ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ 20 ರಾಷ್ಟ್ರಗಳಿಗೆ ಹರಡಿದೆಯಾ ಓಮಿಕ್ರಾನ್ ರೂಪಾಂತರ ವೈರಸ್!?

|
Google Oneindia Kannada News

ನವದೆಹಲಿ, ಡಿಸೆಂಬರ್ 1: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಯುರೋಪಿನಲ್ಲಿ ಬಹಳಷ್ಟು ಹಿಂದಿಯೇ ಪತ್ತೆಯಾಗಿತ್ತು ಎಂದು ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಓಮಿಕ್ರಾನ್ ರೂಪಾಂತರ ವೈರಸ್ ಈಗಾಗಲೇ 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಮ್ಮೆ ಸಾಂಕ್ರಾಮಿಕ ಪಿಡುಗು ಜಗತ್ತಿಗೆ ವ್ಯಾಪಿಸುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಕಳೆದ ನವೆಂಬರ್ 19 ರಿಂದ ನವೆಂಬರ್ 23ರೊಳಗೆ ತೆಗೆದುಕೊಂಡ ಮಾದರಿಯಲ್ಲಿ ಓಮಿಕ್ರಾನ್ ರೂಪಾಂತರ ವೈರಸ್ ಪತ್ತೆಯಾಗಿದೆ ಎಂಬುದನ್ನು ನವೆಂಬರ್ 24ರಂದು ಅಧಿಕೃತವಾಗಿ ಘೋಷಿಸಲಾಯಿತು. ಆದರೆ ಅದಕ್ಕೂ ಮೊದಲೇ ಓಮಿಕ್ರಾನ್ ರೂಪಾಂತರ ಅಸ್ತಿತ್ವದಲ್ಲಿದ್ದು ಎಂದು ನೆದರ್‌ಲ್ಯಾಂಡ್ಸ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಹೆಲ್ತ್ ಅಂಡ್ ದಿ ಎನ್ವಿರಾನ್‌ಮೆಂಟ್ ಹೇಳಿದೆ. ಆರಂಭಿಕ ಹಂತದಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು, ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡುವ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹೆಚ್ಚಾಗುತ್ತದೆಯೇ ಎಂಬ ಭಯವನ್ನು ಓಮಿಕ್ರಾನ್ ರೂಪಾಂತರ ವೈರಸ್ ಹುಟ್ಟು ಹಾಕುತ್ತಿದೆ. ಏಕೆಂದರೆ, ಈ ಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್ ರೂಪಾಂತರವು ಹೆಚ್ಚು ಪರಿಣಾಮಕಾರಿಯಾಗಿ ಹರಡುವ, ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಅಂಟಿಕೊಳ್ಳುವ ಅಪಾಯವಿದೆ. ಹೊಸ ರೂಪಾಂತರವು ಮೊದಲಿಗಿಂತ ಹೆಚ್ಚು ತೀವ್ರವಾಗಿ ಎಂಬುದು ಗೊತ್ತಾಗಿದೆ. ಆದರೆ ಅಧಿಕೃತ ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಅಮೆರಿಕಾದಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿ

ಅಮೆರಿಕಾದಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿ

ಯುನೈಟೆಡ್ ಸ್ಟೇಟ್ಸ್ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡುವಂತೆ ಅಧ್ಯಕ್ಷ ಜೋ ಬೈಡೆನ್ ಸರ್ಕಾರ ಆದೇಶಿಸಿದೆ. ಎಲ್ಲ ಪ್ರಯಾಣಿಕರು ತಾವು ಹೊರಡುವುದಕ್ಕೂ 24 ಗಂಟೆಗಳ ಮೊದಲು ನಡೆಸಿದ ಕೊವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಹೊಂದಿರಬೇಕು ಎಂದು ತಿಳಿಸಿದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ US ಕೇಂದ್ರಗಳು ವಾರಕ್ಕೆ 80,000 ಕೊರೊನಾವೈರಸ್ ಮಾದರಿಗಳ ಜೀನೋಮ್‌ಗಳನ್ನು ಸೀಕ್ವೆನ್ಸಿಂಗ್ ಮಾಡುತ್ತವೆ. ದೇಶದಲ್ಲಿನ ಎಲ್ಲಾ PCR ಲ್ಯಾಬ್ ಪರೀಕ್ಷೆಗಳಲ್ಲಿ ಏಳನೇ ಒಂದು ಭಾಗದಷ್ಟು ಪಾಸಿಟಿವ್ ವರದಿಯಾಗುತ್ತಿವೆ. ಈ ಹಿನ್ನೆಲೆ ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲಿನ ತಪಾಸಣೆಯನ್ನು ಹೆಚ್ಚಿಸಲಿದೆ ಎಂದು ಏಜೆನ್ಸಿಯ ನಿರ್ದೇಶಕ ಡಾ. ರೋಚೆಲ್ ವೊಲೆನ್ಸ್ಕಿ ಹೇಳಿದ್ದಾರೆ.

ಲಸಿಕೆ ಪಡೆದುಕೊಳ್ಳದಿದ್ದರೆ ದಂಡ ವಿಧಿಸಲು ಮುಂದಾದ ಗ್ರೀಸ್

ಲಸಿಕೆ ಪಡೆದುಕೊಳ್ಳದಿದ್ದರೆ ದಂಡ ವಿಧಿಸಲು ಮುಂದಾದ ಗ್ರೀಸ್

ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ, ಓಮಿಕ್ರಾನ್‌ನಿಂದ ಅಪಾಯವು "ತುಂಬಾ ಹೆಚ್ಚಾಗಿದೆ" ಎಂದು ಎಚ್ಚರಿಸಿತು. ಒಂದು ದಿನದ ನಂತರ ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳದ 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಸಮಸ್ಯೆಯನ್ನು ಹೊಂದಿರುವವರು ತಮ್ಮ ಪ್ರಯಾಣವನ್ನು ಮುಂದೂಡಲು ಸಲಹೆ ನೀಡಲಾಗಿದೆ. ಗ್ರೀಸ್‌ನಲ್ಲಿ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ COVID ಲಸಿಕೆ ಕಡ್ಡಾಯವಾಗಿರುತ್ತವೆ. ಜನವರಿ 16 ರೊಳಗೆ ಮೊದಲ ಡೋಸ್ ಅನ್ನು ಬುಕ್ ಮಾಡದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಘೋಷಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮತ್ತು ಓಮಿಕ್ರಾನ್ ರೂಪಾಂತರ ವೈರಸ್

ದಕ್ಷಿಣ ಆಫ್ರಿಕಾ ಮತ್ತು ಓಮಿಕ್ರಾನ್ ರೂಪಾಂತರ ವೈರಸ್

ದಕ್ಷಿಣ ಆಫ್ರಿಕಾದಲ್ಲಿ, ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಮೊದಲು ಘೋಷಿಸಲಾಗಿದ್ದು, ಈಗಾಗಲೇ ಅದು ವ್ಯಾಪಕವಾಗಿ ಹರಡಿದೆ. ನವೆಂಬರ್ ಮಧ್ಯದಲ್ಲಿ 300ರಷ್ಟಿದ್ದ ಹೊಸ ಕೊರೊನಾವೈರಸ್ ಪ್ರಕರಣಗಳ ದಾಖಲಾತಿ ಸಂಖ್ಯೆಯು ಈಗಾಗಲೇ 3,000 ಗಡಿ ದಾಟಿದೆ. ಇದು ವಿಶ್ವದಲ್ಲೇ ಅತಿವೇಗದ ಹೆಚ್ಚಳವಾಗಿದೆ. ದಕ್ಷಿಣ ಆಫ್ರಿಕಾದಿಂದ ಪ್ರಯಾಣದ ಮೇಲಿನ ನಿಷೇಧವನ್ನು ಘೋಷಿಸುತ್ತಿದ್ದಂತೆ, ಶುಕ್ರವಾರ ದಕ್ಷಿಣ ಆಫ್ರಿಕಾದಿಂದ ನೆದರ್‌ಲ್ಯಾಂಡ್‌ಗೆ ಎರಡು ವಿಮಾನಗಳು ತೆರಳಿದ್ದವು. ಈ ವೇಳೆ 61 ಪ್ರಯಾಣಿಕರಲ್ಲಿ ವೈರಸ್‌ ಪತ್ತೆಯಾಗಿದ್ದರೆ, ಅವರಲ್ಲಿ ಕನಿಷ್ಠ 14 ಜನರಿಗೆ ಒಮಿಕ್ರಾನ್ ರೂಪಾಂತರ ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಕೊರೊನಾವೈರಸ್ ಲಸಿಕೆಗಳು ಓಮಿಕ್ರಾನ್ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿದೆಯೇ? ಚಿಕಿತ್ಸೆಗಳು ಇಲ್ಲವೇ? ಓಮಿಕ್ರಾನ್ ಹೆಚ್ಚು ಗಂಭೀರವಾದ ಅನಾರೋಗ್ಯವನ್ನು ಉಂಟು ಮಾಡುತ್ತದೆಯೇ? ಎಂಬ ಪ್ರಶ್ನೆಗಳಿಗೆ ವಿಜ್ಞಾನಿಗಳು ಇನ್ನೂ ಉತ್ತರವನ್ನು ಕಂಡುಕೊಂಡಿಲ್ಲ.

ಈ ರೂಪಾಂತರವು ಕೇವಲ ಸೌಮ್ಯವಾದ ಅನಾರೋಗ್ಯವನ್ನು ಉಂಟು ಮಾಡುತ್ತದೆ ಎಂಬುದನ್ನು ವರದಿಗಳಲ್ಲಿ ತಜ್ಞರು ತಿಳಿದುಕೊಂಡಿದ್ದಾರೆ. ಏಕೆಂದರೆ ಅಂಕಿ-ಅಂಶಗಳು ಇನ್ನೂ ವಿರಳವಾಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಪುರಾವೆಗಳು ಓಮಿಕ್ರಾನ್, ಹಿಂದಿನ ರೂಪಾಂತರಗಳಿಗಿಂತ ಹೆಚ್ಚಾಗಿ ಮತ್ತು ವೇಗವಾಗಿ ತಗಲುತ್ತದೆ ಎಂಬುದನ್ನು ಸೂಚಿಸುತ್ತಿದೆ. ಆದರೆ ಅದಕ್ಕೂ ಕಠಿಣ ಪರೀಕ್ಷೆಯ ಅಗತ್ಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಯಾವ ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಕರಣ ವರದಿ

ಯಾವ ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಕರಣ ವರದಿ

ಮಂಗಳವಾರ ಸಂಜೆಯ ವೇಳೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯಾವುದೇ ಓಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ, ಆದರೂ ಕೆನಡಾದಲ್ಲಿ ರೂಪಾಂತರವನ್ನು ಪತ್ತೆ ಮಾಡಲಾಗಿದೆ. ಇದು ಕೇವಲ ಸಮಯದ ವಿಷಯವಾಗಿದ್ದು, ಸೋಂಕು ಹರಡುವಿಕೆ ವೇಗವನ್ನು ನಿಯಂತ್ರಿಸುವುದು ಮುಖ್ಯ ಗುರಿಯಾಗಿರಬೇಕು ಎಂದು ಯುಎಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಬ್ರೆಜಿಲ್ ಮಾಧ್ಯಮವು ಮಂಗಳವಾರ ಬ್ರೆಜಿಲ್‌ನಲ್ಲಿ ಈ ರೂಪಾಂತರವು ಕಾಣಿಸಿಕೊಂಡಿದೆ ಎಂದು ವರದಿ ಮಾಡಿದೆ.

ಸಾಂಕ್ರಾಮಿಕ ಪಿಡುಗು ತಮಗಿಂತ ಬಹಳಷ್ಟು ಹಿಂದೆ ಉಳಿದಿದೆ ಎಂದು ತಿಳಿದುಕೊಂಡ ರಾಷ್ಟ್ರಗಳು ಮೊದಲಿದ್ದ ಕಠಿಣ ನಿಯಮಗಳನ್ನು ತೆರವುಗೊಳಿಸಿದವು. ಇದರ ಬೆನ್ನಲ್ಲೇ ಮತ್ತೊಂದು ಅಲೆಯು ಹುಟ್ಟಿಕೊಳ್ಳುತ್ತಿದ್ದು, ಓಮಿಕ್ರಾನ್ ರೂಪಾಂತರವು ಸಾಂಕ್ರಾಮಿಕ ಪಿಡುಗು ಹೆಚ್ಚಾಗುವುದಕ್ಕೆ ಕಾರಣವಾಗುತ್ತಿದೆ. ಅದಾಗಲೇ ಲಸಿಕೆ ಕಂಪನಿಗಳು ಹೊಸ ರೂಪಾಂತರದ ವಿರುದ್ಧ ಹೋರಾಡುವ ಲಸಿಕೆಯನ್ನು ಶೋಧಿಸಲು ಮುಂದಾಗಿವೆ.

ರೆಜೆನೆರಾನ್ ಸಂಸ್ಥೆಯು ಕೋವಿಡ್-19 ಸೋಂಕಿಗೆ ಪರಿಣಾಮಕಾರಿಯಾದ ಮೊನೊಕ್ಲೋನಲ್ ಚುಚ್ಚುಮದ್ದಿನ ಪ್ರತಿಕಾಯ ಚಿಕಿತ್ಸೆಯು ಓಮಿಕ್ರಾನ್ ರೂಪಾಂತರದ ವಿರುದ್ಧ ಕೆಲಸ ಮಾಡದೇ ಇರಬಹುದು ಎಂದು ಮಂಗಳವಾರ ಹೇಳಿದೆ. ಮೆರ್ಕ್‌ನಿಂದ ಮಾಡಲ್ಪಟ್ಟ COVID ನ ತೀವ್ರತೆಯನ್ನು ಕಡಿಮೆ ಮಾಡಲು ಮೌಖಿಕ ಚಿಕಿತ್ಸೆಯ ಅನುಮೋದನೆಯನ್ನು US ಆಹಾರ ಮತ್ತು ಔಷಧ ಆಡಳಿತದ ಸಲಹಾ ಸಮಿತಿಯು ಶಿಫಾರಸು ಮಾಡಿದೆ.

ಕೊವಿಡ್-19 ಲಸಿಕೆ ಪಡೆಯದವರಲ್ಲಿ ಸೋಂಕು ಪತ್ತೆ

ಕೊವಿಡ್-19 ಲಸಿಕೆ ಪಡೆಯದವರಲ್ಲಿ ಸೋಂಕು ಪತ್ತೆ

ಪ್ರಾಥಮಿಕ ಹಂತದಲ್ಲಿ ಕೊರೊನಾವೈರಸ್ ಲಸಿಕೆಯನ್ನು ಶ್ರೀಮಂತ ರಾಷ್ಟ್ರಗಳಿಗೆ ಮಾತ್ರ ರವಾನಿಸಲಾಗಿದೆ. ಆಫ್ರಿಕನ್ನರು ಒಂದು ಡೋಸ್ ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವಾಗ ಇನ್ನೊಂದು ಕಡೆ ಶ್ರೀಮಂತ ರಾಷ್ಟ್ರಗಳಲ್ಲಿ ಜನರು ಮೂರನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಫ್ರಿಕಾದಲ್ಲಿ ಇಂದಿಗೂ ಬಹಳಷ್ಟು ಜನರು ಲಸಿಕೆಯನ್ನು ಪಡೆದುಕೊಂಡಿಲ್ಲ, ಇದೀಗ ಸಾಂಕ್ರಾಮಿಕ ರೋಗವು ಲಸಿಕೆ ಪಡೆದುಕೊಳ್ಳದವರಲ್ಲಿ ಹೆಚ್ಚಾಗಿ ಅಂಟಿಕೊಳ್ಳುತ್ತಿರುವುದು ಗೊತ್ತಾಗಿದೆ.

"ಲಸಿಕೆ ಇಕ್ವಿಟಿ ದಾನವಲ್ಲ; ಇದು ಪ್ರತಿ ದೇಶದ ಉತ್ತಮ ಹಿತಾಸಕ್ತಿಗಳಲ್ಲಿದೆ," ಎಂದು WHO ಮುಖ್ಯಸ್ಥ ಡಾ. ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ. "ನಾವು ಸಂಪೂರ್ಣವಾಗಿ ನಿಯಂತ್ರಿಸಲು ಅಥವಾ ತಡೆಯಲು ಸಾಧ್ಯವಾಗದ ಹಿನ್ನೆಲೆ ದೇಶಗಳು ಸಾಮಾನ್ಯ ವಿಧಾನವನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ" ಎಂದು ಅವರು ಹೇಳಿದರು. ಜಗತ್ತಿನಲ್ಲಿ ಕೊವಿಡ್-19 ಲಸಿಕೆಯ ಉತ್ಪಾದನೆ ಪ್ರಮಾಣ ಹೇರಳವಾಗಿದೆ, ಆದರೆ ಆಫ್ರಿಕನ್ ರಾಷ್ಟ್ರಗಳಲ್ಲಿ ಲಸಿಕೆ ವಿತರಣೆ ಮತ್ತು ಪೂರೈಕೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಸರಿಯಾದ ಸಮಯಕ್ಕೆ ಲಸಿಕೆಯು ಬಳಕೆಯಾಗದ ಹಿನ್ನೆಲೆ ಇತ್ತೀಚಿಗಷ್ಟೇ ದಕ್ಷಿಣ ಆಫ್ರಿಕಾ ಲಸಿಕೆಯ ಸಾಗಾಣಿಕೆಯನ್ನು ತಿರಸ್ಕರಿಸಿತ್ತು.

ಯುರೋಪಿನಲ್ಲಿ ಒಂದು ವಾರಕ್ಕೆ 20 ಲಕ್ಷ ಹೊಸ ಪ್ರಕರಣ

ಯುರೋಪಿನಲ್ಲಿ ಒಂದು ವಾರಕ್ಕೆ 20 ಲಕ್ಷ ಹೊಸ ಪ್ರಕರಣ

ಯುರೋಪಿಯನ್ ರಾಷ್ಟ್ರಗಳು ಪ್ರತಿವಾರ 20 ಲಕ್ಷಕ್ಕಿಂತ ಹೆಚ್ಚು ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇದು ಜಗತ್ತಿನಲ್ಲಿ ವರದಿಯಾಗುವ ಒಟ್ಟು ಪ್ರಕರಣಗಳ ಅರ್ಧಕ್ಕಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊವಿಡ್-19 ಲಸಿಕೆ ಮತ್ತು ಸುಧಾರಿತ ಚಿಕಿತ್ಸೆಯಿಂದಾಗಿ ಸಾವಿನ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ. ಜರ್ಮನಿ, ನೆದರ್ ಲ್ಯಾಂಡ್, ಬೆಲ್ಜಿಯಂ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಡೆನ್ಮಾರ್ಕ್ ಮತ್ತು ನಾರ್ವೆಗಳಲ್ಲಿ ಕಳೆದ ವಾರ ಹೊಸ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಈ ಪೈಕಿ ಹಲವು ರಾಷ್ಟ್ರಗಳು ನವೆಂಬರ್‌ನಲ್ಲಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ರಾಷ್ಟ್ರಗಳು ಇದೀಗ ಓಮಿಕ್ರಾನ್ ರೂಪಾಂತರದ ಭೀತಿಯನ್ನು ಎದುರಿಸುತ್ತಿವೆ.

English summary
Number of countries Omicron Covid Variant has been found increased to at least 20, raising questions about whether the pandemic is about to surge once again. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X