ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರರೇ.. ರಾಹುಲ್ ಗಾಂಧಿ ಹುಟ್ಟಿದ ಹಬ್ಬಕ್ಕೆ ಹೀಗೂ ವಿಷ್ ಮಾಡಬಹುದು!

|
Google Oneindia Kannada News

ಇವತ್ತಿಗೆ (ಜೂ 19) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ವಯಸ್ಸು ಒಂದು ವರ್ಷ ಜಾಸ್ತಿಯಾಗಿದೆ. ಯುವರಾಜರಿಗೆ ಶುಭಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಕೂಡಾ ರಾಹುಲ್ ಗಾಂಧಿಗೆ ವಿಷ್ ಮಾಡಿದ್ದಾಗಿದೆ.

ಈ ನಡುವೆ, ಕಾಂಗ್ರೆಸ್ ಭಿನ್ನಮತೀಯ ನಾಯಕ ಶೆಹಜಾದ್ ಪೂನಾವಾಲ, ರಾಹುಲ್ ಗಾಂಧಿಗೆ ಶುಭಾಶಯ ಕೋರುತ್ತಾ, ಕಾಲೆಳೆದಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ, ರಾಹುಲ್ ಗಾಂಧಿಯನ್ನು ಟೀಕಿಸುವ ಪೂನಾವಾಲ, ಬರ್ಥಡೇಗೆ ವಿಷ್ ಮಾಡಿದ್ದು ಹೀಗೆ..

ರಾಹುಲ್ ಜನ್ಮದಿನಕ್ಕೆ ಅಭಿಮಾನಿಗಳ ಶುಭಹಾರೈಕೆಯ ಮಹಾಪೂರರಾಹುಲ್ ಜನ್ಮದಿನಕ್ಕೆ ಅಭಿಮಾನಿಗಳ ಶುಭಹಾರೈಕೆಯ ಮಹಾಪೂರ

" ರಾಹುಲ್ ಗಾಂಧಿಯವರೇ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮ್ಮ ವಯಸ್ಸು ಅರ್ಥ ಶತಕದತ್ತ ತಲುಪುತ್ತಿದೆ. ನಿಮಗೆ ಇನ್ನೂ ಹೆಚ್ಚಿನ ಆಯಸ್ಸನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 2019ರಲ್ಲಿ, ಈಗ ಬಲವಂತದಿಂದ ಮಾಡುತ್ತಿರುವ ಕೆಲಸವನ್ನು ಬಿಟ್ಟು ನೀವು ಬಯಸಿದ್ದ ವೃತ್ತಿಯಲ್ಲಿ ಮುಂದುವರಿಯುವಂತಾಗಲಿ"

On AICC President Rahul Gandhi birthday, Shehzad Poonawalla shows how someone can wish differently

ರಾಹುಲ್ ಗಾಂಧಿ ಮತ್ತೊಮ್ಮೆ ಹಾಸ್ಯದ ವಸ್ತುವಾಗಿದ್ದಾರೆ ಎನ್ನುವ ವಾಹಿನಿಯ ಟ್ವೀಟ್ ಒಂದನ್ನು, ತಮ್ಮ ಟ್ವೀಟಿಗೆ ಜೋಡಿಸಿ, ಪೂನಾವಾಲ ಮೇಲಿನಂತೆ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟಿಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ರಾಹುಲ್ ರನ್ನು ಪ್ರಧಾನಿಯಾಗಿ ನೋಡುವಾಸೆ: ಬಿಜೆಪಿ ಮಾಜಿ ನಾಯಕರಾಹುಲ್ ರನ್ನು ಪ್ರಧಾನಿಯಾಗಿ ನೋಡುವಾಸೆ: ಬಿಜೆಪಿ ಮಾಜಿ ನಾಯಕ

ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಬಂಡಾಯ ನಾಯಕ ಶೆಹಜಾದ್ ಪೂನಾವಾಲ ಈ ಹಿಂದೆ, ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ಕಿಡಿಕಾರಿದ್ದರು. ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಜವಾದ ಚುನಾವಣೆಯೇ ಅಲ್ಲ ಅದೊಂದು ಸಿಲೆಕ್ಷನ್ ಪ್ರಕ್ರಿಯೆ, ಅದೊಂದು ಫಿಕ್ಸಿಂಗ್ ಎಂದು ಪೂನಾವಾಲ ಟೀಕಿಸಿದ್ದರು.

On AICC President Rahul Gandhi birthday, Shehzad Poonawalla shows how someone can wish differently

ಪೂನಾವಾಲ ಮಾಡಿರುವ ಟ್ವೀಟಿಗೆ ಬಂದಂತಹ ಕೆಲವೊಂದು ಪ್ರತಿಕ್ರಿಯೆಗಳು ಹೀಗಿವೆ, ' ರಾಹುಲ್ ಅವರಿಗೆ ಮತ್ಯಾವ ವೃತ್ತಿ ಸರಿಹೊಂದಬಹುದು', ' ಅವರು ರಾಜಕೀಯ ಬಿಟ್ಟರೆ, ಬಿಜೆಪಿ ಪರ ಪ್ರಚಾರ ಮಾಡುವವರು ಯಾರು'..

'ರಾಹುಲ್ ಅವರಿಗೆ ಮುಂದಿನ ವರ್ಷ 49 ವಯಸ್ಸಾಗುತ್ತದೆ, ಕಾಂಗ್ರೆಸ್ ಸಂಸದರ ಸಂಖ್ಯೆಯೂ ಅದಕ್ಕೆ ಹೊಂದುವಂತಾಗಬೇಕು', 'ಕಪಿಲ್ ಶರ್ಮಾ ಅವರನ್ನು ಮೀರಿಸುವ ಕಾಮಿಡಿಯನ್ ರಾಹುಲ್ ಆಗುತ್ತಾರೆ', ಈ ರೀತಿಯ ಪ್ರತಿಕ್ರಿಯೆಗಳು ಪೂಲಾವಾಲ ಟ್ವೀಟಿಗೆ ಹರಿದುಬಂದಿದೆ.

English summary
On AICC President Rahul Gandhi birthday, rebel Congress leader from Maharashtra, Shehzad Poonawalla shows how someone can wish differently. Poonawalla tweeted with attached link to an unflattering news story, a compilation of memes mocking Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X