ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾದಲ್ಲಿ ತರಬೇತಿ ಏರ್ ಕ್ರಾಫ್ಟ್ ಅಪಘಾತ, ಇಬ್ಬರು ಸಾವು

|
Google Oneindia Kannada News

ಧೆಂಕನಾಲ್(ಒಡಿಶಾ), ಜೂನ್ 8: ಕೊರೊನಾವೈರಸ್ ಲಾಕ್ಡೌನ್ ನಡುವೆ ಅನ್ ಲಾಕ್ 1.0 ಆರಂಭವಾಗಿದೆ. ಲಾಕ್ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ತರಬೇತಿ ಕೇಂದ್ರಗಳು ಆರಂಭವಾಗಿದೆ. ಆದರೆ, ಮೊದಲ ದಿನವೇ ದುರಂತ ಸಂಭವಿಸಿದೆ. ಧೆಂಕನಾಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಏರ್ ಕ್ರಾಫ್ಟ್ ನೆಲಕಪ್ಪಳಿಸಿದೆ.

Recommended Video

Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ |

ತರಬೇತಿ ಲಘು ವಿಮಾನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಮಹಿಳಾ ಪೈಲಟ್ ಹಾಗೂ ಮಾರ್ಗದರ್ಶಕರೊಬ್ಬರು ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಕಂಕದಹಾದ ಪೊಲೀಸ್ ಠಾಣೆ ವ್ಯಾಪ್ತಿಯ ಬಿರ್ಸಾಲಾದ ಸರ್ಕಾರಿ ವಿಮಾನಯಾನ ತರಬೇತಿ ಕೇಂದ್ರ(GATI)ಗೆ ಸೇರಿದ ಏರ್ ಕ್ರಾಫ್ಟ್ ಇದಾಗಿದೆ.

Odisha:Trainer aircraft crashed, two pilots killed

ತರಬೇತಿ ಕೇಂದ್ರದಿಂದ ಟೇಕಾಫ್ ಆದ ಕೆಲ ಕ್ಷಣದಲ್ಲೇ ನಿಯಂತ್ರಣ ತಪ್ಪಿದ ಏರ್ ಕ್ರಾಫ್ಟ್ ಗಿರಕಿ ಹೊಡೆಯುತ್ತಾ ನೆಲಕ್ಕುರುಳಿದೆ. ಏರ್ ಕ್ರಾಫ್ಟ್ ಪತನಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆದಿದೆ. ತಾಂತ್ರಿಕ ತೊಂದರೆ ಅಥವಾ ಪ್ರತಿಕೂಲ ಹವಾಮಾನ ಇರಬಹುದು ಎಂದು ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ. ಏರ್ ಕ್ರಾಫ್ಟ್ ನಲ್ಲಿರುವ ಬ್ಲಾಕ್ ಬಾಕ್ಸ್ ಸಿಕ್ಕ ತಕ್ಷಣ ಹೆಚ್ಚಿನ ಮಾಹಿತಿ ಸಿಗಲಿದೆ.

ಮೃತರನ್ನು ಬಿಹಾರ ಮೂಲದ ಕ್ಯಾಪ್ಟನ್ ಸಂಜೀಬ್ ಕುಮಾರ್ ಹಾಗೂ ತಮಿಳುನಾಡು ಮೂಲದ ತರಬೇತಿ ಪೈಲಟ್ ಅನಿಸ್ ಫಾತಿಮಾ ಎಂದು ಗುರುತಿಸಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆ ಜಾರಿಯಲ್ಲಿದ್ದು, ವರದಿ ಬಂದ ಬಳಿಕ ಹೆಚ್ಚಿನ ವಿವರ ಸಿಗಲಿದೆ.

English summary
Odisha: Captain Sanjib Kumar Jha from Bihar and Anis Fatima, a trainee pilot from Tamil Nadu, lost their lives after a trainer aircraft crashed today at Birasal Airstrip under Kankadahad police station limits in Dhenkanal district. Bodies have been sent for postmortem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X