ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಜಿಸಿ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಪ್ರಕಟಿಸಿದ NTA

|
Google Oneindia Kannada News

ನವದೆಹಲಿ, ಆ. 21: ಯುಜಿಸಿ- ಎನ್ ಇಟಿ, ಇಗ್ನೋ, ಓಪನ್ ಮ್ಯಾಟ್, ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ, ಪಿಎಚ್ ಡಿ, ಐಸಿಎಆರ್, ಎಐಇಇಎ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಪ್ರಕಟಿಸಿದೆ.

Recommended Video

ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

ಕೊರೊನಾವೈರಸ್ ಸೋಂಕಿನ ಭೀತಿಯಿಂದ ಹಲವು ಕೋರ್ಸ್ ಗಳ ಪರೀಕ್ಷೆಗಳು ವಿಳಂಬವಾಗಿವೆ. ವಿವಿಧ ಪರೀಕ್ಷೆಗಳನ್ನು ಆಯೋಜಿಸಲು ಎನ್ಟಿಎಗೆ ಅನುಮತಿ ಸಿಗುತ್ತಿದ್ದಂತೆ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ.

ಅಂತಿಮ ವರ್ಷದ ಪರೀಕ್ಷೆಗಳು; ಗೃಹ ಸಚಿವಾಲಯದ ಸ್ಪಷ್ಟನೆಅಂತಿಮ ವರ್ಷದ ಪರೀಕ್ಷೆಗಳು; ಗೃಹ ಸಚಿವಾಲಯದ ಸ್ಪಷ್ಟನೆ

ಎಲ್ಲಾ ಪರೀಕ್ಷೆಗಳಿಗೂ 15ದಿನಗಳಿಗೂ ಮುನ್ನ ಅಡ್ಮಿಟ್ ಕಾರ್ಡ್ ಗಳನ್ನು ಪ್ರಕಟಿಸಲಾಗುತ್ತದೆ. ಪರೀಕ್ಷೆ ದಿನಾಂಕ, ತಾಣ, ಪರೀಕ್ಷಾ ಸಮಯ ಇನ್ನಿತರ ವಿವರಗಳನ್ನು ಆಯಾ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಲಾಗುತ್ತದೆ ಎಂದು ಎನ್ಟಿಸಿ ತಿಳಿಸಿದೆ.

NTA Announced UGC-NET, IGNOU, DU entrance test and other exam dates, Check here

ಯುಜಿಸಿ ಎನ್ ಇಟಿ ಸೆಪ್ಟೆಂಬರ್ 6 ರಿಂದ 11ರ ಅವಧಿಯಲ್ಲಿ ಆಯೋಜನೆಗೊಳ್ಳಲಿದೆ. ದೆಹಲಿ ವಿಶ್ವ ವಿದ್ಯಾಲಯದ ಪ್ರವೇಶ ಪರೀಕ್ಷೆ ಸೆಪ್ಟೆಂಬರ್ 16 ರಿಂದ 25ರ ಅವಧಿಯಲ್ಲಿ ನಡೆಯಲಿದೆ.

ಇಗ್ನೋ ಓಪನ್ ಮ್ಯಾಟ್ ಎಂಬಿಎ ಪರೀಕ್ಷೆ ಸೆಪ್ಟೆಂಬರ್ 15 ಹಾಗೂ ಪಿಎಚ್ ಡಿ ಪ್ರವೇಶ ಪರೀಕ್ಷೆ ಅಕ್ಟೋಬರ್ 4 ರಂದು ನಿಗದಿಯಾಗಿದೆ.

ಐಸಿಎಆರ್ ಎಐಇಇಎ ಯುಜಿ ಪರೀಕ್ಷೆಗಳು ಸೆಪ್ಟೆಂಬರ್ 7 ಹಾಗೂ 8ರಂದು ನಡೆಯಲಿದ್ದು, ಪಿಜಿ ಹಾಗೂ ಪಿಎಚ್ ಡಿ ಸ್ತರದ ಪರೀಕ್ಷೆಗಳ ದಿನಾಂಅಕ್ ಇನ್ನೂ ಪ್ರಕಟವಾಗಿಲ್ಲ.

JEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿJEE ಅಡ್ಮಿಟ್ ಕಾರ್ಡ್ ಪ್ರಕಟ, ಡೌನ್ಲೋಡ್ ಮಾಡ್ಕೊಳಿ

ಇದಲ್ಲದೆ, ಆಗಸ್ಟ್ 29ರಂದು ನೆಯಬೇಕಿದ್ದ ಎಐಪಿಜಿಇಟಿ ಪರೀಕ್ಷೆ ಸೆಪ್ಟೆಂಬರ್ 29ರಂದು ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ತಿಳಿಸಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ ನೆಟ್), ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಸಿಎಂಎಟಿ) ಪರೀಕ್ಷೆಗಳ ಜತೆಗೆ ಈ ಪರೀಕ್ಷೆಗಳನ್ನು ಕೂಡ ನಡೆಸುವ ಹೊಣೆಗಾರಿಕೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ವಹಿಸಿಕೊಂಡಿದೆ. ಇದಕ್ಕೂ ಮುನ್ನ JEE ಮತ್ತು NEETನಿರ್ವಹಣೆಯನ್ನು ಸಿಬಿಎಸ್‌ಇ ನಡೆಸುತ್ತಿತ್ತು.

English summary
National Testing Agency has announced the revised dates of various examinations including UGC- NET, IGNOU OPENMAT and PhD, Delhi University entrance test and ICAR AIEEA exams. UGC NET will be conducted between September 16 and 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X