ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ಚಟುವಟಿಕೆ: 5 ವರ್ಷಗಳಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿರುವ NSIL

|
Google Oneindia Kannada News

ನವದೆಹಲಿ, ಮಾರ್ಚ್ 12: ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್ಎಸ್‌ಐಎಲ್) ಮುಂದಿನ 5 ವರ್ಷಗಳಲ್ಲಿ ಬಾಹ್ಯಾಕಾಶ ಚಟುವಟಿಕೆಗಳಿಗಾಗಿ 10 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ.

ಅಂತಾರಾಷ್ಟ್ರೀಯ ಉಪಗ್ರಹಗಳ ಉಡಾವಣೆಗೆ ಬೇಡಿಕೆ ಹೆಚ್ಚಾಗಿದೆ, ವಿಸೇಷವಾಗಿ ಸಣ್ಣ ಮತ್ತು ಮಧ್ಯಮ ತೂಕದ ಉಪಗ್ರಹಗಳ ಉಡಾವಣೆಗೆ ಭಾರತವೇ ಉತ್ತಮ ತಾಣವಾಗಿದೆ.

ಅಮೆಜೊನಿಯಾ -1 ಹಾಗೂ 18 ಉಪಗ್ರಹಗಳು ಯಶಸ್ವಿ ಉಡಾವಣೆಅಮೆಜೊನಿಯಾ -1 ಹಾಗೂ 18 ಉಪಗ್ರಹಗಳು ಯಶಸ್ವಿ ಉಡಾವಣೆ

ಬೇರೆ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ ವೆಚ್ಚ ಅತಿ ಕಡಿಮೆ ಗುಣಮಟ್ಟ ಅತ್ಯುತ್ತಮವಾದುದು ಎಂದು ಎನ್‌ಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಜಿ.ನಾರಾಯಣನ್ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಸಂಬಂಧಿತ ಉಡಾವಣೆ, ಕಾರ್ಯಾಚರಣೆ, ನಿರ್ವಹಣೆ ಮತ್ತು ಸೇವಾ ಚಟುವಟಿಕೆಗಳಿಗಾಗಿ ಮುಂದುನ ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ, ಹೂಡಿಕೆ ಮಾಡಲಿದೆ.

NSIL To Invest 10 Thousand Crores Over 5 Years

ಇದಕ್ಕಾಗಿ ಷೇರು ಮಾರುಕಟ್ಟೆಯ ಮೂಲಕ ಹಣ ಸಂಗ್ರಹಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.ಹೊಸ ಬಾಹ್ಯಾಕಾಶ ಸುಧಾರಣಾ ನೀತಿಯ ಭಾಗವಾಗಿ ಇತರೆ ದೇಶಗಳು ಉಪಗ್ರಹ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟರೆ, ಉಪಗ್ರಹಗಳನ್ನೂ ನಿರ್ಮಿಸಿಕೊಡಲಿದ್ದೇವೆ. ಹಾಗೆಯೇ ಹೆಚ್ಚಿನ ದೇಶಗಳಿಂದ ಉಪಗ್ರಹ ನಿರ್ಮಾಣಕ್ಕಾಗಿ ಹೆಚ್ಚಿನ ಬೇಡಿಕೆಯೂ ಇದೆ.

ಮುಂದಿನ 2 ವರ್ಷಗಳಲ್ಲಿ ಎನ್ಎಸ್‌ಐಎಲ್ ನಾಲ್ಕು ಮಹತ್ವದ ಪಿಎಸ್‌ಎಲ್‌ವಿ ಉಡಾವಣಾ ಸೇವೆಯ ಜವಾಬ್ದಾರಿಯನ್ನು ಹೊತ್ತಿದೆ. 2022ರಲ್ಲಿ ಎರಡು ಸಮರ್ಪಿತ ಉಪಗ್ರಹಗಳ ಉಡಾವಣೆ ನಡೆಯಲಿದ್ದು, ಅವು ಯಾವ ದೇಶದ ಉಪಗ್ರಹಗಳು ಎಂಬುದನ್ನು ಬಹಿರಂಗಗೊಳಿಸಿಲ್ಲ.

ಉಡಾವಣೆಯ ಸೇವೆಯ ಜತೆಗೆ ಬೇಡಿಕೆ ಆಧರಿಸಿ ಬಾಹ್ಯಾಕಾಶ ಸೇವೆಗಳನ್ನು ಒದಗಿಸಲಿದ್ದೇವೆ ಈಗ ಪೂರೈಕೆ ಆಧಾರಿತ ಸೇವೆಯನ್ನು ನೀಡಲಿದ್ದೇವೆ ಎಂದು ತಿಳಿಸಿದರು.

English summary
Space PSU News Space India Limited whose mandate has now been expanded to own and operate capital intensive assets satellites and Launch vehicles has plans of Investing around 10 thousand crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X