ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಅಪಾಯದಿಂದ ಪಾರಾಗಬೇಕೇ, ಮೊದಲು ಪ್ರಜೆಗಳಿಗೆ ಲಸಿಕೆ ನೀಡಿ: WHO

|
Google Oneindia Kannada News

ನವದೆಹಲಿ, ನವೆಂಬರ್ 3: ಕೊರೊನಾವೈರಸ್ ಸೋಂಕಿನ ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೂಪಾಂತರವು ಮರು ಸೋಂಕಿನ ಪ್ರಮಾಣವು ಮೂರು ಪಟ್ಟು ಹೆಚ್ಚಾಗಿದೆ. ಜನರಲ್ಲಿ ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಶುಕ್ರವಾರ ಹೇಳಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವುದರ ಹೊರತಾಗಿಯೂ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಹರಡುವಿಕೆ ವೇಗ ಹೆಚ್ಚಾಗಲಿದೆ. ಹಲವು ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುವ ಅಪಾಯವಿದೆ.

ಡೆಲ್ಟಾ, ಬೀಟಾಗೆ ಹೋಲಿಸಿದರೆ ಓಮಿಕ್ರಾನ್ ಮರುಸೋಂಕಿನ ಪ್ರಮಾಣ 3 ಪಟ್ಟು!ಡೆಲ್ಟಾ, ಬೀಟಾಗೆ ಹೋಲಿಸಿದರೆ ಓಮಿಕ್ರಾನ್ ಮರುಸೋಂಕಿನ ಪ್ರಮಾಣ 3 ಪಟ್ಟು!

ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ವಿರುದ್ಧ ಹೋರಾಡುವುದಕ್ಕೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆ ನಿಮ್ಮ ದೇಶಗಳಲ್ಲಿ ಪ್ರಜೆಗಳಿಗೆ ಸಂಪೂರ್ಣ ಲಸಿಕೆ ವಿತರಿಸುವತ್ತ ಹೆಚ್ಚು ಲಕ್ಷ್ಯವನ್ನು ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ. ಓಮಿಕ್ರಾನ್ ಸೋಂಕಿನ ಹರಡುವಿಕೆ ಮತ್ತು ಲಸಿಕೆಗೆ ಆದ್ಯತೆ ನೀಡುವುದರ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಸೂಚನೆಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

Omicron threat: WHO says Asia-Pacific to be worrying gaps

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳು:

* ಓಮಿಕ್ರಾನ್ ರೂಪಾಂತರದಲ್ಲಿ ಹೆಚ್ಚಿನ ಅಪಾಯ ಎದುರಿಸುತ್ತಿರುವ ದಕ್ಷಿಣ ಆಫ್ರಿಕನ್ ದೇಶಗಳಿಂದ ಪ್ರಯಾಣಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಗಡಿನ್ನು ಬಂದ್ ಮಾಡಿದ್ದರೂ ಸಹಿತ ಯುಎಸ್ ಐದು ರಾಜ್ಯಗಳಲ್ಲಿ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ಸಮುದಾಯದ ಮಟ್ಟದಲ್ಲಿ ಸೋಂಕು ಹರಡುತ್ತಿರುವುದು ವರದಿಯಾಗಿದೆ.

* ಭಾರತ, ಜಪಾನ್, ಮಲೇಷ್ಯಾ, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾದಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಈ ವಾರ ಏಷ್ಯಾದ ರಾಷ್ಟ್ರಗಳಿಗೂ ಪ್ರವೇಶಿಸಿದೆ. ಹೊಸ ರೂಪಾಂತರವನ್ನು ನಿಯಂತ್ರಿಸಲು ಅನೇಕ ಸರ್ಕಾರಗಳು ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿವೆ. ಆದರೆ ಸುಮಾರು 650 ದಶಲಕ್ಷ ಜನಸಂಖ್ಯೆ ಹೊಂದಿರುವ ಏಷ್ಯಾ-ಪೆಸಿಫಿಕ್‌ನಲ್ಲಿ ಗಡಿ ನಿಯಂತ್ರಣವು ಸೋಂಕು ಹರಡುವಿಕೆಯ ಸಮಯವನ್ನು ಮುಂದೂಡುತ್ತದೆ ಅಷ್ಟೇ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

* "ಜನರು ಗಡಿ ಕ್ರಮಗಳನ್ನು ಮಾತ್ರ ಅವಲಂಬಿಸಬಾರದು" ಎಂದು ಪಶ್ಚಿಮ ಪೆಸಿಫಿಕ್‌ನ WHO ಪ್ರಾದೇಶಿಕ ನಿರ್ದೇಶಕ ತಕೇಶಿ ಕಸಾಯಿ ತಿಳಿಸಿದ್ದಾರೆ. ವೇಗವಾಗಿ ಹರಡುವ ಈ ರೂಪಾಂತರವನ್ನು ನಿಯಂತ್ರಿಸಲು ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯು ನಾವು ನಮ್ಮ ವಿಧಾನವನ್ನು ಬದಲಾಯಿಸಬೇಕಾಗಿಲ್ಲ ಎಂದು ಸೂಚಿಸುತ್ತದೆ."

* ಏಷ್ಯಾ-ಪೆಸಿಫಿಕ್‌ನಲ್ಲಿ ಕೊವಿಡ್-19 ಲಸಿಕೆಯ ಪಡೆದವರ ಸಂಖ್ಯೆಯು ದೇಶದಿಂದ ದೇಶಕ್ಕೆ ಬದಲಾಗುತ್ತಿದ್ದು, ಅವುಗಳ ನಡುವೆ ಅಂತರ ಆತಂಕಕಾರಿಯಾಗಿದೆ. ವಿಶ್ವದ ನಾಲ್ಕನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಇಂಡೋನೇಷ್ಯಾ, ಒಂದು ಹಂತದಲ್ಲಿ ಏಷ್ಯಾದ COVID-19 ಸೋಂಕಿನ ಕೇಂದ್ರ ಬಿಂದುವಾಗಿತ್ತು. ದೇಶದ 270 ದಶಲಕ್ಷ ಜನಸಂಖ್ಯೆಯ ಶೇಕಡಾ 35ರಷ್ಟು ಜನರಿಗೆ ಮಾತ್ರ ಸಂಪೂರ್ಣ ಲಸಿಕೆಯನ್ನು ನೀಡಲಾಗಿದೆ.

* ಮುಂದಿನ ಕೆಲವೇ ತಿಂಗಳುಗಳಲ್ಲಿ ಓಮಿಕ್ರಾನ್ ರೂಪಾಂತರವು ಜಾಗತಿಕ ಮಟ್ಟದಲ್ಲಿ ಪ್ರಬಲವಾಗುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಮುಖ್ಯ ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ, ಆದರೆ ಈ ಹಂತದಲ್ಲಿ ಓಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ. "ಮುಂದಿನ ಕೆಲವು ತಿಂಗಳುಗಳಲ್ಲಿ ಓಮಿಕ್ರಾನ್ ವಿಶ್ವದ ಹೊಸ ವೈರಸ್ ಆಗಲಿದೆ ಎಂಬುದು ನನ್ನ ಅನುಮಾನ," ಎಂದು ಆಸ್ಟ್ರೇಲಿಯಾ ಸರ್ಕಾರದ ಉನ್ನತ ವೈದ್ಯಕೀಯ ಸಲಹೆಗಾರ ಪಾಲ್ ಕೆಲ್ಲಿ ತಿಳಿಸಿದ್ದಾರೆ.

* US ಗೆ ಆಗಮಿಸುವ ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರು, 24 ಗಂಟೆಗಳ ಒಳಗಿನ COVID-19 ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದಿರಬೇಕು. US ಜನಸಂಖ್ಯೆಯ ಶೇಕಡಾ 60ಕ್ಕಿಂತ ಕಡಿಮೆ ಅಥವಾ 196 ದಶಲಕ್ಷ ಜನರು ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ. ಶ್ರೀಮಂತ ರಾಷ್ಟ್ರಗಳಲ್ಲಿ ಅತ್ಯಂತ ಕಡಿಮೆ ಲಸಿಕೆ ಪಡೆದವರಲ್ಲಿ ಇದೂ ಒಂದಾಗಿದೆ.

* ಹಾಂಗ್ ಕಾಂಗ್, ನೆದರ್ ಲ್ಯಾಂಡ್, ನಾರ್ವೆ ಮತ್ತು ರಷ್ಯಾ, ಇತರ ರಾಷ್ಟ್ರಗಳೊಂದಿಗೆ ಜಾಗತಿಕ ಪ್ರಯಾಣದ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ಮಲೇಷ್ಯಾ ಶುಕ್ರವಾರ ಹೇಳಿದೆ.

* ಡೆಲ್ಟಾ ರೂಪಾಂತರದಿಂದ ಚೇತರಿಸಿಕೊಳ್ಳುತ್ತಿದ್ದ ಆರ್ಥಿಕತೆಗೆ ಓಮಿಕ್ರಾನ್ ಭಾರಿ ಹೊಡೆತ ಕೊಟ್ಟಿದೆ. ಪ್ರಯಾಣದ ಉದ್ಯಮಕ್ಕೆ ತೀವ್ರ ಹಿನ್ನಡೆಯಾಗಿದೆ. ವಾಲ್ ಸ್ಟ್ರೀಟ್ ನಲ್ಲಿ ತೀವ್ರ ನಷ್ಟದ ಬೆನ್ನಲ್ಲೇ ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಷೇರುಗಳ ಮೌಲ್ಯದಲ್ಲಿ ಶುಕ್ರವಾರ ಕುಸಿತ ಕಂಡು ಬಂದಿದೆ.

* ಯುರೋಪ್‌ನ ಅತಿದೊಡ್ಡ ಆರ್ಥಿಕತೆ ಆಗಿರುವ ಜರ್ಮನಿಯಲ್ಲಿ ಅಗತ್ಯ ವಸ್ತುಗಳ ವ್ಯಾಪಾರವನ್ನು ನಡೆಸಲು ಲಸಿಕೆ ಪಡೆದವರನ್ನು ಹೊರತುಪಡಿಸಿ ಉಳಿದ ಎಲ್ಲಾ ಅಗತ್ಯ ವ್ಯವಹಾರಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಕೊವಿಡ್-19 ಲಸಿಕೆಯನ್ನು ಕಡ್ಡಾಯಗೊಳಿಸುವ ಹೊಸ ಕಾನೂನನ್ನು ಮುಂದಿನ ವರ್ಷದ ಆರಂಭದಲ್ಲೇ ರಚಿಸಲಾಗುವುದು ಎಂದು ಜರ್ಮನಿ ಸರ್ಕಾರ ತಿಳಿಸಿದೆ.

* ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವಾರು ದೇಶಗಳು ಬೂಸ್ಟರ್ ಡೋಸ್ ನೀಡಲು ಪ್ರಸ್ತಾವನೆ ಇಡುತ್ತಿದೆ. ಆದರೆ, ಪ್ರಯಾಣ ನಿಷೇಧದ ರೀತಿಯಲ್ಲಿ ಇದೂ ಸಹ ವಿವಾದಾಸ್ಪದವಾಗಿದೆ. ಏಕೆಂದರೆ ಬೂಸ್ಟರ್ ಡೋಸ್ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಹೇಳುವುದಕ್ಕೆ "ಯಾವುದೇ ಪುರಾವೆಗಳಿಲ್ಲ" ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

English summary
Omicron threat: World Health Organisation warned Asia-Pacific countries boost healthcare capacity and fully vaccinate their people to prepare for a surge in COVID-19 cases. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X