ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲುಗಳಲ್ಲಿ ಶೀಘ್ರವೇ ಇ ಶೌಚಾಲಯ ವ್ಯವಸ್ಥೆ

|
Google Oneindia Kannada News

ನವದೆಹಲಿ, ನವೆಂಬರ್ 21 : ಭಾರತೀಯ ರೈಲ್ವೆ ಇಲಾಖೆಯು ಈ ಬಾರಿಯ ವಿಶ್ವ ಶೌಚಾಲಯ ದಿನವನ್ನು ವಿಶಿಷ್ಟವಾಗಿ ಆಚರಿಸಿದೆ. ಭಾರತೀಯ ರೈಲು ಪ್ರಯಾಣಿಕರ ಸೌಲಭ್ಯಕ್ಕಾಗಿ ಮೊಟ್ಟ ಮೊದಲ ಬಾರಿಗೆ ಇ ಶೌಚಾಲಯ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಲಾಗಿದೆ.

ಭಾರತದಲ್ಲಿ ಇ ಶೌಚಾಲಯ ಹೊಸದೇನಲ್ಲ. ಆದರೆ, ಇದನ್ನು ರೈಲಿನಲ್ಲಿ ಅಳವಡಿಸಲು ಇಲ್ಲಿ ತನಕ ಯತ್ನಿಸಿರಲ್ಲ. ರೈಲ್ವೆ ಕೋಚ್ ಗಳಿಗೆ ತಕ್ಕಂತೆ ಇ ಟಾಯ್ಲೆಟ್ ಗಳನ್ನು ವಿನ್ಯಾಸಗೊಳಿಸಲಾಗುವುದುದ್ ಎಂದು ಕೇಂದ್ರ ರೈಲ್ವೆ ಪ್ರಕಟಿಸಿದೆ.

ಮೈಸೂರಿನ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಸುವುದು ಅಧಿಕಾರಿಗಳಿಗೇ ಬೇಡ ಮೈಸೂರಿನ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಸುವುದು ಅಧಿಕಾರಿಗಳಿಗೇ ಬೇಡ

ಸೆನ್ಸಾರ್ ಮೂಲಕ ಕಾರ್ಯ ನಿರ್ವಹಿಸುವ ಇ ಟಾಯ್ಲೆಟ್ ಗಳು ಸರಳವಾಗಿದ್ದು, ಸುಲಭವಾಗಿ ಎಲ್ಲರೂ ಉಪಯೋಗಿಸಬಹುದಾಗಿದೆ. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ ಡಿಪೋಗೆ ಸೇರಿದ ಕೇಂದ್ರ ರೈಲ್ವೆಯ ಟೈನ್ ನಂಬರ್ 11013 ಅಥವಾ ಎಲ್ ಟಿಟಿ ಕೊಯಮತ್ತೂರು ಎಕ್ಸ್ ಪ್ರೆಸ್ ನ ಕೋಚ್ 3ಎ ನಲ್ಲಿ ಅಳವಡಿಸಿ ಪರೀಕ್ಷಿಸಲಾಗುತ್ತಿದೆ.

Now, Railways introduces e-toilets in train coaches

ಬಯಲು ಬಹಿರ್ದೆಸೆ ಮುಕ್ತಗೊಂಡ ಗ್ರಾಮೀಣ ಕರ್ನಾಟಕಬಯಲು ಬಹಿರ್ದೆಸೆ ಮುಕ್ತಗೊಂಡ ಗ್ರಾಮೀಣ ಕರ್ನಾಟಕ

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆ ಘೋಷಿಸಿದ್ದು, ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ಮಹೋತ್ಸವದಂದು ಗಾಂಧೀಜಿ ಸ್ವಚ್ಛಭಾರತ ಕನಸು ನನಸಾಗಿಸುವ ಸಾಧನೆ ಬಗ್ಗೆ ಘೋಷಿಸಲಾಗುತ್ತದೆ. ಇಲ್ಲಿ ತನಕ 8,86,83,102 ಶೌಚಾಲಯಗಳನ್ನು ಈ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿದೆ.

English summary
The Indian Railways introduced electronically operated toilets or 'e-toilets' as a special initiative to mark World Toilet Day. This is the first time that a railway coach will be integrated with these.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X