ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದ ಓಮಿಕ್ರಾನ್ ಸೋಂಕಿಗೂ ಆರು ತಿಂಗಳಿನಲ್ಲಿ ಲಸಿಕೆ ರೆಡಿ

|
Google Oneindia Kannada News

ನವದೆಹಲಿ, ಆಗಸ್ಟ್ 16: ಕೊರೊನಾವೈರಸ್ ರೂಪಾಂತರ ತಳಿ ಓಮಿಕ್ರಾನ್ ರೋಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಲಸಿಕೆಯೊಂದನ್ನು ಮುಂದಿನ ಆರು ತಿಂಗಳಿನಲ್ಲಿ ನಿರೀಕ್ಷಿಸಲಾಗುತ್ತಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಅವರು, ಈ ಲಸಿಕೆಯು ಓಮಿಕ್ರಾನ್‌ನ BA5 ಉಪ-ವೇರಿಯಂಟ್‌ಗೆ(ಉಪತಳಿ) ನಿರ್ದಿಷ್ಟವಾಗಿರುತ್ತದೆ. ಇನ್ನು ಆರು ತಿಂಗಳಿನಲ್ಲಿ ಈ ಲಸಿಕೆಯನ್ನು ನಿರೀಕ್ಷಿಸಬಹುದು ಎಂದರು.

ಭಾರತದಲ್ಲಿ ಆಗಸ್ಟ್ 12ರಿಂದಲೇ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಲಭ್ಯಭಾರತದಲ್ಲಿ ಆಗಸ್ಟ್ 12ರಿಂದಲೇ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ಲಭ್ಯ

"ಹೊಸ ರೂಪಾಂತರದ ನಂತರದಲ್ಲಿ ಆತಿಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿಲ್ಲ, ಆದರೂ ಈ ರೋಗದ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ. ಏಕೆಂದರೆ ಇದು ಜ್ವರದ ಕೆಟ್ಟ ಪರಿಣಾಮದಂತೆ ಗೋಚರಿಸುತ್ತದೆ. ಹೀಗಾಗಿ ಮುಂಬರುವ ಓಮಿಕ್ರಾನ್ ನಿರ್ದಿಷ್ಟ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳುವುದು ಸೂಕ್ತ," ಎಂದು ಅದಾರ್ ಪೂನಾವಾಲಾ ಸಲಹೆ ನೀಡಿದ್ದಾರೆ.

ದೇಶದ ಮಾರುಕಟ್ಟೆಗೆ ಲಸಿಕೆ ಬರುವುದು ಯಾವಾಗ?

ದೇಶದ ಮಾರುಕಟ್ಟೆಗೆ ಲಸಿಕೆ ಬರುವುದು ಯಾವಾಗ?

"ಭಾರತೀಯ ಮಾರುಕಟ್ಟೆಗೆ ಓಮಿಕ್ರಾನ್ ನಿರ್ದಿಷ್ಟ ಲಸಿಕೆಯು ಯಾವಾಗ ಲಗ್ಗೆ ಇಡುತ್ತದೆ ಎನ್ನುವುದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿ ಮೇಲೆ ನಿಂತಿರುತ್ತದೆ. ಇನ್ನು ಭಾರತದಲ್ಲಿ ಪ್ರತ್ಯೇಕವಾಗಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಬೇಕಾದ ಅಗತ್ಯವಿದೆಯೇ ಎಂಬುದರ ಬಗ್ಗೆ ಯಾವುದು ಸ್ಪಷ್ಟತೆಯಿಲ್ಲ," ಎಂದು ಅದಾರ್ ಪೂನಾವಾಲಾ ಹೇಳಿದ್ದಾರೆ.

ಭಾರತದಲ್ಲಿ ಯಾವಾಗ ಸಿಗುತ್ತೆ ಓಮಿಕ್ರಾನ್ ಲಸಿಕೆ?

ಭಾರತದಲ್ಲಿ ಯಾವಾಗ ಸಿಗುತ್ತೆ ಓಮಿಕ್ರಾನ್ ಲಸಿಕೆ?

"ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೋವಾವ್ಯಾಕ್ಸ್‌ನ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ನವೆಂಬರ್-ಡಿಸೆಂಬರ್ ವೇಳೆಗೆ ಯುಎಸ್ ಡ್ರಗ್ ರೆಗ್ಯುಲೇಟರ್ ಅನ್ನು ಸಂಪರ್ಕಿಸುವ ಸ್ಥಿತಿಯಲ್ಲಿರಬೇಕು" ಎಂದು ಪೂನಾವಾಲಾ ಹೇಳಿದ್ದಾರೆ. ಇನ್ನು ಭಾರತದಲ್ಲಿ ಪ್ರತ್ಯೇಕ ಪ್ರಯೋಗವನ್ನು ಮಾಡಬೇಕೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ನಮ್ಮ ತಂಡವು ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಹೊಂದಬಹುದು ಎಂದು ನಾವು ಭಾವಿಸುತ್ತೇವೆ," ಎಂದು ಅವರು ತಿಳಿಸಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನೆಲದಲ್ಲಿ ಅನುಮೋದನೆ

ಯುನೈಟೆಡ್ ಕಿಂಗ್ ಡಮ್ ನೆಲದಲ್ಲಿ ಅನುಮೋದನೆ

ಓಮಿಕ್ರಾನ್ ರೂಪಾಂತರ ಮತ್ತು ವೈರಸ್ ಮೂಲವನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿದ ಕೋವಿಡ್-19ನ ಮಾಡರ್ನಾ ಲಸಿಕೆಯನ್ನು ಯುನೈಟೆಡ್ ಕಿಂಗ್‌ಡಮ್ ಡ್ರಗ್ ರೆಗ್ಯುಲೇಟರ್ ಸೋಮವಾರ ಅನುಮೋದಿಸಿದೆ ಎಂದು ಹೇಳಿದೆ. ಈ ಸಂಬಂಧ ಮೆಡಿಸಿನ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (MHRA) ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಯುಕೆ ನಿಯಂತ್ರಣ ಪ್ರಾಧಿಕಾರವು ಲಸಿಕೆಯ ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವದ ಮಾನದಂಡಗಳನ್ನು ಪೂರೈಸಿರುವುದು ಕಂಡುಬಂದ ನಂತರ ವಯಸ್ಕ ಬೂಸ್ಟರ್ ಡೋಸ್‌ಗಳಿಗೆ ಅನುಮೋದಿಸಿದೆ ಎಂದು ಹೇಳಿದೆ. ಇದು ಬ್ರಿಟಿಷ್ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಮೊದಲ "ಬೈವಲೆಂಟ್" ಕೋವಿಡ್ -19 ಲಸಿಕೆಯಾಗಿದೆ.

ಲಸಿಕೆಯಿಂದ ಓಮಿಕ್ರಾನ್ ವಿರುದ್ಧ ಸಿಗುವುದು ರಕ್ಷಣೆ

ಲಸಿಕೆಯಿಂದ ಓಮಿಕ್ರಾನ್ ವಿರುದ್ಧ ಸಿಗುವುದು ರಕ್ಷಣೆ

ಕ್ಲಿನಿಕಲ್ ಪ್ರಯೋಗದ ಡೇಟಾವು ಮೂಲ ವೈರಸ್ ಮತ್ತು ಓಮಿಕ್ರಾನ್ ವಿರುದ್ಧ "ಬಲವಾದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು" ಪ್ರೇರೇಪಿಸಿದೆ ಎಂದು ತೋರಿಸಿದೆ. ವೈರಸ್ ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಪ್ರಬಲ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುವುದರಲ್ಲಿ ಲಸಿಕೆಯೇ ಸಾಧನವಾಗಲಿದೆ," ಎಂದು MHRA ಮುಖ್ಯ ಕಾರ್ಯನಿರ್ವಾಹಕ ಜೂನ್ ರೈನ್ ಹೇಳಿದ್ದಾರೆ.

Recommended Video

ನಾನು ಬೆಂಕಿ ಅಂತಾ Ishan Kishan BCCI ಗೆ ಬಿಸಿ‌ ಮುಟ್ಟಿಸಿದ್ದು ಯಾಕೆ? |*Cricket | OneIndia Kannada

English summary
Omicron-specific Coronavirus Vaccine will come expected in next 6 Months, Says Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X