ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ, ವಿಡಿಯೋ ರವಾನೆ ಹೆಚ್ಚಳ

|
Google Oneindia Kannada News

ನವದೆಹಲಿ, ಮೇ.4: ತಂತ್ರಜ್ಞಾನ ಹೆಚ್ಚಿದಂತೆ ಅದರ ದುರ್ಬಳಕೆಯ ಬಗೆಗಳು ಹೆಚ್ಚಾಗುತ್ತಿವೆ. 2012-13 ರ ಅವಧಿಯಲ್ಲಿ ಮೊಬೈಲ್ ಮೂಲಕ ಅಶ್ಲೀಲ ಚಿತ್ರ ರವಾನೆ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ ನೀವು ಬೆಚ್ಚಿ ಬೀಳುವುದು ಖಂಡಿತ. ಹೌದು ಒಂದು ವರ್ಷದ ಅವಧಿಯಲ್ಲಿ ಶೇ. 104ರಷ್ಟು ಹೆಚ್ಚಾಗಿದೆ.

ದೇಶಾದ್ಯಂತ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮೊಬೈಲ್ ಮೂಲಕ ಅಶ್ಲೀಲ ಚಿತ್ರ ಅಥವಾ ವಿಡಿಯೋಗಳ ರವಾನೆಯಲ್ಲಿ ದೇಶದಲ್ಲೇ ಆಂಧ್ರ ಪ್ರದೇಶ ಮೊದಲಿಗನಾಗಿದ್ದರೆ ಕರ್ನಾಟಕಕ್ಕೆ ಎಂಟನೇ ಸ್ಥಾನ ಎಂದು ರಾಷ್ಟ್ರೀಯ ಅಪರಾಧ ತನಿಖಾ ದಳ ಮಾಹಿತಿ ನೀಡಿದೆ. ಈ ಬಗ್ಗೆ ಸಮೀಕ್ಷೆ ನಡೆಸಿರುವ ಇಂಡಿಯಾ ಸ್ಪೆಂಡ್ ಅನೇಕ ಮಾಹಿತಿ ಕಲೆಹಾಕಿದೆ.[ಲೈಂಗಿಕ ತೃಪ್ತಿ, ಜಾಗತಿಕ ಸಮೀಕ್ಷೆಯ ಫಲಿತಾಂಶ ಪ್ರಕಟ]

ಕಳೆದ ವಾರ ನಟಿ ರಾಧಿಕಾ ಆಪ್ಟೆ ಕುರಿತ ಅಶ್ಲೀಲ ಚಿತ್ರವೊಂದು ವಾಟ್ಸಪ್ ಗೆ ತಳ್ಳಲ್ಪಟ್ಟಿತ್ತು. ಕ್ಷಣ ಮಾತ್ರದದಲ್ಲಿ ವೈರಲ್ ಆದ ವಿಡಿಯೋ ಲಕ್ಷಾಂತರ ಪಡ್ಡೆ ಹುಡುಗರ ಮೊಬೈಲ್ ಸೇರಿತ್ತು. ಈ ಬಗ್ಗೆ ಮುಂಬೈ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಮತ್ತಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.[ಹಾಟ್ ನಟಿ ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ]

ಸ್ಮಾರ್ಟ್ ಫೋನ್ ಸಂಖ್ಯೆ ಹೆಚ್ಚಳ ಕಾರಣವೇ?

ಸ್ಮಾರ್ಟ್ ಫೋನ್ ಸಂಖ್ಯೆ ಹೆಚ್ಚಳ ಕಾರಣವೇ?

ಇಂಥ ವ್ಯವಹಾರ ಹೆಚ್ಚಲು ಸ್ಮಾರ್ಟ್ ಫೋನ್ ಗಳ ಸಂಖ್ಯೆ ಹೆಚ್ಚಳ ಕಾರಣವೇ? ಎಂಬ ಪ್ರಶ್ನೆ ಮೂಡಿದರೆ ಉತ್ತರ ಬೇರೆಯದನ್ನೇ ಹೇಳುತ್ತದೆ. ಮೊಬೈಲ್ ಅಪ್ಲಿಕೇಶನ್ ಗಳ ಹೆಚ್ಚಳ, ಆಂಡ್ರಾಯ್ಡ್ ಕೊಡುಗೆಗಳು ಇದಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ.

ರವಿಶಂಕರ್ ಪ್ರಸಾದ್ ಏನು ಹೇಳಿದ್ದರು?

ರವಿಶಂಕರ್ ಪ್ರಸಾದ್ ಏನು ಹೇಳಿದ್ದರು?

ಕಳೆದ ಮಾರ್ಚ್ ನಲ್ಲಿ ರವಿಶಂಕರ್ ಪ್ರಸಾದ್ ಸಂಸತ್ತಿನಲ್ಲಿ ಇಂಥ ಅಪರಾಧ ಪ್ರಕರಣ ಕುರಿತು ವಿವರಣೆ ನೀಡಿದ್ದರು. ಮೊಬೈಲ್ ಫೋನ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಸೈಬರ್ ಅಪರಾಧ ಪ್ರಕರಣಗಳ ಉಲ್ಬಣಕ್ಕೂ ಕಾರಣವಾಗಿದೆ ಎಂದು ತಿಳಿಸಿದ್ದರು.

ವಿಶಾಖಪಟ್ಟಣ ಟಾಪ್

ವಿಶಾಖಪಟ್ಟಣ ಟಾಪ್

2013 ರಕ್ಕೆ ಹೋಲಿಸಿದರೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 157 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನ ಜೋದ್ ಪುರಕ್ಕೆ ಮೀಸಲಿದ್ದು 78 ಪ್ರಕರಣ ಕಂಡುಬಂದಿದೆ.

ಅಶ್ಲೀಲ ಚಿತ್ರ ರವಾನೆಯೇ ಹೆಚ್ಚು

ಅಶ್ಲೀಲ ಚಿತ್ರ ರವಾನೆಯೇ ಹೆಚ್ಚು

ಸೈಬರ್ ಅಪರಾಧದಲ್ಲಿ ಎಂಟು ಪ್ರಕಾರಗಳಿವೆ. ಆದರೆ ಶೇ. 80ಕ್ಕೂ ಅಧಿಕ ಪ್ರಕರಣಗಳು ಹ್ಯಾಕಿಂಗ್ ಮತ್ತು ಅಶ್ಲೀಲ ಚಿತ್ರ ರವಾನೆ ಆಧಾರದಲ್ಲಿಯೇ ದಾಖಲಾಗಿವೆ. ಜನರು ಮತ್ತು ಯುವಜನತೆ 'ಅದರ' ಸುತ್ತವೇ ಗಿರಕಿ ಹೊಡೆಯುತ್ತಿರುತ್ತಾರೆ ಎಂದು ಸಾಬೀತು ಮಾಡಿದೆ.

ಶೇ. 300 ಕ್ಕೇರಿದ ಮೊಬೈಲ್ ಬಳಕೆ ಸಂಖ್ಯೆ

ಶೇ. 300 ಕ್ಕೇರಿದ ಮೊಬೈಲ್ ಬಳಕೆ ಸಂಖ್ಯೆ

2012-13ರ ಸಾಲಿಗೆ ಹೋಲಿಸಿದರೆ ಮೊಬೈಲ್ ಬಳಕೆ ಸಂಖ್ಯೆಯಲ್ಲಿ ಶೇ. 300 ಏರಿಕೆ ಕಂಡುಬಂದಿದೆ. ಭಾರತದಲ್ಲಿ 117 ಮಿಲಿಯನ್ ಗೂ ಅಧಿಕ ಜನರು ಸ್ಮಾರ್ಟ್ ಫೋನ್ ಒಡೆತನ ಹೊಂದಿದ್ದಾರೆ. ಚೀನಾ ಮತ್ತು ಯುಎಸ್ ನಂತರದ ಸ್ಥಾನದಲ್ಲಿ ಭಾರತವಿದೆ.

ಮೊಬೈಲ್ ಡಾಟಾ ಉಪಯೋಗ

ಮೊಬೈಲ್ ಡಾಟಾ ಉಪಯೋಗ

2013 ರಲ್ಲಿಯೇ ಮೊಬೈಲ್ ಡಾಟಾ ಯೂಸೆಜ್ ಡೆಸ್ಕ್ ಟಾಪ್ ಬಳಕೆಯನ್ನು ಹಿಂದಕ್ಕೆ ಹಾಕಿದೆ. ಒಂದು ವರ್ಷದ ಅವಧಿಯಲ್ಲಿ ಮೊಬೈಲ್ ಮೂಲಕ ಇಂಟರ್ ನೆಟ್ ಬಳಕೆ ಸಂಖ್ಯೆ ಶೇ. 81 ರಷ್ಟು ಏರಿಕೆ ಕಂಡಿದೆ.

ಹಂಚುವುದರಲ್ಲೇ ತೃಪ್ತಿಯಿದೆ

ಹಂಚುವುದರಲ್ಲೇ ತೃಪ್ತಿಯಿದೆ

ಫೇಸ್ ಬುಕ್, ವಾಟ್ಸಪ್, ಫ್ಲಿಕ್ಕರ್, ಇನ್ ಸ್ಟ್ರಾಗ್ರಾಮ್ ನಂಥವುಗಳ ಮೂಲಕ ಚಿತ್ರಗಳನ್ನು, ವಿಡಿಯೋಗಳನ್ನು ಹಂಚುವುದರಲ್ಲಿಯೇ ಯುವಜನತೆ ತಲ್ಲೀನರಾಗಿದ್ದು ಅಪಾರ ಪ್ರಮಾಣದ ಡಾಟಾ ಖರ್ಚು ಮಾಡಲಾಗುತ್ತಿದೆ.

ದಿನದ ಮೂರು ತಾಸು ಫೋನ್ ನಲ್ಲಿಯೇ

ದಿನದ ಮೂರು ತಾಸು ಫೋನ್ ನಲ್ಲಿಯೇ

ಭಾರತೀಯರು ಕನಿಷ್ಠ ದಿನದ 3 ಗಂಟೆ ಕಾಲವನ್ನು ಮೊಬೈಲ್ ನಲ್ಲಿ ಕಳೆಯುತ್ತಾರೆ. ಇದರಲ್ಲೀ ಶೇ. 63 ರಷ್ಟು ಜನ ಯಾವುದಾದರೊಂದು ವಿಡಿಯೋ ವೀಕ್ಷಣೆ ಮಾಡುತ್ತಾರೆ ಎಂದು ಕೆಪಿಸಿಬಿ ವರದಿ ಹೇಳಿದೆ.

ಯಾವ ಸ್ಪಷ್ಟ ಕಾನೂನುಗಳಿಲ್ಲ

ಯಾವ ಸ್ಪಷ್ಟ ಕಾನೂನುಗಳಿಲ್ಲ

ಇಲ್ಲಿಯವರೆಗೆ ಇಂಥ ಹೊಸ ಬಗೆಯ ಅಪರಾಧ ತಡೆಗೆ ಯಾವುದೇ ಸ್ಪಷ್ಟ ಕಾನೂನುಗಳನ್ನು ಹೊರಡಿಸಲಾಗಿಲ್ಲ. ಅಲ್ಲದೇ ಇಂಥವುಗಳನ್ನು ಮಾನಿಟರ್ ಮಾಡಲು ಯಾವ ವ್ಯವಸ್ಥೆಗಳಿಲ್ಲ ಎಂದು ಸ್ವತಃ ರವಿಶಂಕರ್ ಪ್ರಸಾದ್ ಅವರೇ ತಿಳಿಸಿದ್ದಾರೆ.

ಕರ್ನಾಟಕಕ್ಕೆ 8ನೇ ಸ್ಥಾನ

ಕರ್ನಾಟಕಕ್ಕೆ 8ನೇ ಸ್ಥಾನ

ಈ ಬಗೆಯ ಸೈಬರ್ ಅಪರಾಧ ಪಟ್ಟಿಯಲ್ಲಿ ಕರ್ನಾಟಲಕ 8 ನೇ ಸ್ಥಾನ ಪಡೆದುಕೊಂಡಿದೆ. 18 ರಿಂಧ 30 ವರ್ಷದ ಒಳಗಿನ ವ್ಯಕ್ತಿಗಳೇ ಇಂಥ ವಿಡಿಯೋ ರವಾನೆಯಲ್ಲಿ ಮುಂದಿದ್ದಾರೆ.

ಜನರಿಗೆ ಈ ಬಗ್ಗೆ ಗೊತ್ತೆ?

ಜನರಿಗೆ ಈ ಬಗ್ಗೆ ಗೊತ್ತೆ?

ವಿಡಿಯೋ ಹಂಚುವುದು ಅಪರಾಧ ಎಂದು ಜನರಿಗೆ ಗೊತ್ತೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಇದೊಂದು ಅಪರಾಧವಾಗುತ್ತದೆ ಎಂಬ ಸಂಗತಿ ಗೊತ್ತಿಲ್ಲ. ಸಿಕ್ಕ ವಿಡಿಯೋ ಗಳನ್ನು ಮತ್ತೊಬ್ಬರಿಗೆ ಹಂಚಿದರೆ ಏನೋ ಒಂದು ಆನಂದ.

English summary
The Mumbai police registered a case against "unknown persons" for leaking a nude clip of actor Radhika Apte. Part of a 20-minute film directed by Anurag Kashyap, the clip went viral on instant-messaging application WhatsApp. In concert with India's smartphone proliferation, cases related to the transmission of "obscene material" jumped 104% between 2012 and 2013, according to data from the National Crime Records Bureau (NCRB).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X