ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ ಬಗ್ಗೆ ಟ್ವೀಟ್ ಮಾಡಿದ ಒಮರ್, ಕೆರಳಿದ ಸಿಟಿ ರವಿ

ಪರ್ವೇಜ್ ಮುಷರಫ್ ಗೆ ಎಚ್ ಡಿ ದೇವೇಗೌಡರನ್ನು ಹೋಲಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ ರವಿ ಕಿಡಿಕಾರಿದ್ದಾರೆ. ಟ್ವಿಟ್ಟರಲ್ಲಿ ಒಮರ್ ವಿರುದ್ಧ ಟ್ವೀಟ್ಸ್ ಹರಿದು ಬರುತ್ತಿವೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ಭಾರತದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಹೋಲಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ ರವಿ ಕಿಡಿಕಾರಿದ್ದಾರೆ. ಟ್ವಿಟ್ಟರಲ್ಲಿ ಒಮರ್ ವಿರುದ್ಧ ಟ್ವೀಟ್ಸ್ ಹರಿದು ಬರುತ್ತಿವೆ.

ಭಾರತದ ಸೇನಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ನೀಡ್ರುವ ಪಾಕಿಸ್ತಾನ ಸರ್ಕಾರದ ಕ್ರಮ, ಮಾಜಿ ಅಧ್ಯಕ್ಷ ಮುಶ್ರಫ್‌ ಟಿವಿ ಚಾನಲ್‌ವೊಂದಕ್ಕೆ ನೀಡಲಿದ್ದ ಸಂದರ್ಶನದ ಬಗ್ಗೆ ಜಮ್ಮುಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಟೀಕಿಸಿ ಟ್ವೀಟ್ ಮಾಡಿದ್ದರು.[ದೇವೇಗೌಡರಿಗೆ ಅವಮಾನ, ಮಂಗಳವಾರ ಜೆಡಿಎಸ್ ಪ್ರತಿಭಟನೆ]

ಮುಶ್ರಫ್‌ರನ್ನು ಸಂದರ್ಶನ ಮಾಡುವುದು ಒಂದೇ ಭಾರತದ ಅಭಿವೃದ್ಧಿ ಬಗ್ಗೆ ಪಾಕ್‌ನ ಮಾಧ್ಯಮಗಳು ದೇವೇಗೌಡರ ಜೊತೆ ಚರ್ಚಿಸುವುದು ಒಂದೇ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು

ಒಮರ್ ಅಬ್ದುಲ್ಲಾ ಟ್ವೀಟ್

ಒಮರ್ ಅಬ್ದುಲ್ಲಾ ಟ್ವೀಟ್

ಮುಶ್ರಫ್‌ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಹೋಲಿಕೆ ಮಾಡಿ ವಿವಾದಿತ ಟ್ವೀಟ್ ಮಾಡಿದ್ದರು. ಇದಕ್ಕೆ ಕಳೆದ ಎರಡು ದಿನಗಳಿಂದ ಭಾರಿ ಟೀಕೆ ವ್ಯಕ್ತವಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಕ್ಷಮೆಯಾಚಿಸುವಂತೆ ಅನೇಕರು ಆಗ್ರಹಿಸಿದ್ದಾರೆ.

ಏನಿದೆ ಟ್ವೀಟ್ ನಲ್ಲಿ?

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರನ್ನು ಪಾಕ್‌ನ ಮಾಜಿ ಅಧ್ಯಕ್ಷ ಫರ್ವೆಜ್ ಮುಶ್ರಫ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಪಾಕಿಸ್ತಾನದ ಮಾಧ್ಯಮಗಳು ದೇವೇಗೌಡರನ್ನು ಪಾಕಿಸ್ತಾನದ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಒಂದೇ,ಮುಶ್ರಫ್‌ರನ್ನು ಸಂದರ್ಶನ ಮಾಡಿ ಭಾರತದ ಬೆಳವಣಿಗೆ ಬಗ್ಗೆ ಕೇಳುದು ಒಂದೇ ಎಂದಿದೆ.

ದೇವೇಗೌಡರು ಕರ್ನಾಟಕದ ಮಣ್ಣಿನ ಮಗ

ದೇವೇಗೌಡರು ಕರ್ನಾಟಕದ ಮಣ್ಣಿನ ಮಗ. ದೇವೇಗೌಡರು ದೇಶಕ್ಕೆ ನೀಡಿದ ಕೊಡುಗೆಗೂ ಅಬ್ದುಲ್ಲಾ ಕುಟುಂಬ ಮಾಡಿದ ಅಭಿವೃದ್ಧಿಗೂ ಎಂದೂ ಹೋಲಿಕೆಯಾಗದು' ಎಂದು ಟ್ವೀಟ್ ಮಾಡಿ ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಳಿತಗಳ ಹೋಲಿಕೆ

ಮಾಜಿ ಪ್ರಧಾನಿ, ಸಿಎಂ ದೇವೇಗೌಡರ ಆಡಳಿತ ವೈಖರಿಯ ಬಗ್ಗೆ ಕೂಡಾ ಚರ್ಚೆ ನಡೆದಿದೆ.

ಪರಿಶ್ರಮ ಇದ್ದೆ ಸಿಎಂ

ದೇವೇಗೌಡರು ಪರಿಶ್ರಮದಿಂದಾಗಿ ಪ್ರಧಾನಿಯಾಗಿದ್ದು, ನಿಮ್ಮಂತೆ ಕುಟುಂಬದ ಬೆಂಬಲದಿಂದಲ್ಲ ಎಂದು ಒಮರ್ ಅವರನ್ನು ಟೀಕಿಸಲಾಗಿದೆ

English summary
In his attempt to criticise a channel's talk show, Omar Abdullah ended up offending hundreds of netizens by likening former Prime Minister Deve Gowda to General Musharraf. What followed was massive trolling of the former Jammu Kashmir Chief Minister. Omar Abdullah's comments were termed 'borderline racist' to 'immature' by those who took offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X