ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದೇಶಭಕ್ತ ಭಾರತೀಯರ ಪರವೋ ಅಥವಾ ಅಕ್ರಮ ವಲಸಿಗರ ಪರವೋ?'

|
Google Oneindia Kannada News

ನವದೆಹಲಿ, ಆಗಸ್ಟ್ 1: ಕಾಂಗ್ರೆಸ್ ಹಾಗೂ ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮೊದಲು ತಾವು ಅನಧಿಕೃತ ವಲಸಿಗರ ಪರವಾಗಿದ್ದೀರೋ ಅಥವಾ ದೇಶಭಕ್ತ ಭಾರತೀಯ ನಾಗರಿಕರ ಪರವಾಗಿದ್ದಿರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಆಗ್ರಹಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಪಕ್ಷಗಳು ತಾವು ಸ್ವಾಭಿಮಾನಿ ಅಸ್ಸಾಮಿಗರ ಪರವಾಗಿದ್ದೇವೆಯೇ ಅಥವಾ ವಿರುದ್ಧವಾಗಿದ್ದೇವೆಯೇ ಎಂಬ ನಿರ್ಧಾರಕ್ಕೆ ಬರಬೇಕಾಗಿದೆ ಎಂದರು.

nrc row ananth kumar questioned oppositions

ಎನ್‌ಆರ್‌ಸಿ ಯಿಂದಾಗಿ ದೇಶದಲ್ಲಿ ನಾಗರಿಕ ಯುದ್ಧ ನಡೆಯಲಿದೆ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಗೆ, 'ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅವರು ನೀಡಿರುವ ಹೇಳಿಕೆ ಬಹಳ ಬೇಜವಾಬ್ದಾರಿತನದ್ದು. ಇದರಿಂದಾಗಿ ಜನರಲ್ಲಿ ಅನಗತ್ಯ ಭಯವನ್ನು ಹುಟ್ಟುಹಾಕುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತದೆ ಎಂದರು.

ಅಕ್ರಮ ವಲಸಿಗರಿಂದಾಗಿ ಅಸ್ಸಾಂನಲ್ಲಿ ಜನಸಾಂದ್ರತೆಯ ಸಮತೋಲನ ಹಳಿತಪ್ಪಿದ್ದು, ಇದಕ್ಕೆ ಯಾರು ಕಾರಣ ಎಂಬುದು ದೇಶದ ನಾಗರಿಕರಿಗೆ ತಿಳಿದಿದೆ ಎಂದು ಹೇಳಿದರು.

1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಈ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಲ್ಲದೆ, ಇದನ್ನು ಐತಿಹಾಸಿಕ ಎಂದು ಕೆಂಪುಕೋಟೆಯಿಂದ ಘೋಷಣೆ ಮಾಡಿದ್ದರು. ಈ ಒಪ್ಪಂದದ ಮೂಲ ಉದ್ದೇಶ ಅಸ್ಸಾಂನಿಂದ ಅಕ್ರಮ ವಲಸಿಗರನ್ನು ಹೊರಹಾಕುವುದೇ ಆಗಿತ್ತು.

ರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರರಾಷ್ಟ್ರೀಯ ಪೌರತ್ವ ನೋಂದಣಿ ಎಂದರೇನು?, ವಿವಾದ, ವಿವರ

ಇಂದಿರಾ ಗಾಂಧಿ ಅವರೂ ಕೂಡಾ ಬಹಳಷ್ಟು ಸಂದರ್ಭಗಳಲ್ಲಿ ಈ ಅಕ್ರಮ ವಲಸಿಗರನ್ನು ಹೊರ ಹಾಕುವಂತಹ ಹೇಳಿಕೆಗಳನ್ನು ನೀಡಿದ್ದರು.

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮುನ್ನಡೆಸುತ್ತಿರುವ ಕಾಂಗ್ರೆಸ್ ಜೊತೆಗೂಡಿ ಎಲ್ಲಾ ಪ್ರತಿಪಕ್ಷಗಳು ಸಂಸತ್‌ನಲ್ಲಿ, ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಸಹಿ ಮಾಡಿದ ಅಸ್ಸಾಂ ಒಪ್ಪಂದದ ಪರವಾಗಿದ್ದಾರೋ ಅಥವಾ ವಿರೋಧವಾಗಿದ್ದಾರೋ ಎಂಬ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕಾಗಿದೆ.

ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕ

ಅಕ್ರಮ ವಲಸಿಗರನ್ನು ಹೊರ ಹಾಕಿ ಎನ್ನುವುದು ಅಸ್ಸಾಂ ನಾಗರಿಕರ ಕಳೆದೊಂದು ದಶಕದ ಹೋರಾಟವಾಗಿದೆ.

ರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರುರಕ್ತಪಾತವಾಗುತ್ತದೆ ಎಂದು ಹೇಳಿದ್ದ ಮಮತಾ ಬ್ಯಾನರ್ಜಿ ವಿರುದ್ಧ ದೂರು

ರಾಜ್ಯದ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ತಾವು ದೇಶಭಕ್ತ ಭಾರತೀಯ ನಾಗರಿಕರ ಪರವಾಗಿದ್ದಾರೆಯೇ ಅಥವಾ ಅಕ್ರಮ ವಲಸಿಗರೊಂದಿಗಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

English summary
Union Minister Ananth Kumar questioned oppositions parties whether they are supporting patriotic indian citizens or with illegal immigrants, they should clear thiere stand he asked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X