ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಡಿಟಿಎಚ್‌ ಪೋರ್ಟೆ‌‌ಬಿಲಿಟಿ ಮಾಡಿ

By Ashwath
|
Google Oneindia Kannada News

ನವದೆಹಲಿ, ಜು.30: ಮೊಬೈಲ್‌ ನಂಬರ್‌, ಗ್ಯಾಸ್‌ ಪೋರ್ಟೆ‌‌ಬಿಲಿಟಿ ಆಯ್ತು. ಇನ್ನು ಮುಂದೆ ಡಿಟಿಎಚ್‌‌ ನಂಬರ್‌‌ನ್ನು ಪೋರ್ಟೆ‌‌ಬಿಲಿಟಿ ಮಾಡಬಹುದು.

ಡಿಟಿಎಚ್‌ ಗ್ರಾಹಕರಿಂದ ವ್ಯಾಪಕ ದೂರು ಬರುತ್ತಿರುವ ಹಿನ್ನಲೆಯಲ್ಲಿ ಡಿಟಿಎಚ್‌‌ ಪೋರ್ಟೆ‌ಬಿಲಿಟಿ ಮಾಡಲು ಸರ್ಕಾರ ಕಾನೂನು ರೂಪಿಸಲು ಮುಂದಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಯದ ಅಧಿಕಾರಿಗಳು ತಿಳಿಸಿದ್ದಾರೆ.[ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ?]

ಈ ಕಾನೂನು ಜಾರಿಗೆ ಬಂದಲ್ಲಿ ಗ್ರಾಹಕರು ಈಗ ತಾವು ಬಳಸುತ್ತಿರುವ ಡಿಟಿಎಚ್‌ ಉಪಕರಣವನ್ನು ಬದಲಾಯಿಸದೇ ಬೇರೊಂದು ಕಂಪೆನಿಯ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

 DTH portability

ಕಂಪೆನಿಗಳು ಡಿಟಿಎಚ್‌ ಸೇವೆಗಾಗಿ ಬೇರೆ ಬೇರೆ ತಂತ್ರಜ್ಞಾನವನ್ನು ಬಳಸುತ್ತಿರುವುದರಿಂದ ಸದ್ಯಕ್ಕೆ ಈ ಕಾನೂನು ಜಾರಿಯಾಗಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಡಿಟಿಎಚ್‌ ಕಂಪೆನಿಗಳು ಏಕರೂಪದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.

ಎಲ್ಲಾ ಡಿಟಿಎಚ್‌ ಕಂಪೆನಿಗಳು ಏಕರೂಪದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸೇವೆ ನೀಡಬೇಕೆಂಬ ನಿಯಮವಿದೆ. ಆದರೆ ಕಂಪೆನಿಗಳು ಈ ನಿಯಮವನ್ನು ಗಾಳಿಗೆ ತೂರಿ ತಮ್ಮ ಉಪಕರಣಗಳನ್ನು ಬೇರೆ ಕಂಪೆನಿಯ ಜೊತೆ ಬಳಸಲು ಸಾಧ್ಯವಾಗದಂತೆ ತಯಾರಿಸಿ ಗ್ರಾಹಕರಿಗೆ ನೀಡುತ್ತಿವೆ.

ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಲೈಸೆನ್ಸ್‌ ನೀಡುವಾಗ ಡಿಟಿಎಚ್‌ ಕಂಪೆನಿಗಳು ಏಕರೂಪದ ತಂತ್ರಜ್ಞಾನ ಹೊಂದಿರುವ ಉಪಕರಣವನ್ನು ಕಡ್ಡಾಯ ಮಾಡುವಂತೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ಗೆ ಸೂಚಿಸಿದೆ.

English summary
Consumers dissatisfied with the services of their direct-to-home (DTH) operator may soon be able to shift to another one without having to change the set-top box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X