ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ, ಬೀಟಾಗೆ ಹೋಲಿಸಿದರೆ ಓಮಿಕ್ರಾನ್ ಮರುಸೋಂಕಿನ ಪ್ರಮಾಣ 3 ಪಟ್ಟು!

|
Google Oneindia Kannada News

ನವದೆಹಲಿ, ನವೆಂಬರ್ 3: ಕೊರೊನಾವೈರಸ್ ಸೋಂಕಿನ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರವು ಮರು ಸೋಂಕಿನ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ನಡೆಸಿರುವ ಪ್ರಾಥಮಿಕ ಅಧ್ಯಯನ ವರದಿಯಿಂದ ತಿಳಿದು ಬಂದಿದೆ. ಗುರುವಾರ ಪ್ರಕಟಿಸಿದ ತಜ್ಞರ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ.

ದಕ್ಷಿಣ ಆಫ್ರಿಕಾದ ಆರೋಗ್ಯ ವ್ಯವಸ್ಥೆಯು ಸಾಂಕ್ರಾಮಿಕ ರೋಗಶಾಸ್ತ್ರಜ್ಞರಿಗೆ ಒದಗಿಸಿದ ಮಾಹಿತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ. ಮೊದಲು ಕೊವಿಡ್-19 ಸೋಂಕು ಪತ್ತೆಯಾಗಿದ್ದ ವ್ಯಕ್ತಿಗಳ ಮೇಲೆ ಓಮಿಕ್ರಾನ್ ರೂಪಾಂತರ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ಮಧ್ಯಭಾಗದಲ್ಲಿ ದಿನಕ್ಕೆ 300 ಕೊವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಕಳೆದ ಸೋಮವಾರ ಒಂದೇ ದಿನ 2,273 ಮಂದಿಗೆ ಸೋಂಕು ಪತ್ತೆಯಾಗಿದ್ದರೆ, ಮಂಗಳವಾರ 4,373 ಜನರಲ್ಲಿ ಸೋಂಕು ದೃಢಪಟ್ಟಿದೆ. ಮರುದಿನ ಸೋಂಕಿತರ ಸಂಖ್ಯೆ ಡಬಲ್ ಆಗಿದ್ದು, ಒಂದೇ ದಿನ 8,561 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಓಮಿಕ್ರಾನ್ ಕೇಸ್: ಯಾರಿಗೂ ತೀವ್ರತೆ ಇಲ್ಲ, ಆತಂಕ ಬೇಡರಾಜ್ಯದಲ್ಲಿ ಓಮಿಕ್ರಾನ್ ಕೇಸ್: ಯಾರಿಗೂ ತೀವ್ರತೆ ಇಲ್ಲ, ಆತಂಕ ಬೇಡ

ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ 27ರ ಅಂಕಿ-ಅಂಶಗಳ ಪ್ರಕಾರ, 28 ಲಕ್ಷ ಸೋಂಕಿತರ ಪೈಕಿ 35,670 ಮಂದಿಗೆ ಮರುಸೋಂಕು ಅಂಟಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಒಂದು ಬಾರಿ ಕೊವಿಡ್-19 ಸೋಂಕು ತಗುಲಿದ ವ್ಯಕ್ತಿಯು ಗುಣಮುಖರಾದ 90 ದಿನಗಳ ನಂತರ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡರೆ ಅದನ್ನು ಮರುಸೋಂಕು ಎಂದು ಪರಿಗಣಿಸಲಾಗುತ್ತದೆ. ಹೀಗೆ ಮರು ಸೋಂಕಿನ ಸಾಮರ್ಥ್ಯವು ಡೆಲ್ಟಾ ಮತ್ತು ಬೀಟಾಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರದಲ್ಲಿ ಮೂರು ಪಟ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

ಮರು ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ

ಮರು ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರು ಅಲೆಗಳಲ್ಲಿ ಪ್ರಾಥಮಿಕ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಇತ್ತೀಚಿಗೆ ಮರುಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಈ ಪೈಕಿ ಡೆಲ್ಟಾ ರೂಪಾಂತರದ ಅಲೆಯಲ್ಲಿ ಸೋಂಕು ತಗುಲಿದವರ ಸಂಖ್ಯೆಯೇ ಹೆಚ್ಚಾಗಿದೆ," ಎಂದು ದಕ್ಷಿಣ ಆಫ್ರಿಕಾದ DSI-NRF ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಪಿಡೆಮಿಯೋಲಾಜಿಕಲ್ ಮಾಡೆಲಿಂಗ್ ಮತ್ತು ಅನಾಲಿಸಿಸ್‌ನ ನಿರ್ದೇಶಕ ಜೂಲಿಯೆಟ್ ಪುಲ್ಲಿಯಂ ಟ್ವೀಟ್ ಮಾಡಿದ್ದಾರೆ.

ಪ್ರಾಥಮಿಕ ಹಂತದಲ್ಲಿ ಲಸಿಕೆ ಸ್ಥಿತಿಯ ಬಗ್ಗೆ ಮಾಹಿತಿಯಿಲ್ಲ

ಪ್ರಾಥಮಿಕ ಹಂತದಲ್ಲಿ ಲಸಿಕೆ ಸ್ಥಿತಿಯ ಬಗ್ಗೆ ಮಾಹಿತಿಯಿಲ್ಲ

ಕೊರೊನಾವೈರಸ್ ಮರುಸೋಂಕು ಅಂಟಿಕೊಂಡಿರುವವರು ಲಸಿಕೆ ಪಡೆದುಕೊಂಡಿರುವ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ದರಿಂದ ಕೊವಿಡ್-19 ಲಸಿಕೆಯು ಒದಗಿಸುವ ಪ್ರತಿರಕ್ಷಣೆಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ, ಓಮಿಕ್ರಾನ್ ರೂಪಾಂತರವು ಲಸಿಕೆಯ ಪ್ರತಿರಕ್ಷಣೆಯನ್ನು ತಪ್ಪಿಸಲು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಲಿದ್ದಾರೆ ಎಂದು ಪುಲ್ಲಿಯಂ ತಿಳಿಸಿದ್ದಾರೆ.

ಕೊವಿಡ್-19 ಸೋಂಕಿನ ಹಿನ್ನೆಲೆಯುಳ್ಳವರ ಮಾಹಿತಿ ಅಗತ್ಯ

ಕೊವಿಡ್-19 ಸೋಂಕಿನ ಹಿನ್ನೆಲೆಯುಳ್ಳವರ ಮಾಹಿತಿ ಅಗತ್ಯ

ಮುಂದಿನ ಅಧ್ಯಯನವನ್ನು ನಡೆಸುವುದಕ್ಕೆ ಈ ಮೊದಲು ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದವರು ಹಾಗೂ ಓಮಿಕ್ರಾನ್ ರೂಪಾಂತರ ಸೋಂಕು ಅಂಟಿಕೊಂಡವರ ಆರೋಗ್ಯ ಸ್ಥಿತಿ ಮತ್ತು ಬದಲಾವಣೆ ಕುರಿತು ಮಾಹಿತಿ ಸಂಗ್ರಹಿಸುವುದು ತುರ್ತು ಅಗತ್ಯವಾಗಿದೆ. ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಮೈಕೆಲ್ ಹೆಡ್, ಇದನ್ನು ಉತ್ತಮ ಗುಣಮಟ್ಟದ ಸಂಶೋಧನೆ ಎಂದು ಶ್ಲಾಘಿಸಿದ್ದಾರೆ. ಈ ಮೊದಲಿನ ಸೋಂಕಿಗೆ ಹೋಲಿಸಿದರೆ ಪ್ರತಿರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಉಳಿದಂತೆ ಎಲ್ಲವೂ ಸುಳ್ಳು ಎಚ್ಚರಿಕೆ ಆಗಿದ್ದು, ಅದರ ಪ್ರಭಾವ ಬಹಳ ಕಡಿಮೆಯಾಗಿ ಗೋತಚರಿಸುತ್ತಿದೆ ಎಂದು ಹೇಳಿದರು.

ಕೊರೊನಾವೈರಸ್ ಲಸಿಕೆಗಳು ಇಂದಿಗೂ ಪರಿಣಾಮಕಾರಿ

ಕೊರೊನಾವೈರಸ್ ಲಸಿಕೆಗಳು ಇಂದಿಗೂ ಪರಿಣಾಮಕಾರಿ

ಜಾಗತಿಕ ಮಟ್ಟದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುವ ಮೂನ್ಸೂಚನೆಯಿದೆ. ಆದರೆ ಕೊರೊನಾವೈರಸ್ ಲಸಿಕೆಗಳು ಇನ್ನೂ ಕೆಲವು ರೂಪಾಂತರ ತಳಿಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್‌ನ ಪರಿಣಿತರು ಹಾಗೂ ದಕ್ಷಿಣ ಆಫ್ರಿಕಾದ ಉನ್ನತ ವಿಜ್ಞಾನಿ ಅನ್ನಿ ವಾನ್ ಗಾಟ್‌ಬರ್ಗ್ ಹೇಳಿದ್ದಾರೆ. "ದೇಶದ ಎಲ್ಲಾ ಪ್ರಾಂತ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂಬುದನ್ನು ನಾವು ನಂಬುತ್ತೇವೆ. ಇದರ ಜೊತೆಗೆ ಲಸಿಕೆಗಳು ಇಂದಿಗೂ ಕೆಲವು ರೂಪಾಂತರಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಎಂದು ವಿಶ್ವಾಸವನ್ನು ಹೊಂದಿದ್ದೇವೆ. ಲಸಿಕೆಗಳು ಗಂಭೀರ ಅನಾರೋಗ್ಯ ಮತ್ತು ಸಾವಿನ ಅಪಾಯದಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ," ಎಂದು ಅವರು ಹೇಳಿದ್ದಾರೆ.

English summary
Omicron variant is three times more cause reinfection compared to the Delta or Beta strains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X