ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಒಲಾ

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 17 : ಭಾರತದ ಅತೀದೊಡ್ಡ ಕ್ಯಾಬ್ ಸೇವಾ ಸಂಸ್ಥೆ ಒಲಾ 1000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿರುವುದಾಗಿ ಬುಧವಾರ ಪ್ರಕಟಿಸಿದೆ.

ಕೆಲಸದಿಂದ ತೆಗೆಯಲಾಗಿರುವ ಉದ್ಯೋಗಿಗಳ ನಿರ್ದಿಷ್ಟ ಅಂಕಿಸಂಖ್ಯೆಯನ್ನು ನೀಡಲು ಕಂಪನಿ ನಿರಾಕರಿಸಿದೆಯಾದರೂ, ಟ್ಯಾಕ್ಸಿ ಫಾರ್ ಶೂರ್ ಕಂಪನಿಗಾಗಿ ಕೆಲಸ ಮಾಡುತ್ತಿದ್ದವರನ್ನು ಕೆಲಸದಿಂದ ತೆಗೆದಿರುವುದಾಗಿ ಹೇಳಿಕೆ ನೀಡಿದೆ. ಹಾಗೆಯೆ, ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳಿಗೆ ಪರಿಹಾರ ನೀಡಿ, ಮುಂದೆ ಸಹಾಯ ಮಾಡುವುದಾಗಿಯೂ ಹೇಳಿದೆ.[ಓಲಾ, ಊಬರ್ ಟ್ಯಾಕ್ಸಿ ರದ್ದು ಮಾಡಿದರೂ ದಂಡ ಕಟ್ಟಬೇಕು!]

Ola give pink slip to more than thousand employees

ಅಂತಾರಾಷ್ಟ್ರೀಯ ಕಂಪನಿಯಾದ ಉಬರ್ ಜೊತೆ ಸೆಡ್ಡು ಹೊಡೆಯುವ ಪ್ರಯತ್ನವಾಗಿ ಕಳೆದ ವರ್ಷದ ಮಾರ್ಚ್ ನಲ್ಲಿ ಒಲಾ ಕಂಪನಿ ಟ್ಯಾಕ್ಸಿ ಫಾರ್ ಶೂರ್ ಕಂಪನಿಯನ್ನು 200 ಮಿಲಿಯನ್ ಡಾಲರ್‌ಗೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ತದ ನಂತರ 90ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ.[ಬೆಂಗಳೂರಲ್ಲೂ ಓಲಾ ಲಕ್ಸ್ : ಐಷಾರಾಮಿ ಕಾರಲ್ಲಿ ಸುತ್ತಾಡಿ]

ಈ ಪ್ರಕ್ರಿಯೆ ಮುಗಿದ ನಂತರವೂ ಒಲಾ ಮತ್ತು ಟ್ಯಾಕ್ಸಿ ಫಾರ್ ಶೂರ್ ಕಂಪನಿಗಳು ಪ್ರತ್ಯೇಕವಾಗಿಯೇ ಕೆಲಸ ನಿರ್ವಹಿಸುತ್ತಿವೆ. ಈ ಬೆಳವಣಿಗೆ ನಡೆದ ನಂತರ ಟ್ಯಾಕ್ಸಿ ಫಾರ್ ಶೂರ್ ಕಂಪನಿಯ ಚಾಲಕರು ಒಲಾದ ಆಪ್ ಅನ್ನು ಬಳಸುತ್ತಿವೆ. ಒಂದು ಮೂಲದ ಪ್ರಕಾರ 1300 ಟ್ಯಾಕ್ಸಿ ಫಾರ್ ಶೂರ್ ಉದ್ಯೋಗಿಗಳಲ್ಲಿ ಕೇವಲ 250 ಉದ್ಯೋಗಿಗಳನ್ನು ಮಾತ್ರ ಒಲಾ ಉಳಿಸಿಕೊಂಡಿದೆ.[ಕರ್ನಾಟಕದಲ್ಲಿ ಓಡಾಡುವ ಓಲಾಕ್ಕೆ ಸಿಕ್ತು ಪರವಾನಗಿ]

ಇತ್ತೀಚೆಗೆ ಫ್ಲಿಪ್ ಕಾರ್ಟ್ ದೇಶದಾದ್ಯಂತ ಸುಮಾರು 650 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ಫೋಸಿಸ್ ಕೂಡ ಸುಮಾರು 3000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿರುವುದಾಗಿ ಸುದ್ದಿ ಹಬ್ಬಿತ್ತು. ಸಾಫ್ಟ್ ವೇರ್ ಕಂಪನಿ ಸಿಸ್ಕೋ ವಿಶ್ವದಾದ್ಯಂತ 12 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುತ್ತಿದೆ. ಈಗ ಒಲಾದ ಸರದಿ.

English summary
India's largest cab aggregator company Ola has laid off more than 1000 employees belonging to Taxi For Sure, which was acquired by Ola last year in March. In a statement given on Wednesday, the company has said it will help the people who have lost job find another job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X