ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಎರಡು ಮತ್ತು ಮೂರನೇ ಡೋಸ್ ನಡುವೆ ಅಂತರ ತಗ್ಗಿಸಲು ಚಿಂತನೆ

|
Google Oneindia Kannada News

ನವದೆಹಲಿ, ಜೂನ್ 17: ಕೊರೊನಾ ವೈರಸ್ ಹೊಸ ಅಲೆಗಳನ್ನು ಎದುರಿಸಲು ಎಲ್ಲೆಡೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಮೊದಲೆರಡು ಡೋಸ್‌ಗಳನ್ನು ಪಡೆದು 9 ತಿಂಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಈಗ ಈ ಅಂತರವನ್ನು 6 ತಿಂಗಳಿಗೆ ಇಳಿಸುವ ಚಿಂತನೆ ನಡೆದಿದೆ. ಅಂದರೆ, ಎರಡನೇ ಡೋಸ್ ಹಾಕಿದ 6 ತಿಂಗಳ ಬಳಿಕ ಬೂಸ್ಟರ್ ಡೋಸ್ ಹಾಕಬೇಕೆಂದು ಸರಕಾರಕ್ಕೆ ಸಲಹೆ ನೀಡಲಾಗಿದೆ. ರಾಷ್ಟ್ರೀಯ ಲಸಿಕೀಕರಣ ತಾಂತ್ರಿಕ ಸಲಹಾ ಗುಂಪಿನ (NTAGI- National Advisory Group on Immunization) ಸ್ಥಾಯಿ ತಾಂತ್ರಿಕ ಉಪಸಮಿತಿಯು (STSC- Standing Technical Sub-Committee) ಈ ಶಿಫಾರಸು ಮಾಡಿದೆ.

18 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗೂ 6 ತಿಂಗಳಿಗೆ ಮೂರನೇ ಡೋಸ್ ಹಾಕುವುದು ಉತ್ತಮ ಎಂದು ಈ ಉಪಸಮಿತಿ ಅಭಿಪ್ರಾಯಪಟ್ಟಿದೆ. ಜೂನ್ 29ರಂದು ತಾಂತ್ರಿಕ ಸಲಹಾ ಸಂಸ್ಥೆಯು ಸಭೆ ನಡೆಸಲಿದ್ದು ಅಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ದೇಶಾದ್ಯಂತ ಕೊರೊನಾ ಉಲ್ಬಣ: ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳದೇಶಾದ್ಯಂತ ಕೊರೊನಾ ಉಲ್ಬಣ: ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳ

ಇದೇ ವೇಳೆ, ಆರರಿಂದ ಹನ್ನೆರಡು ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ವಿಚಾರದ ಬಗ್ಗೆ ನಿನ್ನೆ ಗುರುವಾರ ನಡೆದ ತಾಂತ್ರಿಕ ಸ್ಥಾಯಿ ಉಪಸಮಿತಿಯ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎನ್ನಲಾಗುತ್ತಿದೆ.

NTAGI Recommends Reduction in Gap Between Second and Third Dose Covid-19 Vaccine

ವಿದೇಶೀ ಪ್ರವಾಸಿಗರ ವಿಚಾರದಲ್ಲಿ ಕೇಂದ್ರ ಸರಕಾರ ಈ ಮುಂಚೆ ಮೂರನೇ ಡೋಸ್ ವಿಚಾರದಲ್ಲಿ ಅಂತರವನ್ನು ಸಾಕಷ್ಟು ತಗ್ಗಿಸಿತ್ತು. ವಿದೇಶಿ ಪ್ರವಾಸಿಗರು ಎರಡನೇ ಡೋಸ್ ಮತ್ತು ಮೂರನೇ ಡೋಸ್ ನಡುವಿನ ಕನಿಷ್ಠ ಅಂತವನ್ನು 90 ದಿನಗಳಿಗೆ ಇಳಿಕೆ ಮಾಡಿತ್ತು. ಅಂದರೆ, ಎರಡನೇ ಡೋಸ್ ಪಡೆದು ಮೂರು ತಿಂಗಳಲ್ಲಿ ಮುನ್ನೆಚ್ಚರಿಕೆಯಾಗಿ ಮೂರನೇ ಡೋಸ್ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ಕೊರೋನಾ ನಕಲಿ ಪರೀಕ್ಷೆಗಳಿಂದ ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆಯಾ?ಕೊರೋನಾ ನಕಲಿ ಪರೀಕ್ಷೆಗಳಿಂದ ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆಯಾ?

ಇನ್ನೂ ಮುನ್ನೆಚ್ಚರಿಕೆಯ ಬೂಸ್ಟರ್ ಡೋಸ್ ಅಗಿ ನೀಡಲಾಗುವ ಮೂರನೇ ಡೋಸ್ ಅನ್ನು ಪಡೆಯಲು ಜನರು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಎರಡು ಮತ್ತು ಮೂರನೇ ಡೋಸ್‌ಗಳ ಮಧ್ಯೆ ಎಷ್ಟು ಅಂತರ ಇರಬೇಕೆಂದು ಎಲ್ಲಿಯೂ ಒಮ್ಮತ ಇಲ್ಲ. ಈ ವಿಚಾರದಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ತಜ್ಞರಲ್ಲೂ ಸ್ಪಷ್ಟತೆ ಕಾಣುತ್ತಿಲ್ಲ. ಎರಡು ಡೋಸ್ ಲಸಿಕೆಗಳಿಂದ ದೇಹದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಕೋವಿಡ್ ಪ್ರತಿಕಾಯಗಳು ಸಕ್ರಿಯವಾಗಿರುತ್ತವೆ ಎಂದು ಕೆಲವರು ವಾದಿಸಿದ್ಧಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆಯುತ್ತಾರೆ.

NTAGI Recommends Reduction in Gap Between Second and Third Dose Covid-19 Vaccine

ಆದರೆ, ದೇಶಾದ್ಯಂತ ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ದಿನಕ್ಕೆ ಸತತವಾಗಿ ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗತೊಡಗಿವೆ. ಕೋವಿಡ್ ಲಸಿಕೆ ವ್ಯಾಪಕವಾಗಿ ನೀಡಲಾಗಿದ್ದರೂ ಪ್ರಕರಣಗಳು ಎಗ್ಗಿಲ್ಲದೆ ಹೆಚ್ಚುತ್ತಿವೆ. ಅದೃಷ್ಟಕ್ಕೆ ಸಾವಿನ ಸಂಖ್ಯೆ ಹೆಚ್ಚಿಲ್ಲ.

ಭಾರತದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್ ಲಸಿಕೆ ಡೋಸ್‌ಗಳ ಸಂಖ್ಯೆ 200 ಕೋಟಿ ಗಡಿ ಸಮೀಪ ಬಂದಿದೆ. 12 ವರ್ಷ ಮೇಲ್ಪಟ್ಟ ಎಲ್ಲಾ ಮಂದಿಗೂ ಲಸಿಕೆ ನೀಡಲಾಗುತ್ತಿದೆ. 12-14 ವರ್ಷ ವಯೋಮಾನದ 3.54 ಕೋಟಿ ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Government advisory panel has recommended reducing the time period between the second dose and precaution dose of the vaccine against the Coronavirus infection from nine months to six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X