ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪುರ್ ಶರ್ಮಾ ಪರ ಬಿಜೆಪಿ ಸಂಸದ ದಿಲೀಪ್ ಘೋಷ್ ಬ್ಯಾಟಿಂಗ್

|
Google Oneindia Kannada News

ನವದೆಹಲಿ ಜುಲೈ 05: ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿ ಇಡೀ ದೇಶದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಉದಯಪುರ ಮತ್ತು ಅಮರಾವತಿಯಲ್ಲಿ ನಡೆದ ಭೀಕರ ಹತ್ಯೆಗಳು ನಡೆದಿವೆ. ಇದರ ನಡುವೆ ಬಿಜೆಪಿ ಸಂಸದ ದಿಲೀಪ್ ಘೋಷ್ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ಹಿಂಸಾಚಾರದ ಘಟನೆಗಳನ್ನು ದೂಷಿಸಿದ್ದಾರೆ.

ಇಂಡಿಯಾ ಟುಡೆ ಕಾನ್ಕ್ಲೇವ್ ಈಸ್ಟ್ 2022 ರಲ್ಲಿ ಮಾತನಾಡುವಾಗ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಮುಸ್ಲಿಂ ಸಮುದಾಯವು ಅವರನ್ನು ನಿರಂತರವಾಗಿ ವಿರೋಧಿಸುತ್ತಿದೆ. ಮುಸ್ಲಿಂ ರಾಷ್ಟ್ರಗಳು ಕೂಡ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ಆದರೆ ದಿಲೀಪ್ ಘೋಷ್, ಸ್ವಾತಂತ್ರ್ಯ ಪೂರ್ವದಲ್ಲಿ ಗಲಭೆಗಳು ನಡೆದಿವೆ ಮತ್ತು ನೂರಾರು ಜನರು ಸಾವನ್ನಪ್ಪಿದ್ದಾರೆ, ಈ ಹಿಂಸಾಚಾರದ ಹಿಂದಿನ ಸಿದ್ಧಾಂತದ ವಿರುದ್ಧ ಮಾತನಾಡಲು ಜಗತ್ತು ಹೆದರುತ್ತಿದೆ ಎಂದು ಹೇಳಿದ್ದಾರೆ.

ನೂಪುರ್ ಶರ್ಮಾ ಪರ ಬ್ಯಾಟಿಂಗ್

ನೂಪುರ್ ಶರ್ಮಾ ಪರ ಬ್ಯಾಟಿಂಗ್

ನೂಪುರ್ ಶರ್ಮಾ ಅವರು ಹೇಳಿದ್ದು ತಪ್ಪು ಎಂದು ನಿಮಗೆ ಅನಿಸಿದರೆ ಚರ್ಚೆಗೆ ಬನ್ನಿ. ಟಿವಿಯಲ್ಲಿ ಸಾರ್ವಜನಿಕವಾಗಿ ನಿಮ್ಮ ವಾದವನ್ನು ನೀಡಿ ಎಂದು ಬಿಜೆಪಿ ಸಂಸದರು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಯ ನಂತರ ನೂಪುರ್ ಶರ್ಮಾ ಅವರ ಪ್ರತಿಭಟನೆಯ ಮೇಲೆ ಭುಗಿಲೆದ್ದ ಹಿಂಸಾಚಾರವನ್ನು ಉಲ್ಲೇಖಿಸಿದ ದಿಲೀಪ್ ಘೋಷ್, ನೀವು ತರ್ಕದ ಬದಲು ಕತ್ತಿಯನ್ನು ಎಳೆಯುತ್ತಿದ್ದೀರಿ ಎಂದು ಹೇಳಿದರು.

'ಧರ್ಮವನ್ನು ಪ್ರೀತಿಸಿ' ದಿಲೀಪ್ ಘೋಷ್

'ಧರ್ಮವನ್ನು ಪ್ರೀತಿಸಿ' ದಿಲೀಪ್ ಘೋಷ್

ಹಿಂದೂ ದೇವತೆ 'ಕಾಳಿ' ಸಿಗರೇಟ್ ಸೇದುವ ಪೋಸ್ಟರ್‌ನ ಇತ್ತೀಚಿನ ವಿವಾದದ ಬಗ್ಗೆ ಕೇಳಿದಾಗ, ದಿಲೀಪ್ ಘೋಷ್, ತಮ್ಮನ್ನು ಪ್ರಗತಿಪರ ಮತ್ತು ಜಾತ್ಯತೀತರು ಎಂದು ತೋರಿಸಿಕೊಳ್ಳಲು ಹಿಂದುತ್ವವನ್ನು ಶಪಿಸುವ ಜನರು ಯಾವಾಗಲೂ ಇರುತ್ತಾರೆ. ಇದರೊಂದಿಗೆ ನಿಮ್ಮ ಧರ್ಮವನ್ನು ಪ್ರೀತಿಸಿ ಇತರ ಧರ್ಮವನ್ನು ಗೌರವಿಸಿ ಎಂದು ಹೇಳಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಾಗಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ. ಬಳಿಕ ವಿರೋಧ ಪಕ್ಷದ ನಾಯಕರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಅಧಿಕಾರದಲ್ಲಿರುವ ಪಕ್ಷ ನಾಚಿಕೆಯಿಂದ ತಲೆ ತಗ್ಗಿಸಬೇಕು" ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.


ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, "ಆಡಳಿತದ ಮೂಲಕ ದೇಶದಲ್ಲಿ ವಾತಾವರಣವನ್ನು ಸೃಷ್ಟಿಸಲಾಗಿದೆ. ಕಾಮೆಂಟ್ ಮಾಡಿರುವುದು ನೂಪುರ್ ಶರ್ಮಾ ಅಲ್ಲ. ಬದಲಿಗೆ ಪ್ರಧಾನಿ, ಗೃಹ ಸಚಿವರು, ಬಿಜೆಪಿ ಮತ್ತು ಆರ್‌ಎಸ್‌ಎಸ್. ಇವರ ಕಾಮೆಂಟ್ ಕೋಪ, ದ್ವೇಷದ ವಾತಾವರಣವನ್ನು ಸೃಷ್ಟಿಸಿದೆ. ಇದು ದೇಶ ವಿರೋಧಿ ಕೃತ್ಯವಾಗಿದೆ. ಇದು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಇದು ದುರಂತಕ್ಕೆ ಕಾರಣವಾಗುತ್ತಿದೆ' ಎಂದು ಹೇಳಿದ್ದಾರೆ.

ಭದ್ರತೆ ವಾಪಸ್ ಬಳಿಕ ಕೊಲೆ

ಭದ್ರತೆ ವಾಪಸ್ ಬಳಿಕ ಕೊಲೆ

ಜೂನ್ 9 ರಂದು ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಾ ಲಾಲ್ ಫೇಸ್‌ಬುಕ್ ಪೋಸ್ಟ್ ಬರೆದಿದ್ದರು. ಈ ಒಂದು ಪೋಸ್ಟ್ ಕನ್ಹಯ್ಯಾ ಲಾಲ್ ಅವರ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಬೆದರಿಕೆ ಕರೆಗಳಿಂದಾಗಿ ಕನ್ಹಯ್ಯಾ ಲಾಲ್ ಅವರ ಅಂಗಡಿಯಲ್ಲಿ 3 ದಿನಗಳ ಕಾಲ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಆದರೆ ಭದ್ರತೆ ವಾಪಸ್ ಪಡೆದ ನಂತರ ಅವರ ಕೊಲೆ ನಡೆದಿದೆ.

ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ಉದಯಪುರದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 32 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

English summary
BJP MP Dilip Ghosh has supported the suspended BJP spokesperson Nupur Sharma for his remarks against Prophet Mohammad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X