ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ಗಂಟೆ ಚರ್ಮ ಮತ್ತು ಪ್ಲಾಸ್ಟಿಕ್‌ನಲ್ಲಿ 8 ದಿನಕ್ಕಿಂತ ಹೆಚ್ಚು ಬದುಕುಳಿಯುವ ಓಮಿಕ್ರಾನ್: ಅಧ್ಯಯನ

|
Google Oneindia Kannada News

ನವದೆಹಲಿ ಜನವರಿ 26: ಇಡೀ ದೇಶವನ್ನೇ ಹಿಂಡಿ ಹಿಪ್ಪೆಯಾಗಿಸಿದ ಕೊರೊನಾ ಇನ್ನೇನು ಅಳಿವಿನಂಚಿನಲ್ಲಿದೆ ಅನ್ನುವಷ್ಟರಲ್ಲಿ ಓಮಿಕ್ರಾನ್ ರೂಪಾಂತರಿ ಒಕ್ಕರಿಸಿದೆ. ಈ ಓಮಿಕ್ರಾನ್ ವೇಗವಾಗಿ ಹರಡುವಂತದ್ದಾಗಿದ್ದು ಸೌಮ್ಯ ಲಕ್ಷಣವನ್ನು ಹೊಂದಿದೆ ಎನ್ನುವ ವಿಚಾರ ಈಗಾಗಲೇ ತಿಳಿದಿರುವಂತದ್ದು. ಆದರೆ ಅಧ್ಯನವೊಂದು ಓಮಿಕ್ರಾನ್ ವೈರಸ್ ಎಷ್ಟು ಸಮಯ ಬದುಕಿರುತ್ತದೆ ಎನ್ನುವ ಬಗ್ಗೆ ತಿಳಿಸಿದೆ. ಅಧ್ಯಯನದ ಪ್ರಕಾರ ಓಮಿಕ್ರಾನ್ 21 ಗಂಟೆಗಳ ಕಾಲ ಚರ್ಮದ ಮೇಲೆ ಬದುಕುಳಿಯುತ್ತದೆ. ಜೊತೆಗೆ ಪ್ಲಾಸ್ಟಿಕ್‌ನ ಮೇಲೆ 8 ದಿನಗಳಿಗಿಂತ ಹೆಚ್ಚು ಜೀವಂತವಾಗಿರುತ್ತದೆ ಎಂದು ಅಧ್ಯಯನ ಹೇಳುತ್ತದೆ. ಇದರ ಜೀವಿತಾವಧಿ ಹೆಚ್ಚಾಗಿರುವುದರಿಂದ ಇದು ಇತರ ತಳಿಗಳಿಗೆ ಹೋಲಿಸಿದರೆ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತದೆ.

ಜಪಾನ್‌ನ ಕ್ಯೋಟೋ ಪ್ರಿಫೆಕ್ಚುರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ವುಹಾನ್‌ನಲ್ಲಿ ಹುಟ್ಟಿಕೊಂಡ SARS-CoV-2 ತಳಿ ಮತ್ತು ಎಲ್ಲಾ ರೂಪಾಂತರಗಳ (VOCs) ನಡುವಿನ ವೈರಲ್ ಪರಿಸರ ಸ್ಥಿರತೆಯ ವ್ಯತ್ಯಾಸಗಳನ್ನು ವಿಶ್ಲೇಷಿಸಿದ್ದಾರೆ. ಪ್ರಿಪ್ರಿಂಟ್ ರೆಪೊಸಿಟರಿ BioRxiv ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಎಟ್-ಟು-ಬಿ ಪೀರ್-ರಿವ್ಯೂಡ್ ಅಧ್ಯಯನವು (yet-to-be peer-reviewed study), ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಪ್ಲಾಸ್ಟಿಕ್ ಮತ್ತು ಚರ್ಮದ ಮೇಲ್ಮೈಗಳಲ್ಲಿ ಮೂಲ ಸ್ಟ್ರೈನ್‌ಗಿಂತ ಎರಡು ಪಟ್ಟು ಹೆಚ್ಚು ದೀರ್ಘಾವಧಿಯ ಬದುಕುಳಿಯುವಿಕೆಯನ್ನು ಪ್ರದರ್ಶಿಸಿವೆ ಎಂದು ಕಂಡುಹಿಡಿದಿದೆ. "ವೈರಸ್ ಹೆಚ್ಚು ಕಾಲ ಬದುಕುಳಿಯುವುದು ಮತ್ತು ಅವುಗಳ ಹರಡುವಿಕೆಗೆ ಅವಕಾಶ ಕಲ್ಪಿಸುತ್ತದೆ" ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.

"VOC ಗಳಲ್ಲಿ Omicron ಅತ್ಯಧಿಕ ಸ್ಥಿರತೆಯನ್ನು ಹೊಂದಿದೆ ಎಂದು ಈ ಅಧ್ಯಯನವು ಹೇಳುತ್ತದೆ. ಇದು ಡೆಲ್ಟಾ ರೂಪಾಂತರವನ್ನು ಬದಲಿಸಲು ಮತ್ತು ವೇಗವಾಗಿ ಹರಡಲು ಸಹಾಯ ಮಾಡುವ ಅಂಶಗಳಲ್ಲಿ ಒಂದಾಗಿರಬಹುದು" ಎಂದು ಅಧ್ಯಯನ ಹೇಳುತ್ತದೆ.

Omicron stays on skin for over 21 hours, more than 8 days on plastic: Study

ಓಮಿಕ್ರಾನ್ ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ 193.5 ಗಂಟೆಗಳ ಕಾಲ ಬದುಕಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ. ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ, ಮೂಲ ಸ್ಟ್ರೈನ್ ಮತ್ತು ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ಸರಾಸರಿ ಬದುಕುಳಿಯುವ ಸಮಯಗಳು ಕ್ರಮವಾಗಿ 56 ಗಂಟೆಗಳು, 191.3 ಗಂಟೆಗಳು, 156.6 ಗಂಟೆಗಳು, 59.3 ಗಂಟೆಗಳು ಮತ್ತು 114 ಗಂಟೆಗಳು ಎಂದು ಅಧ್ಯಯನವು ತೋರಿಸುತ್ತದೆ.

ಚರ್ಮದ ಮಾದರಿಗಳಲ್ಲಿ ಆಲ್ಫಾ 19.6 ಗಂಟೆಗಳು, ಬೀಟಾ 19.1 ಗಂಟೆಗಳು, ಗಾಮಾ 11 ಗಂಟೆಗಳು, ಡೆಲ್ಟಾ 16.8 ಗಂಟೆಗಳು ಮತ್ತು ಓಮಿಕ್ರಾನ್‌ 21.1 ಗಂಟೆಗಳು ಎಂದು ಅವರು ಹೇಳಿದರು. ಆಲ್ಫಾ ಮತ್ತು ಬೀಟಾ ರೂಪಾಂತರಗಳ ನಡುವೆ ಬದುಕುಳಿಯುವ ಸಮಯಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಅವುಗಳು ಒಂದೇ ರೀತಿಯ ಪರಿಸರ ಸ್ಥಿರತೆಯನ್ನು ಹೊಂದಿವೆ. ಇದು ಹಿಂದಿನ ಅಧ್ಯಯನಗಳ ಫಲಿತಾಂಶಗಳೊಂದಿಗೆ ಸ್ಥಿರವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಆಲ್ಫಾ, ಬೀಟಾ, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳು ಹೆಚ್ಚಿನ ಸಮಯ ಚರ್ಮ ಹಾಗೂ ಪ್ಲಾಸ್ಟಿಕ್ ಮೇಲೆ ಜೀವಂತವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಸೋಂಕು ನಿಯಂತ್ರಣ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ ಎಂದು ಸಂಶೋಧಕರು ಸೇರಿಸಿದ್ದಾರೆ. ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಸೋಂಕಿತ ರೋಗಿಗಳ ಸಂಖ್ಯೆಯಿಂದಾಗಿ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಸ್ತುತ ಹಲವಾರು ಅಧ್ಯಯನಗಳು ನಡೆಯುತ್ತಿವೆ.

Recommended Video

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

ದೇಶಾದ್ಯಂತ ಓಮಿಕ್ರಾನ್ ಹಾಗೂ ಕೊರೊನಾ ಸೋಂಕುಗಳು ಹೆಚ್ಚಾಗುತ್ತಿದ್ದು ಪ್ರತಿನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಆತಂಕಕಾರಿ ವಿಚಾರ ಅಂದರೆ ಸದ್ಯ ದಾಖಲಾಗಿರುವ ಕೊರೊನಾ ಪ್ರಕರಣಗಳಿಗಿಂತ ಸೋಂಕುಗಳ ಸಂಖ್ಯೆ ಇನ್ನೂ ಹೆಚ್ಚಾಗಿದ್ದು ಓಮಿಕ್ರಾನ್ ಪ್ರಕರಣಗಳು ಕೂಡ ನೈಜ ಸಂಖ್ಯೆಗಿಂತ 90 ಪಟ್ಟು ಹೆಚ್ಚಿರಬಹುದು ಎಂದು ಕೋವಿಡ್‌ನ ಸರ್ಕಾರದ ಉನ್ನತ ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾರೆ.

English summary
The Omicron variant of coronavirus can remain alive on the skin for over 21 hours, and more than eight days on plastic surfaces, a study said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X