ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವದೇಶಿ ನಿರ್ಮಿತ ಅಗ್ನಿ-1 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ

By Mahesh
|
Google Oneindia Kannada News

ಬಾಲಸೂರ್(ಒರಿಸ್ಸಾ), ಮಾ.14: ಸ್ವದೇಶಿ ನಿರ್ಮಿತ ಅಗ್ನಿ-1 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಸೋಮವಾರ ಒರಿಸ್ಸಾ ಕಡಲ ತೀರದಲ್ಲಿ ಯಶಸ್ವಿಯಾಗಿದೆ. ಸುಮಾರು 700 ಮೀಟರ್‌ಗೂ ದೂರದ ಗುರಿಗೆ ಅಪ್ಪಳಿಸುವ ಸಾಮರ್ಥ್ಯದ ಮಧ್ಯಮ ವ್ಯಾಪ್ತಿಯ ಸ್ವದೇಶಿ ನಿರ್ಮಿತ ಕ್ಷಿಪಣಿ ಇದಾಗಿದೆ.

ಒರಿಸ್ಸಾದ ಇಲ್ಲಿನ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಸೋಮವಾರ ಬೆಳಗ್ಗೆ 9.15ಕ್ಕೆ ಸರಿಯಾಗಿ, ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಒಂದೇ ಹಂತದಲ್ಲಿ ಸ್ಪೋಟಿಸುವ ಸಾಮರ್ಥ್ಯವುಳ್ಳ ಅಗ್ನಿ-1 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಉಡಾವಣೆ ಯಶಸ್ವಿ]

Odisha: Agni -1 Ballistic missile test fired successfully

ಈ ದೇಶೀ ನಿರ್ಮಿತ ಕ್ಷಿಪಣಿ ಪ್ರತಿ ಸೆಕೆಂಡ್ ಗೆ 2.5 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲದು., 9 ನಿಮಿಷ 36 ಸೆಕೆಂಡ್‌ಗಳಲ್ಲಿ 700 ಕಿ.ಮೀ ಕ್ರಮಿಸಿ ಅಪ್ಪಳಿಸಬಲ್ಲದು. ಅಗ್ನಿ ಕ್ಷಿಪಣಿ 12 ಟನ್ ತೂಕವಿದ್ದು, 15 ಮೀಟರ್ ಉದ್ದವಿದೆ. [ಅಗ್ನಿ 5 ವ್ಯಾಪ್ತಿಯಲ್ಲಿ ಇಡೀ ಚೀನಾ]

ಸುಮಾರು 1 ಟನ್‌ಗೂ ಹೆಚ್ಚು ತೂಕದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. 2015ರ ನವೆಂಬರ್ 27ರಂದು ಖಡಾಂತರಿ (surface-to-surface) ಅಗ್ನಿ-1 ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ-1 ಕ್ಷಿಪಣಿಯ ಮೊದಲ ಉಡಾವಣಾ ಪರೀಕ್ಷೆ 1989ರಲ್ಲಿ ನಡೆಸಲಾಗಿತ್ತು. ನಂತರ ಇದರ ಪ್ರಯೋಗಾತ್ಮಕ ಪರೀಕ್ಷೆ 2015ರ ನವೆಂಬರ್ 27ರಂದು ನಡೆಸಲಾಗಿತ್ತು.

English summary
The indigenously-built nuclear capable Agni-I ballistic missile was test fired off Odisha's coast as part of a user trial by the army. The surface to surface, single stage missile is powered by solid propellants and can hit targets 700 kilometers away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X