ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರ ಹೊತ್ತೊಯ್ಯಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ

By Sachhidananda Acharya
|
Google Oneindia Kannada News

ಭುವನೇಶ್ವರ, ಜೂನ್ 3: ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿ ಅಗ್ನಿ-5ರ ಉಡಾವಣೆ ಯಶಸ್ವಿಯಾಗಿದೆ. ಇಂದು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಈ ಕ್ಷಿಪಣಿಯ ಪರೀಕ್ಷೆ ನಡೆಲಾಯಿತು.

ಇಂದು ಬೆಳಿಗ್ಗೆ 9 ಗಂಟೆ 48 ನಿಮಿಷಕ್ಕೆ ಅಗ್ನಿ - 5 ಕ್ಷಿಪಣಿ ಇಲ್ಲಿನ ನಾಲ್ಕನೇ ಲಾಂಚ್ ಪ್ಯಾಡ್ ನಿಂದ ಆಕಾಶಕ್ಕೆ ಚಿಮ್ಮಿತು. ಈ ಕ್ಷಿಪಣಿ ನಿಗದಿತ ಗಮ್ಯವನ್ನು ತಲುಪುವ ಮೂಲಕ ಉಡಾವಣೆ ಯಶಸ್ವಿಯಾಗಿದೆ.

ಅಗ್ನಿ - 5 ಖಂಡಾಂತರ ಕ್ಷಿಪಣಿಯ ಐದನೇ ಪರೀಕ್ಷೆಯೂ ಯಶಸ್ವಿಅಗ್ನಿ - 5 ಖಂಡಾಂತರ ಕ್ಷಿಪಣಿಯ ಐದನೇ ಪರೀಕ್ಷೆಯೂ ಯಶಸ್ವಿ

ಈ ಖಂಡಾಂತರ ಕ್ಷಿಪಣಿ 5,000 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ ಚೀನಾದ ಹೆಚ್ಚಿನ ಭೂಭಾಗಳನ್ನು ಅಗ್ನಿ - 5 ಕ್ಷಿಪಣಿ ತಲುಪುವ ಶಕ್ತಿ ಹೊಂದಿದೆ.

 Nuclear-capable Agni-5 test-fired successfully

ಇಂದು ನಡೆದ ಪರೀಕ್ಷೆ ಅಗ್ನಿ 5ರ ಸತತ ಆರನೇ ಯಶಸ್ವೀ ಪರೀಕ್ಷೆಯಾಗಿದೆ. ಈ ಹಿಂದೆ ಜನವರಿ 18ರಂದು ಇದರ ಯಶಸ್ವೀ ಪರೀಕ್ಷೆ ನಡೆಸಲಾಗಿತ್ತು.

ಅಗ್ನಿ ಸರಣಿಯು ಭಾರತದ ಸ್ವದೇಶಿ ನಿರ್ಮಿತ ಕ್ಷಿಪಣಿಗಳಾಗಿವೆ. ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿದೆ. ಇನ್ನೂ ಕೆಲವು ಪರೀಕ್ಷೆಗಳು ನಡೆಯಲಿದ್ದು, ನಂತರ ಈ ಕ್ಷಿಪಣಿ ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ.

English summary
India on Sunday successfully test-fired nuclear-capable ballistic missile Agni-5 from Integrated Test Range (ITR) at Abdul Kalam Island off Odisha coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X