ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಓಮಿಕ್ರಾನ್: ಎಚ್ಚರಿಕೆ ಕೊಟ್ಟ ತಜ್ಞರು

|
Google Oneindia Kannada News

ನವದೆಹಲಿ, ಜನವರಿ 24: ಕೊರೊನಾ ರೂಪಾಂತರಿ ಓಮಿಕ್ರಾನ್ ಸಮುದಾಯಕ್ಕೆ ಹರಡುವ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಲವು ನಗರಗಳಲ್ಲಿ ಈ ರೂಪಾಂತರಿ ಪ್ರಬಲವಾಗಿದೆ ಐಎನ್ಎಸ್ಎಸಿಒಜಿ (ಇನ್‌ಸಾಕೋಗ್‌) ಅದರ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ.

"ಇತ್ತೀಚಿನ ದಿನಗಳಲ್ಲಿ ವರದಿಯಾಗಿರುವ ಬಿ.1.640.2 ವಂಶಾವಳಿಯ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹಾಗೂ ರೋಗನಿರೋಧಕತೆಯನ್ನೂ ಮೀರುವ ಅದರ ವೈಶಿಷ್ಟ್ಯಗಳು ಈ ವರೆಗೂ ಆತಂಕಕಾರಿ ರೂಪಾಂತರಿ" ಎಂದು ದೃಢಪಟ್ಟಿಲ್ಲವೆಂದು ಇನ್‌ಸಾಕೋಗ್‌ ಹೇಳಿದೆ.

ಕೊರೊನಾದಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಬೂಸ್ಟರ್ ಡೋಸ್ಕೊರೊನಾದಿಂದ ಗುಣಮುಖರಾದವರಿಗೆ 3 ತಿಂಗಳ ಬಳಿಕ ಬೂಸ್ಟರ್ ಡೋಸ್

ಭಾರತದಲ್ಲಿ ಇನ್ನು ಮುಂದೆ ಓಮಿಕ್ರಾನ್ ಸೋಂಕು ಹರಡುವಿಕೆ ಸ್ಥಳೀಯರಿಂದ ಉಂಟಾಗಲಿದೆ ಹೊರದೇಶದಿಂದ ಬಂದವರಿಂದ ಅಲ್ಲ ಎಂದು ಇನ್‌ಸಾಕೋಗ್‌ ಹೇಳಿದ್ದು ವೈರಾಣು ಸೋಂಕಿನ ಬದಲಾವಣೆಯಾಗುತ್ತಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾದ ಸೀಕ್ವೆನ್ಸಿಂಗ್ ಕಾರ್ಯತಂತ್ರದೆಡೆಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

Omicron In Community Transmission Stage In India, Dominant In Multiple Metros

ಕೋವಿಡ್-19 ತಡೆಗೆ ಪೂರಕವಾದ ನಡೆ, ಲಸಿಕೆಗಳು ಕೋವಿಡ್-19 ವೈರಾಣುವಿನ ಎಲ್ಲಾ ರೂಪಾಂತರಿಗಳಿಂದಲೂ ರಕ್ಷಣೆ ಒದಗಿಸುತ್ತದೆ ಎಂದು ಇನ್‌ಸಾಕೋಗ್‌ ವರದಿಯಲ್ಲಿ ತಿಳಿಸಿದೆ.

ಓಮಿಕ್ರಾನ್ ಉಪರೂಪಾಂತರಿ, ಬಿಎ.2 ವಂಶಾವಳಿ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಪತ್ತೆಯಾಗಿದೆ. ಭಾನುವಾರ ಬಿಡುಗಡೆಯಾಗಿರುವ ಐಎನ್ಎಸ್ಎ ಸಿಒಜಿ ಬುಲೆಟಿನ್ ನಲ್ಲಿ, ಓಮಿಕ್ರಾನ್ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ರೋಗಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಹಾಗೂ ಐಸಿಯು ಪ್ರಕರಣಗಳು ಈ ಅಲೆಯಲ್ಲಿಯೂ ಹೆಚ್ಚಾಗಿದ್ದು ಅಪಾಯದ ಮಟ್ಟ ಹಿಂದಿನಂತೆಯೇ ಇದೆ ಬದಲಾಗಿಲ್ಲ ಎಂದು ಹೇಳಿದೆ.

"ಓಮಿಕ್ರಾನ್ ಭಾರತದಲ್ಲಿ ಈಗ ಸಮುದಾಯಕ್ಕೆ ಹರಡುವ ಹಂತದಲ್ಲಿದ್ದು ಹಲವು ಮೆಟ್ರೋ ಸಿಟಿಗಳಲ್ಲಿ ಪ್ರಬಲವಾಗಿದೆ. ಎಸ್ ಜೀನ್ ಡ್ರಾಪೌಟ್ ಆಧಾರಿತ ಸ್ಕ್ರೀನಿಂಗ್ ನಲ್ಲಿ ಹೆಚ್ಚು ನಕಲಿ ನೆಗೆಟೀವ್ ಗಳು ವರದಿಯಾಗುತ್ತಿವೆ" ಎಂದು ಇನ್‌ಸಾಕೋಗ್‌ ವರದಿ ಹೇಳಿದೆ. ಎಸ್-ಜೀನ್ ಡ್ರಾಪ್-ಔಟ್ ಓಮಿಕ್ರಾನ್ ನಂತಹದ್ದೇ ಆದ ಜೆನೆಟಿಕ್ ರೂಪಾಂತರಿಯಾಗಿದೆ.

ಬೆಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಬರೋಬ್ಬರಿ 165 ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿದ್ದರೂ ಇಂದು ಬೆಂಗಳೂರಿನಲ್ಲಿ 165 ಕೊವೀಡ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಶೀಘ್ರವಾಗಿ ಹರಡುತ್ತಿರುವ 'ಓಮಿಕ್ರಾನ್' ರೂಪಾಂತರಿ ವೈರಸ್ ಬಗ್ಗೆ ಮತ್ತಷ್ಟು ದತ್ತಾಂಶಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಆರಂಭದಲ್ಲಿ ಈ ರೂಪಾಂತರಿ ವೈರಸ್‌ನಿಂದ ರೋಗಿಗಳಲ್ಲಿ ಸೌಮ್ಯ ರೋಗ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ.

ತೀವ್ರ ಪ್ರಮಾಣದ ರೋಗ ಲಕ್ಷಣಗಳೊಂದಿಗೆ ಭಾರಿ ಸಾವು ನೋವಿಗೆ ಕಾರಣವಾಗಿದ್ದ ಡೆಲ್ಟಾ ವೈರಸ್ ಹಾಗೂ ಮತ್ತಿತರ ರೂಪಾಂತರಿ ವೈರಸ್‌ಗಳಂತೆಯೇ ಓಮಿಕ್ರಾನ್ ವೈರಸ್ ನ ರೋಗ ಲಕ್ಷಣಗಳಿದ್ದರೂ, ರೋಗಿಗಳನ್ನು ಉಪಚರಿಸುತ್ತಿರುವ ವೈದ್ಯರು ಹಾಗೂ ಸಂಶೋಧಕರು ಕೆಲವು 'ಅಸಹಜ' ರೋಗ ಲಕ್ಷಣಗಳನ್ನು ಗಮನಿಸುತ್ತಿದ್ದಾರೆ.

ಓಮಿಕ್ರಾನ್ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿರುವ ರೋಗಿಗಳಲ್ಲಿ ರಾತ್ರಿ ವೇಳೆ ಕೆಲವು 'ಅಸಹಜ' ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ವೈದ್ಯರು ಮತ್ತು ಸಂಶೋಧಕರು. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಜ್ಞ ಡಾ. ಆ್ಯಂಗಲಿಕ್ ಕೊಯೆಟ್ಜೀ ರೋಗಿಗಳಲ್ಲಿ ಡೆಲ್ಟಾ ರೂಪಾಂತರಿ ವೈರಸ್‌ನಿಂದ ಕಾಣಿಸಿಕೊಳ್ಳುತ್ತಿದ್ದ ರೋಗ ಲಕ್ಷಣಗಳಿಗಿಂತ ಭಿನ್ನವಾದ ಹೊಸ ರೋಗ ಲಕ್ಷಣವೊಂದನ್ನು ಪತ್ತೆ ಹಚ್ಚಿದ್ದಾರೆ.

ಈ ರೋಗ ಲಕ್ಷಣದ ಮೂಲಕ ಪರೀಕ್ಷಾ ವರದಿ ಬರುವುದಕ್ಕೂ ಮುನ್ನ ಓಮಿಕ್ರಾನ್ ವೈರಸ್‌ ಸೋಂಕಿನ ಸಾಮರ್ಥ್ಯ ಅಳೆಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಇತರೆ ರೂಪಾಂತರಿ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗಳಲ್ಲಿ ಕಂಡು ಬರುತ್ತಿದ್ದ ಸುಸ್ತು ಹಾಗೂ ನಿಶ್ಯಕ್ತಿಯ ಜೊತೆಗೆ ಓಮಿಕ್ರಾನ್ ಸೋಂಕಿಗೆ ಒಳಗಾದ ರೋಗಿಗಳು ರಾತ್ರಿ ಹೊತ್ತು ವಿಪರೀತ ಬೆವರುವ ಲಕ್ಷಣಗಳು ಕಾಣಿಸಿಕೊಂಡಿವೆ. ಹಲವಾರು ರೋಗಿಗಳು ಈ ರೋಗ ಲಕ್ಷಣದಿಂದ ಬಳಲುತ್ತಿರುವುದು ವರದಿಯಾಗಿದೆ.

Recommended Video

ರಾಷ್ಟ್ರಗೀತೆ ಹಾಡುವಾಗ Virat Kohli ಮಾಡಿದ್ದೇನು? ವಿಡಿಯೋ ನೋಡಿದ ಭಾರತೀಯರ ಆಕ್ರೋಶ | Oneindia Kannada

ಕೆಲವು ರೋಗಿಗಳಂತೂ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿರುವ ವಿಪರೀತ ಬೆವರಿನಿಂದ ಅವರ ಬಟ್ಟೆ ಹಾಗೂ ಹಾಸಿಗೆಯನ್ನೆಲ್ಲ ತೋಯಿಸುತ್ತಿದ್ದಾರೆ. ಇದರೊಂದಿಗೆ ಓಮಿಕ್ರಾನ್ ಸೋಂಕಿತರಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಅಸಹಜ ರೋಗ ಲಕ್ಷಣವೆಂದರೆ ಕೆರೆತವಿರುವ ಒಣ ಗಂಟಲು. ಇತರೆ ರೂಪಾಂತರಿ ವೈರಸ್‌ಗಳಂತೆಯೇ ಓಮಿಕ್ರಾನ್ ಸೋಂಕಿತರಲ್ಲಿ ಒಣ ಗಂಟಲು ಕಂಡು ಬರುತ್ತಿದ್ದರೂ, ಕೆಲವು ರೋಗಿಗಳು ಗಂಟಲಲ್ಲಿ ವಿಪರೀತ ಕೆರೆತವುಂಟಾಗುತ್ತಿದೆ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.

English summary
The Omicron variant of COVID-19 is in the community transmission stage in India and has become dominant in multiple metros where new cases have been rising exponentially, the INSACOG has said in its latest bulletin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X