ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವ್ಯಾಕ್ಸಿನ್ ಒಮಿಕ್ರೋನ್ ವಿರುದ್ಧ ಪರಿಣಾಮಕಾರಿಯೇ?

|
Google Oneindia Kannada News

ನವದೆಹಲಿ, ಡಿಸೆಂಬರ್ 01: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರೋನ್ ಕೊರೊನಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿಯೇ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ.

ಒಮಿಕ್ರೋನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಹಲವು ದೇಶಗಳು ವೈರಸ್ ಹರಡದಂತೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿವೆ. ಇನ್ನು ಈ ವೈರಸ್​ಗೆ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗುತ್ತದೆಯೇ ಎಂಬ ಅಧ್ಯಯನ ನಡೆದಿದೆ.

ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ

'ಸದ್ಯ ಇರುವ ಕೋವಿಡ್ ಲಸಿಕೆಗಳು ಈ ರೂಪಾಂತರಿ ವೈರಸ್​ ವಿರುದ್ಧ ಅಷ್ಟು ಪರಿಣಾಮಕಾರಿ ಆಗದಿರಬಹುದು ಎಂದು ಔಷಧ ತಯಾರಿಕಾ ಕಂಪನಿಯ ಮೊಡೆರ್ನಾ ಸಿಇಒ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ಒಮಿಕ್ರೋನ್​ಗೆ ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆ ಭಾರತ್ ಬಯೋಟೆಕ್ ಸಂಶೋಧನೆ ನಡೆಸಿದೆ.

Omicron: Bharat Biotech Studying If Covaxin Shot Will Work on New Covid Variant

ಕೋವಿಡ್ ವಿರುದ್ಧ ಕೋವ್ಯಾಕ್ಸಿನ್ ಶೇ.77.8 ರಷ್ಟು ಪರಿಣಾಮ ಬೀರಿದೆ. ಡೆಲ್ಟಾ ರೂಪಾಂತರಿ ವಿರುದ್ಧ ಈ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಇನ್‌ಫೆಕ್ಷಿಯಸ್ ಡಿಸೀಸ್ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ದಾಖಲಾಗಿದೆ.

ಕೋವಿಡ್​ಗೆ ರಾಮಬಾಣವಾಗಿ ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ 'ಕೋವ್ಯಾಕ್ಸಿನ್' ತಯಾರಿಸಿತ್ತು. ಈ ಲಸಿಕೆ ಡೆಲ್ಟಾ ಸೇರಿ ಕೋವಿಡ್​ನ ಇತರೆ ರೂಪಾಂತರಿ ವೈರಸ್​ ವಿರುದ್ಧವೂ ಪರಿಣಾಮಕಾರಿ ಕೆಲಸ ಮಾಡಿರುವುದು ಅಧ್ಯಯನದಿಂದ ತಿಳಿದಿದೆ. ಈ ಹೊಸ ರೂಪಾಂತರಿ ಮೇಲೆ ಲಸಿಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬ ಅಧ್ಯಯನ ಮಾಡುತ್ತಿದ್ದೇವೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಕೋವಿಡ್‌ (Covid 19) ಬಗ್ಗೆ ಮಾತಾಡುವವರು ಈಗ ಕಡಿಮೆಯಾಗಿದ್ದಾರೆ. ಎಲ್ಲರ ಬಾಯಲ್ಲೂ ಒಮಿಕ್ರೋನ್‌ನದ್ದೇ ಮಾತು. ಆ ಡೆಡ್ಲೀ ವೈರಸ್‌ ಕೋವಿಡ್‌ಗಿಂತ ಹೆಚ್ಚು ತೀವ್ರವಾಗಿ ನಮ್ಮ ಮೇಲೆ ಆಕ್ರಮಣ ಮಾಡುತ್ತದಾ, ಅದು ಬಂದರೆ ಸಾವು ಖಂಡಿತವಾ ಅಥವಾ ಅದು ಕೋವಿಡ್‌ನಷ್ಟು ತೀವ್ರವಾಗಿ ಬಾಧಿಸೋದಿಲ್ವಾ..

ಈ ಕುರಿತು ಅಂತೆಕಂತೆಗಳೇ ಹರಿದಾಡುತ್ತಿವೆ. ಇದು ವಿಶ್ವಕ್ಕೇ ಹೊಸ ಬಗೆಯ ಸಮಸ್ಯೆಯಾದ ಕಾರಣ ಉತ್ತರ ಹುಡುಕಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆಯೇ ವಿನಃ ಇದಕ್ಕೆ ಖಚಿತ ಉತ್ತರ ನೀಡುವುದು ಕಷ್ಟವೇ.

ಇದರ ಜೊತೆಗೆ ನಮ್ಮ ಜನರನ್ನು ಇನ್ನೊಂದು ಸಂದೇಹ ಬಾಧಿಸುತ್ತಿದೆ. ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವ್-2 ನ ಒಮಿಕ್ರೋನ್ ರೂಪಾಂತರದ ವಿರುದ್ಧ ಲಸಿಕೆ ಕಾರ್ಯ ನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಇದೀಗ ಹಲವರಲ್ಲಿ ಪ್ರಶ್ನೆ ಮೂಡಲು ಕಾರಣವಾಗಿದೆ.

ಒಮಿಕ್ರೋನ್ ರೂಪಾಂತರದಲ್ಲಿ ಕಂಡುಬರುವ ಅಂಶವೆಂದರೆ ಅದರ ಸ್ಪೈಕ್ ಪ್ರೋಟೀನ್ 30ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಸ್ಪೈಕ್ ಪ್ರೋಟೀನ್‌ನ ರಿಸೆಪ್ಟರ್-ಬೈಂಡಿಂಗ್ ಡೊಮೇನ್ ಅಥವಾ ಆರ್ ಬಿ ಡಿ ಎಂದು ಕರೆಯಲ್ಪಡುವ ಈ ಹತ್ತು ರೂಪಾಂತರಗಳು ಕಂಡು ಬರುತ್ತವೆ. ಆರ್ ಬಿ ಡಿ ಎಂಬುದು ಸ್ಪೈಕ್ ಪ್ರೋಟೀನ್‌ನ ಭಾಗವಾಗಿದ್ದು, ಅದು ಮಾನವ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ. ಸ್ಪೈಕ್ ಪ್ರೊಟೀನ್‌ಗಳು ಕೊರೊನಾ ವೈರಸ್‌ನ ಒಂದೇ ಭಾಗವಲ್ಲ. ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಗುರಿಯಾಗಿಸಬಹುದು.

ಹಿಂದಿನ ಸೋಂಕು ಅಥವಾ ಲಸಿಕೆಗೆ ಪ್ರತಿಯಾಗಿ ದೇಹದಲ್ಲಿ ಬೆಳೆಯುವ ಪ್ರತಿಕಾಯಗಳು ಮತ್ತು ಟಿ ಕೋಶಗಳು ನಿರ್ದಿಷ್ಟ ಕೋಶಗಳು ಮತ್ತು ರೋಗಕಾರಕಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ಇನ್ನೂ ರೂಪಾಂತರಿ ಸಾರ್ಸ್-ಕೋವ್-2 ವಿರುದ್ಧ ರಕ್ಷಣೆ ನೀಡುತ್ತವೆ

ಕೋವಿಡ್‌ ನಿಂದ ಜನರನ್ನು ಪಾರು ಮಾಡಲು ದೇಶದೆಲ್ಲೆಡೆ ಕೋವಿಡ್‌ ಲಸಿಕೆ ಅಭಿಯಾನ ಬಹಳ ಚರುಕಾಗಿ ನಡೆದಿತ್ತು. ಪರಿಣಾಮ ಹೆಚ್ಚಿನ ಜನರು ಕೋವಿಡ್-19 ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಮಕ್ಕಳನ್ನು ಹೊರತುಪಡಿಸಿದರೆ ಉಳಿದ ಹೆಚ್ಚಿನವರು ಲಸಿಕೆ ಪಡೆದವರೇ.

ಆದರೆ ಈ ಲಸಿಕೆ ಒಮಿಕ್ರೋನ್‌ ವಿರುದ್ಧವೂ ಕಾರ್ಯ ನಿರ್ವಹಿಸುತ್ತಾ, ಅಥವಾ ಅದಕ್ಕೆ ಬೇರೆ ಲಸಿಕೆ ಪಡೆದುಕೊಳ್ಳಬೇಕಾ, ಹೀಗೆ ಪ್ರತಿ ವರ್ಷ ಹೊಸ ಹೊಸ ರೂಪಾಂತರಗಳು ಬರುತ್ತಿದ್ದರೆ ಜನ ಸಾಮಾನ್ಯರ ಬದುಕು ಹೇಗೆ ನಡೆಯಬೇಕು ಎಂಬಿತ್ಯಾದಿ ಪ್ರಶ್ನೆಗಳೂ ಎದ್ದಿವೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸಾರ್ಸ್-ಕೋವ್-2 ವಿರುದ್ಧ ಲಸಿಕೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಗಮನಿಸಬೇಕು.

ಹೆಚ್ಚಿನ ಲಸಿಕೆಗಳು ವೈರಸ್‌ನ ಸ್ಪೈಕ್ ಪ್ರೋಟೀನ್ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಇದು ಮಾನವ ಜೀವಕೋಶವನ್ನು ಪ್ರವೇಶಿಸಲು ಬಳಸುವ ಕೊರೊನಾ ವೈರಸ್ ನ ಭಾಗವಾಗಿದೆ. ಸಾರ್ಸ್-ಕೋವ್-2 ನ ಸ್ಪೈಕ್ ಪ್ರೋಟೀನ್ ಅನ್ನು ಗುರುತಿಸಲು ಮತ್ತು ವೈರಸ್ ದೇಹವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅದರ ಮೇಲೆ ದಾಳಿ ಮಾಡಲು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ತರಬೇತಿ ಮಾಡುವ ಮೂಲಕ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ.

Recommended Video

Dravid ಮುಂದಿನ ಪಂದ್ಯಕ್ಕಾಗಿ ಏನೇನು ಉಪಾಯ ಮಾಡಿದ್ದಾರೆ | Oneindia Kannada

English summary
Amid the rising concerns over the new covid variant, Omicron, Bharat Biotech on Tuesday said that the company is studying whether its indegenously developed Covaxin will work against the new variant or not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X