• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೊದಲ ರೈಲ್ವೆ ವಿಶ್ವವಿದ್ಯಾಲಯ ಗುಜರಾತ್ ನಲ್ಲಿ

By ವಿಕಾಸ್ ನಂಜಪ್ಪ
|

ಭಾರತೀಯ ರೈಲ್ವೆಗೆ ಇದೊಳ್ಳೆ ಸುದ್ದಿ. ಅಷ್ಟೇ ಅಲ್ಲ, ದೇಶಕ್ಕೇ ಒಂದೊಳ್ಳೆ ಸುದ್ದಿ. ನ್ಯಾಷನಲ್ ರೈಲ್ ಅಂಡ್ ಟ್ರಾನ್ಸ್ ಪೋರ್ಟ್ ಯೂನಿವರ್ಸಿಟಿ (ಎನ್ ಆರ್ ಟಿಯು) ಆರಂಭಿಸಲು ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ.

ರೈಲ್ವೆ ಸಚಿವಾಲಯದ ಮಾಹಿತಿ ಪ್ರಕಾರ, ಗುಜರಾತ್ ನ ವಡೋದರಾದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಭಾರತೀಯ ರೈಲ್ವೆಗೆ ಬೇಕಾದ ಮಾನವ ಸಂಪನ್ಮೂಲದ ತಯಾರಿ ಇಲ್ಲಿ ಮಾಡಲಾಗುತ್ತದೆ. "ದೇಶದ ಮೊದಲ ಎನ್ ಆರ್ ಟಿಯು ಸ್ಥಾಪನೆಯಿಂದ ಭರತೀಯ ರೈಲ್ವೆ ಹಾಗು ಸಂಚಾರ ವಲಯದಲ್ಲೇ ಬದಲಾವಣೆ ಆಗಲಿದೆ" ಎಂದು ರೈಲ್ವೆ ಸಚಿವಾಲಯ ಹೇಳಿದೆ.

ರೈಲ್ವೆ ಸುರಕ್ಷಾ ವಿಭಾಗದಲ್ಲಿ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ

ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಫಲವಾದ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾದ ಅಡಿಯಲ್ಲಿ ಗುಜರಾತ್ ನ ವಡೋದರಾದಲ್ಲಿ ರಾಷ್ತ್ರೀಯ ರೈಲು ಹಾಗೂ ಸಂಚಾರ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದಿದ್ದಾರೆ.

ಸ್ವತಃ ನರೇಂದ್ರ ಮೋದಿ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸಿದ್ದಾರೆ. ಮೂರು ವರ್ಷದಿಂದ ಬಾಕಿಯಿದ್ದ ಯೋಜನೆಗೆ ಸಂಪುಟದ ಒಪ್ಪಿಗೆ ಸಿಕ್ಕಿದೆ. ಇದೀಗ ವಿಶ್ವವಿದ್ಯಾಲಯದ ಕನಸು ನನಸಾಗಿದೆ. ಮುಂದಿನ ವರ್ಷದ ಜೂನ್ ನಿಂದ ಮೊದಲನೇ ಬ್ಯಾಚ್ ನ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ.

ಇಂಥ ಉದ್ದೇಶದಕ್ಕೆ ಆರಂಭವಾದ ಮೊದಲ ವಿ.ವಿ. ಇದು. ಇದರಿಂದ ಉತ್ಪಾದಕತೆ ಹೆಚ್ಚುತ್ತದೆ ಎಂದು ಸರಕಾರಿ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ಪ್ರಸ್ತಾವಿನ ವಿ.ವಿಯನ್ನು ರೈಲ್ವೆ ಸಚಿವಾಲಯವೇ ನಡೆಸಲಿದೆ. ವಡೋದರದಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೆಯ ಮೂಲ ಸೌಕರ್ಯವನ್ನೇ ಈ ವಿಶ್ವವಿದ್ಯಾಲಯಕ್ಕೆ ಬಳಸಲಾಗುತ್ತದೆ.

ಇನ್ನು ಮುಂದೆ ರೈಲ್ವೇ ಟಿಕೆಟ್ ಗಳ ಮೇಲೆಯೂ ರಿಯಾಯಿತಿ: ಪಿಯೂಷ್ ಗೋಯಲ್

ಪೂರ್ಣ ಪ್ರಮಾಣದಲ್ಲಿ ಸಿದ್ಧವಾದ ನಂತರ ಈ ವಿ.ವಿಯಲ್ಲಿ ಮೂರು ಸಾವಿರ ಪೂರ್ಣಾವಧಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಹೊಸ ವಿ.ವಿಗೆ ಬೇಕಾದ ಎಲ್ಲ ಹಣಕಾಸಿನ ನೆರವು ಸಚಿವಾಲಯದಿಂದಲೇ ಬರುತ್ತದೆ ಎಂದು ಸರಕಾರದಿಂದ ತಿಳಿಸಲಾಗಿದೆ.

ಉಪಗ್ರಹ ಆಧಾರಿತ ಟ್ರ್ಯಾಕಿಂಗ್, ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಬಳಸಿ ಕೆಲಸದ ಉತ್ಪಾದಕತೆ ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಲಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It was a major boost for the Indian Railways with the Cabinet approving the setting up of the first National Rail and Transport University (NRTU). The premier institution will be set up in Vadodra, Gujarat and according to the Railway Ministry,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more