ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್‌: 'ಯಾವುದೇ ಸಂದರ್ಭ ಎದುರಿಸಲು ಭಾರತ ಸಿದ್ಧವಾಗಿರಲಿ' ಎಂದ ಏಮ್ಸ್‌

|
Google Oneindia Kannada News

ನವದೆಹಲಿ, ಡಿಸೆಂಬರ್‌ 20: ವಿಶ್ವದಲ್ಲಿ ಓಮಿಕ್ರಾನ್ ಪ್ರಕರಣಗಳು ಏರಿಕೆ ಕಾಣುತ್ತಿದೆ. ದೇಶದಲ್ಲಿಯೂ ದಿನೇ ದಿನ ಹೆಚ್ಚಳವಾಗುತ್ತಿದೆ. ಈ ನಡುವೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌) ಮುಂದಿನ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. "ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಓಮಿಕ್ರಾನ್‌ ಜೊತೆಗೆ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿದೆ. ಆದ್ದರಿಂದಾಗಿ ಭಾರತವು ಎಲ್ಲಾ ಸಂದರ್ಭವನ್ನೂ ಎದುರಿಸಲು ಸಿದ್ಧವಾಗಿರಬೇಕು," ಎಂದು ಏಮ್ಸ್‌ ಅಧ್ಯಕ್ಷ ಡಾ ರಣ್‌ದೀಪ್‌ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

"ನಾವು ಯಾವುದೇ ಕ್ಷಣವನ್ನು ಎದುರಿಸಲು ಈಗಲೇ ಸಿದ್ಧವಾಗಿರಬೇಕು. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಪರಿಸ್ಥಿತಿಯು ಇರುವಂತೆ ನಮ್ಮಲ್ಲಿ ಆಗದಿರಲಿ ಎಂಬ ಆಶಾವಾದವನ್ನು ನಾವು ಹೊಂದಿರುವ. ನಮಗೆ ಓಮಿಕ್ರಾನ್‌ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ. ಯಾವಾಗ ವಿಶ್ವದ ಬೇರೆ ಭಾಗದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಹೆಚ್ಚಳವಾಗುತ್ತದೆಯೋ, ಅಂದು ನಾವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಯಾವುದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿರಬೇಕು," ಎಂದು ಡಾ ರಣ್‌ದೀಪ್‌ ಗುಲೇರಿಯಾ ಅಭಿಪ್ರಾಯಿಸಿದ್ದಾರೆ.

ವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲು ವಿಶ್ವದ ಮೊದಲ ಓಮಿಕ್ರಾನ್‌ ಸಾವು ಪ್ರಕರಣ ಯುಕೆಯಲ್ಲಿ ದಾಖಲು

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತ ಓಮಿಕ್ರಾನ್‌ ಈಗ ವಿಶ್ವದಾದ್ಯಂತ ಹರಡಿದೆ. ಬ್ರಿಟನ್‌ನಲ್ಲಿ ಓಮಿಕ್ರಾನ್‌ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಓಮಿಕ್ರಾನ್‌ನಿಂದ ಬ್ರಿಟನ್‌ನಲ್ಲಿ ಹೊಸ ಅಲೆಯ ಎಚ್ಚರಿಕೆ ಇದೆ ಎಂದು ಅಲ್ಲಿನ ತಜ್ಞರು ಹೇಳುತ್ತಾರೆ. ಈ ನಡುವೆ ಭಾರತದಲ್ಲಿಯೂ ಓಮಿಕ್ರಾನ್‌ ಬಗ್ಗೆ ಏಮ್ಸ್‌ ಮುಖ್ಯಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.

 ಯುಕೆಯಲ್ಲಿ ಪ್ರತಿ ದಿನ ಓಮಿಕ್ರಾನ್‌ ಪ್ರರಕಣಗಳು ದ್ವಿಗುಣ

ಯುಕೆಯಲ್ಲಿ ಪ್ರತಿ ದಿನ ಓಮಿಕ್ರಾನ್‌ ಪ್ರರಕಣಗಳು ದ್ವಿಗುಣ

"ಯುಕೆಯಲ್ಲಿ ಪ್ರತಿ ದಿನ ಓಮಿಕ್ರಾನ್ ಪ್ರರಕಣಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ಯುಕೆಯಲ್ಲಿ ಕೊರೊನಾ ವೈರಸ್‌ ಪ್ರಕರಣದ ಏರಿಕೆಗೆ ಓಮಿಕ್ರಾನ್ ಪ್ರಮುಖ ಕಾರಣವಾಗುವ ಸಾಧ್ಯತೆ ಇದೆ," ಎಂದು ಯುಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಯುಕೆಯಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಈಗಾಗಲೇ ಹತ್ತು ಸಾವಿರದ ಗಡಿಯನ್ನು ದಾಟಿದೆ. ಈ ಹೊಸ ರೂಪಾಂತರದಿಂದಾಗಿ ಯುಕೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆಯು ಏಳಕ್ಕೆ ಏರಿಕೆ ಕಂಡಿದೆ. "ಯುಕೆಯಲ್ಲಿ ಶನಿವಾರ 10,059 ಓಮಿಕ್ರಾನ್‌ ಪ್ರಕರಣಗಳು ದಾಖಲಾಗಿದೆ, ಇದು ಶುಕ್ರವಾರದ ಓಮಿಕ್ರಾನ್‌ ಪ್ರಕರಣಗಳಿಗಿಂತ ಮೂರು ಪಟ್ಟು ಅಧಿಕವಾಗಿದೆ. ಈ ಮೂಲಕ ಯುಕೆಯಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 24,968 ಕ್ಕೆ ಏರಿಕೆ ಕಂಡಿದೆ," ಎಂದು ಯುಕೆ ಅಧಿಕಾರಿಗಳು ತಿಳಿಸಿದ್ದಾರೆ.

 ಸ್ಥಳೀಯವಾಗಿ ಪ್ರಯಾಣಿಕರ ಮೇಲೂ ನಿಗಾ ವಹಿಸಿ ಎಂದ ಏಮ್ಸ್‌

ಸ್ಥಳೀಯವಾಗಿ ಪ್ರಯಾಣಿಕರ ಮೇಲೂ ನಿಗಾ ವಹಿಸಿ ಎಂದ ಏಮ್ಸ್‌

ಇನ್ನು ಪರಿಸ್ಥಿತಿಯನ್ನು ಹೆಚ್ಚು ಸೂಕ್ಷ್ಮವಾಗಿ ಅವಲೋಕನ ಮಾಡುವ ಬಗ್ಗೆ ಒತ್ತು ನೀಡಿರುವ ಏಮ್ಸ್‌ ಮುಖ್ಯಸ್ಥರು, ಅಂತರಾಷ್ಟ್ರೀಯ ಪ್ರಯಾಣಿಕರ ನಿಗಾ ಮಾತ್ರವಲ್ಲದೇ, ಸ್ಥಳೀಯವಾಗಿ ಎಲ್ಲಿ ಓಮಿಕ್ರಾನ್‌ ಪ್ರಕರಣ ಹೆಚ್ಚಳವಾಗಿ ಇದೆಯೋ ಅಲ್ಲಿಂದ ಆಗಮಿಸುವ ಪ್ರಯಾಣಿಕರ ಮೇಲೂ ನಿಗಾ ವಹಿಸಬೇಕಾಗಿದೆ. ಈ ಮೂಲಕ ಓಮಿಕ್ರಾನ್ ಹರಡುವುದುನ್ನು ತಡೆಗಟ್ಟುವ ಪ್ರಯತ್ನ ಮಾಡಲು ಸಾಧ್ಯ ಎಂದಿದ್ದಾರೆ.

 ಲಸಿಕೆಗೆ ಅಧಿಕ ಆಧ್ಯತೆ ನೀಡಲು ಏಮ್ಸ್‌ ಆದ್ಯತೆ

ಲಸಿಕೆಗೆ ಅಧಿಕ ಆಧ್ಯತೆ ನೀಡಲು ಏಮ್ಸ್‌ ಆದ್ಯತೆ

ಇನ್ನು ಇದೇ ಸಂದರ್ಭದಲ್ಲಿ ಕೊರೊನಾ ವೈರಸ್‌ ವಿರುದ್ಧ ಲಸಿಕೆ ನೀಡುವುದಕ್ಕೂ ಏಮ್ಸ್‌ ಅಧ್ಯಕ್ಷ ಡಾ ರಣ್‌ದೀಪ್‌ ಗುಲೇರಿಯಾ ಆಧ್ಯತೆ ನೀಡಿದ್ದಾರೆ. "ಈ ಓಮಿಕ್ರಾನ್‌ ಹೆಚ್ಚಳದ ನಡುವೆ ಕೋವಿಡ್‌ ಲಸಿಕೆ ನೀಡಿಕೆಯನ್ನು ಹೆಚ್ಚು ಮಾಡುವುದು ಸೂಕ್ತ," ಎಂದು ಕೂಡಾ ಡಾ ರಣ್‌ದೀಪ್‌ ಗುಲೇರಿಯಾ ಹೇಳಿದ್ದಾರೆ. "ಈ ಹೊಸ ರೂಪಾಂತರ ಓಮಿಕ್ರಾನ್‌ನಲ್ಲಿ ಮೂವತ್ತಕ್ಕೂ ಹೆಚ್ಚು ಮ್ಯೂಟೇಶನ್‌ಗಳು ಇದೆ ಎಂದು ಈಗಾಗಲೇ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಜನರು ಜಾಗರೂಕರಾಗಿರುವುದು ಉತ್ತಮ. ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆಯನ್ನು ಪಡೆದರೆ ಸುರಕ್ಷಿತ. ಭಾರತದ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಿ," ಎಂದು ಮನವಿ ಮಾಡಿದ್ದಾರೆ.

 ಭಾರತದ ಓಮಿಕ್ರಾನ್‌ ಪ್ರರಕಣ ಹೆಚ್ಚಳ

ಭಾರತದ ಓಮಿಕ್ರಾನ್‌ ಪ್ರರಕಣ ಹೆಚ್ಚಳ

ದೇಶದಲ್ಲಿ ಓಮಿಕ್ರಾನ್‌ ಪ್ರರಕಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಭಾನುವಾರ ಗುಜರಾತ್, ಮಹಾರಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟು ಓಮಿಕ್ರಾನ್‌ ಪ್ರಕರಣ ಸಂಖ್ಯೆಯು 152 ಕ್ಕೆ ಏರಿಕೆ ಆಗಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿಯೂ ಡಿಸೆಂಬರ್‌ 19 ರಂದು ಮತ್ತೆ ಹೊಸ ಐದು ಓಮಿಕ್ರಾನ್ ಪತ್ತೆ ಆಗಿದೆ. ಈವರೆಗೆ ದೇಶದ ಹನ್ನೊಂದು ರಾಜ್ಯಗಳಲ್ಲಿ ಓಮಿಕ್ರಾ‌ನ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 54, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ಕರ್ನಾಟಕದಲ್ಲಿ 14, ತೆಲಂಗಾಣದಲ್ಲಿ 20, ಗುಜರಾತ್‌ 10 ಓಮಿಕ್ರಾನ್‌, ಕೇರಳದಲ್ಲಿ 11, ಆಂಧ್ರ ಪ್ರದೇಶ, ಚಂಡೀಗಢ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಓಮಿಕ್ರಾನ್‌ ಪ್ರಕರಣ ವರದಿ ಆಗಿದೆ.

(ಒ‌ನ್‌ಇಂಡಿಯಾ ಸುದ್ದಿ)

Recommended Video

ಒಬ್ಬ ವ್ಯಕ್ತಿಗೆ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ಒಟ್ಟಿಗೆ ತಗುಲಿದ್ರೆ ಏನಾಗುತ್ತೆ? | Oneindia Kannada

English summary
Omicron Threat: Be Prepared For Any Eventuality Says AIIMS Chief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X