ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಎನ್‌ಪಿಎಫ್

|
Google Oneindia Kannada News

ಕೊಹಿಮಾ, ಮೇ 19: ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಎನ್‌ಪಿಎಫ್‌(ನಾಗಾ ಪೀಪಲ್ಸ್‌ ಫ್ರಂಟ್) ಹಿಂಪಡೆಯಲು ನಿರ್ಧರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಲೋಕಸಭಾ ಚುನಾವಣೆ ಅಂತ್ಯವಾಗುತ್ತಿದ್ದಂತೆ ಮಣಿಪುರದಲ್ಲಿ ನಡೆದ ಈ ಬೆಳವಣಿಗೆ ಆಶ್ಚರ್ಯ ಮೂಡಿಸಿದೆ.

ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!ಪ್ರಧಾನಿಯಾದ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲೂ ಭಾಷಣವೇ ಮಾಡಿದ ಮೋದಿ!

60 ಶಾಸಕರ ಸಂಖ್ಯಾಬಲದ ವಿಧಾನಸಭೆಯಲ್ಲಿ ನಾಲ್ಕು ಶಾಸಕರನ್ನು ಹೊಂದಿರುವ ಎನ್‌ಪಿಎಫ್ ಬೆಂಬಲವನ್ನು ಹಿಂಪಡೆದರೂ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

NPF to pull out of BJP-led government in Manipur

ಇನ್ನೆರೆಡು ಸ್ಥಳೀಯ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ಸುಭದ್ರವಾಗಿದೆ. ಇದಲ್ಲದೆ ಚುನಾವಣೆ ಬಳಿಕ ಕಾಂಗ್ರೆಸ್‌ನ ಎಲ್ಲಾ ಎಂಟು ಶಾಸಕರು ಬಿಜೆಪಿ ಸೇರಿರುವುದು ಬಿಜೆಪಿ ಸಂಖ್ಯಾಬಲವನ್ನು 29ಕ್ಕೆ ಏರಿಸಿದೆ.

ಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿಬಿಜೆಪಿ 300ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಲಿದೆ: ಮೋದಿ

ಬಿಜೆಪಿ ನಾಯಕರು ನಮಗೆ ಗೌರವ ಕೊಡುತ್ತಿಲ್ಲ, ಎನ್‌ಪಿಎಫ್ ಜೊತೆಗೆ ಬಿಜೆಪಿಯವರ ನಡವಳಿಕೆಯಲ್ಲಿ ಹೊಂದಾಣಿಕೆ ಕಂಡುಬರುತ್ತಿಲ್ಲ. ಆದ್ದರಿಂದ ಕಳೆದ ಫೆಬ್ರವರಿಯಿಂದ ನಾವು ಪರಾಮರ್ಶೆ ಸಭೆ ನಡೆಸುತ್ತಾ ಬಂದಿದ್ದೇವೆ. ಮೈತ್ರಿ ಸರ್ಕಾರದಿಂದ ಹೊರಬರುವ ಕುರಿತು ನಿರ್ಧರಿಸಿದ್ದೇವೆ ಎಂದು ಎನ್‌ಪಿಎಫ್ ವಕ್ತಾರ ಅಕುಂಬೆಮೋ ಕಿಕೊನ್ ತಿಳಿಸಿದ್ದಾರೆ.

English summary
Upset with the indifferent attitude of the Bharatiya Janata Party, the Naga People’s Front (NPF) on Saturday decided to pull out of the BJP-led coalition government in Manipur after the Lok Sabha election process is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X