್ಲಿಗೆ ಬಣ್ಣದ, ಮೃದು ಖಾದ್ಯದ ಮಹಿಮೆ ವರ್ಣಿಸಲಸದಳ! ದಕ್ಷಿಣ ಭಾರತದ ಪ್ರಸಿದ್ಧ ತಿಂಡಿಯಾದ ಇಡ್ಲಿ ಆರೋಗ್ಯಕ್ಕೂ ಹಿತಕರ ಎಂಬ ಕಾರಣಕ್ಕೆ ಇಡ್ಲಿಪ್ರೇಮಿಗಳ ಸಂಖ್ಯೆ ಹೆಚ್ಚು.

ಬಿಸಿ ಬಿಸಿ ಇಡ್ಲಿಗೆ, ರುಚಿ ರುಚಿ ಚಟ್ನಿ ಇದ್ದುಬಿಟ್ಟರೆ, 'ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು...' ಎಂಬ ಜಯಂತ್ ಕಾಯ್ಕಿಣಿ ಅವರ ಹಾಡು ಅರಿವಿಲ್ಲದೆ ನಾಲಿಗೆಯ ಮೇಲೆ ಹರಿದಾಡುತ್ತದೆ.[ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..]

ಆ ರುಚಿಯನ್ನು ಸವಿದವನೇ ಬಲ್ಲ! ಇಂತಿಪ್ಪ ಇಡ್ಲಿಯ ಹಿಂದೆ ಹಲವಾರು ಕುತೂಹಲಕರ ಕತೆಯೇ ಇದೆ ಎಂದರೆ ನಂಬುತ್ತೀರಾ? ಇಂದು (ಮಾರ್ಚ್ 30) ವಿಶ್ವ ಇಡ್ಲಿ ದಿನ. ಈ ಹಿನ್ನೆಲೆಯಲ್ಲಿ ಇಡ್ಲಿ ಎಂಬ ಸರಳ, ಆರೋಗ್ಯಕರ, ರುಚಿಕರ ಖಾದ್ಯದ ಕುರಿತ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ.

ರವೆ ಇಡ್ಲಿ ಮತ್ತು ವಿಶ್ವಯುದ್ಧ!

ರವೆ ಇಡ್ಲಿ ಮತ್ತು ವಿಶ್ವಯುದ್ಧ!

ರವೆ ಇಡ್ಲಿ ಅಂದ್ರೆ ದಕ್ಷಿಣ ಭಾರತದ ಮಹಿಳೆಯರಿಗೆ ಅಚ್ಚುಮೆಚ್ಚು. ಯಾಕಂದ್ರೆ ಪಟಾಪಟ್ ಅಂತ ಮಾಡಬಹುದಾದ ಸರಳ ಖಾದ್ಯ ಅದೇ ತಾನೇ! ಈ ರವೆ ಇಡ್ಲಿಯ ಪರಿಕಲ್ಪನೆ ಮೊಟ್ಟ ಮೊದಲ ಬಾರಿಗೆ ಪರಿಚಯಕ್ಕೆ ಬಂದಿದ್ದು ವಿಶ್ವಯುದ್ಧದ ಸಮಯದಲ್ಲಂತೆ! ಆ ಸಮಯದಲ್ಲಿ ಅಕ್ಕಿಯ ಪೂರೈಕೆ ಕಡಿಮೆ ಇದ್ದಿದ್ದರಿಂದ ಅಕ್ಕಿಯ ಬದಲು ಪರ್ಯಾಯ ಉಪಾಯವಾಗಿ ಕಂಡಿದ್ದು ರವೆ. ಈ ಸಂದರ್ಭದಲ್ಲಿ ಚಾಲ್ತಿಗೆ ಬಂದ ರವಾ ಇಡ್ಲಿ ಇಂದಿಗೂ ಬಹುಪಾಲು ಜನರ ಅಚ್ಚುಮೆಚ್ಚಿನ ಖಾದ್ಯವಾಗಿದೆ.

'ಇತಿಹಾಸದಲ್ಲಿ ಇಡ್ಲಿ

'ಇತಿಹಾಸದಲ್ಲಿ ಇಡ್ಲಿ

ಕ್ರಿ.ಪೂ.920 ರ ಶಿವಕೋಟ್ಯಾಚಾರ್ಯ ಎಂಬ ಕವಿ ಬರೆದಿದ್ದು ಎನ್ನಲಾದ "ವಡ್ಡಾರಾಧನೆ" ಕೃತಿಯಲ್ಲೂ ಇಡ್ಲಿಯ ಉಲ್ಲೇಖವಿದೆ! ಇಡ್ಡಲಿಗೆ ಎಂಬ ಖಾದ್ಯವೊಂದರ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದ್ದು, ಇಂದಿನ ಇಡ್ಲಿಯನ್ನೇ ಅದು ಹೋಲುತ್ತದೆ. ಆದರೆ ಆಗಿನ ಕಾಲದಲ್ಲಿ ಕೇವಲ ಉದ್ದಿನ ಕಾಳಿನಿಂದ ಮಾತ್ರವೇ ಇದನ್ನು ತಯಾರಿಸಲಾಗುತ್ತಿತ್ತು.[ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!]

ಇದ್ದರಿಕಾ ಮತ್ತು ಇಡ್ಲಿ!

ಇದ್ದರಿಕಾ ಮತ್ತು ಇಡ್ಲಿ!

ರಾಜ ಮೂರನೆಯ ಸೋಮೇಶ್ವರನೂ ತನ್ನ "ಮಾನಸೋಲ್ಲಾಸ" ಕೃತಿಯಲ್ಲಿ ಇದ್ದರಿಕಾ ಎಂದು ಉಲ್ಲೇಖಿಸಿದ್ದು, ಇದು ಇಡ್ಲಿಯ ಬಗ್ಗೆಯೇ ಬರೆದ ಸಾಲು ಎನ್ನಲಾಗಿದೆ. ಕ್ರಿ.ಶ. 1250 ರಲ್ಲಿ ಮೊಟ್ಟ ಮೊದಲ ಬಾರಿಗೆ ಅಕ್ಕಿಯನ್ನು ಬಳಸಿ ಇಡ್ಲಿ ತಯಾರಿಸುವುದನ್ನು ಕಲಿಯಲಾಯ್ತು! "ವರುಣಕ ಸಮುಚ್ಚಯ" ಎಂಬ ಗುಜರಾತಿ ಕೃತಿಯೊಂದರಲ್ಲೂ ಇಡ್ಲಿಯ ಉಲ್ಲೇಖವಿದೆ.

ತರಹೇವಾರಿ ಇಡ್ಲಿಗಳು!

ತರಹೇವಾರಿ ಇಡ್ಲಿಗಳು!

ಇಡ್ಲಿ ಎಂದರೆ ಕಡಿಮೆಯೇ? ಅದರಲ್ಲಿ ತರಹೇವಾರಿ ವಿಧಗಳೇ ಇವೆ. ರವೆ ಇಡ್ಲಿ, ಉದ್ದಿನ ಇಡ್ಲಿ, ರಾಗಿ ಇಡ್ಲಿ, ಅಕ್ಕಿ ಇಡ್ಲಿ... ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕರ್ನಾಟಕದಲ್ಲಂತೂ ಹಲವು ಹೊಟೇಲ್ ಗಳು ಇಡ್ಲಿಯಿಂದಲೇ ಪ್ರಸಿದ್ಧಿ ಪಡೆದಿವೆ.

ರೂಪಾಂತರವೂ ಆಗುತ್ತೆ ಇಡ್ಲಿ!

ರೂಪಾಂತರವೂ ಆಗುತ್ತೆ ಇಡ್ಲಿ!

ಅಕಸ್ಮಾತ್ ಮಾಡಿದ್ದ ಇಡ್ಲಿ ಹೆಚ್ಚಾಯ್ತು ಅಂದ್ರೆ ಅದನ್ನೇ ಪುಡಿ ಪುಡಿ ಮಾಡಿ ತಾಜಾ ಉಪ್ಪಿಟ್ಟು ಮಾಡಿಬಿಟ್ಟರೆ ರುಚಿಯೋ ರುಚಿ! ಇಡ್ಲಿ ಬೋಂಡಾ ಸಹ ಅಷ್ಟೇ ರುಚಿಕಟ್ಟಾಗಿರುತ್ತೆ! ದಕ್ಷಿಣ ಭಾರತೀಯರು ತಾಯ್ನೆಲವನ್ನು ಬಿಟ್ಟು ಎಲ್ಲಿಗೇ ಹೋಗಿದ್ದರೂ "ವಾಪಾಸ್ ಹೋಗಿ ಇಡ್ಲಿ ತಿಂದ್ರೆನೇ ಸಮಾಧಾನ" ಎನ್ನುವಷ್ಟರ ಮಟ್ಟಿಗೆ ಇಡ್ಲಿ ಕಮಾಲ್ ಮಾಡಿರೋದು ನಿಜ!

English summary
For centuries, the humble idli has been more than mere food. Deemed as one of the healthiest, nutritious simple food items, idli's journey has been a long yet exciting one. There are many versions of this white wonder that has been reinvented over the centuries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more