ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 25: ಹಾರ್ದಿಕ್ ಪಟೇಲ್ ವಿರುದ್ಧ ಅನಿವಾಸಿ ಭಾರತೀಯ ಪಟೇಲರು ತೊಡೆ ತಟ್ಟಿದ್ದಾರೆ. ಹಾರ್ದಿಕ್ ಗೆ ವಿರುದ್ಧವಾಗಿ ಬಿಜೆಪಿ ಪರ ಪ್ರಚಾರಕ್ಕೆ ಎನ್‌ಆರ್‌ಐ ಪಟೇಲರು ಇಳಿದಿದ್ದಾರೆ.

150ಕ್ಕೂ ಹೆಚ್ಚು ವಿದೇಶಗಳಲ್ಲಿರುವ ಎನ್‌ಆರ್‌ಐಗಳು ತಮ್ಮ ರಾಜ್ಯ ಗುಜರಾತ್ ಗೆ ವಾಪಸ್ ಬಂದು ನರೇಂದ್ರ ಮೋದಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ಬೆನ್ನಿಗೆ ಬಿದ್ದ ಮಹಿಳಾ ಆಯೋಗ

"ನಾವು ಬಿಜೆಪಿಯ ಗೆಳೆಯರು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಜಗತ್ತು ನಮ್ಮತ್ತ ನೋಡುವ ದೃಷ್ಟಿ ಹೇಗೆ ಬದಲಾಯಿತು ಎಂಬುದನ್ನು ಜನರಿಗೆ ತಿಳಿಸಲು ನಾವು ಬಂದಿದ್ದೇವೆ," ಎಂದು ಅಮೆರಿಕಾದ ಉದ್ಯಮಿ ಬಾಬು ಭಾಯ್ ಲಾಲ್ ಪಟೇಲ್ ಹೇಳಿದ್ದಾರೆ.

 NRI Patels challenges Hardik Patel in Gujarat Assembly Elections 2017

ಗುಜರಾತ್ ನ ಶೇಕಡಾ 14ರಷ್ಟಿರುವ ಪಟೇಲರು ಕಳೆದ ಎರಡು ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದೀಗ ಎನ್‌ಆರ್‌ಐ ಪಟೇಲರನ್ನೂ ಬಿಜೆಪಿ ತನ್ನತ್ತ ಸೆಳೆದಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಗುಜರಾತಿಗರು ವಾರಕ್ಕೂ ಮೊದಲೇ ರಾಜ್ಯಕ್ಕೆ ಬಂದು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ.

ಎನ್‌ಆರ್‌ಐ ಪಟೇಲರು ಹಾರ್ದಿಕ್ ಪಟೇಲ್ ರನ್ನು ಗಂಭೀರವಾಗಿ ಪರಿಗಣಿಸಿಲ್ಲ. "ಹಾರ್ದಿಕ್ ಪಟೇಲ್ ಗೆ ಸಿದ್ಧಾಂತವೇ ಇಲ್ಲ. ಹಿನ್ನಲೆಯೂ ಇಲ್ಲ. ಆತ ಓರ್ವ ಇತಿಹಾಸದ ಜ್ಞಾನವೂ ಇಲ್ಲದ ಯುವಕ. ಆತನನ್ನು ಹೇಗೆ ನಂಬುವುದು?" ಎಂದು ಫ್ಲೋರಿಡಾದಲ್ಲಿ ನೆಲೆಸಿರುವ ವೈದ್ಯ ವಿಪುಲ್ ಪಟೇಲ್ ಹೇಳಿದ್ದಾರೆ.

ನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆನಮ್ಮ ಬೆಂಬಲವೇನಿದ್ದರೂ ಕಾಂಗ್ರೆಸಿಗೆ: ಹಾರ್ದಿಕ್ ಪಟೇಲ್ ಸ್ಪಷ್ಟನೆ

"ಅವರ ತಂದೆ ಕಾಂಗ್ರೆಸ್ ಕಾರ್ಯಕರ್ತರು. ಹಾರ್ದಿಕ್ ಪಟೇಲ್ ಕಾಂಗ್ರೆಸ್ ಜತೆ ನಂತರ ಎಎಪಿ ಜತೆ ಸಂಪರ್ಕದಲ್ಲಿದ್ದರು. ಈಗ ಅವರದ್ದೇ ಸ್ವಂತ ಪಕ್ಷ 'ಪಾಸ್' ಹೊಂದಿದ್ದಾರೆ," ಎಂಬುದಾಗಿ ಸೂರತ್ ಮೂಲದ ಮತ್ತೋರ್ವ ಎನ್‌ಆರ್‌ಐ ಸುರೇಶ್ ಹೇಳಿದ್ದಾರೆ.

ಇವರಲ್ಲದೆ ಗುಜರಾತಿಗೆ ಬರಲಾಗದ ಎನ್‌ಆರ್‌ಐಗಳ ಸಹಾಯವನ್ನೂ ಬಿಜೆಪಿ ಗಳಿಸಿದೆ. ಈ ಜನರು ವಿದೇಶದಲ್ಲಿದ್ದುಕೊಂಡೇ ಗೂಗಲ್ ಹ್ಯಾಂಗ್ ಔಟ್ಸ್, ಕಾನ್ಫರೆನ್ಸ್ ಮೂಲಕ ಜನರನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.

ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ.

English summary
Non Resident Indian Patels challenges Hardik Patel in upcoming Gujarat assembly elections. They are campaigning for the BJP party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X