ಪ್ರಧಾನಮಂತ್ರಿಗಳ ಕಾರ್ಯಾಲಯ ವೆಬ್ ಸೈಟ್ ಕನ್ನಡದಲ್ಲಿ ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಜನವರಿ 2: ಪ್ರಧಾನಮಂತ್ರಿಗಳ ಕಾರ್ಯಾಲಯ (ಪಿಎಂಒ) ದ ವೆಬ್ ಸೈಟ್ ಈಗ ಕನ್ನಡದಲ್ಲೇ ಲಭ್ಯವಿದೆ. ಇನ್ನು ಮುಂದೆ ಕನ್ನಡದಲ್ಲಿಯೂ ನಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹಂಚಿಕೊಳ್ಳಬಹುದು. ಪ್ರಾದೇಶಿಕ ಭಾಷೆಗಳಲ್ಲೂ ಪ್ರಧಾನಮಂತ್ರಿಗಳ ವೆಬ್ ಸೈಟ್ ಆರಂಭಿಸಲಾಗಿದೆ.

ಮೋದಿ ಪಿಎಂ ಆದ ನಂತರ ಹಾಕಿದ ರಜೆ ಎಷ್ಟು, ಆರ್ಟಿಐನಲ್ಲಿ ಬಹಿರಂಗ

ಆದರೆ, ಕನ್ನಡದಲ್ಲಿ ಶುರು ಮಾಡಿರುವುದು ಸಹ ಒಳ್ಳೆ ವಿಷಯವೇ. ಈ ವಿಚಾರವನ್ನು ಮಲ್ಲೇಶ್ವರ ಶಾಸಕ ಡಾ.ಅಶ್ವಥನಾರಾಯಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಚಿಕೊಂಡಿದ್ದಾರೆ. ಈ ಟ್ವೀಟ್ ಗೆ ಎರಡು ಕಾಮೆಂಟ್ ಮತ್ತು ಹತ್ತು ಮಂದಿ ರೀಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಪ್ರಧಾನಿ ಮೋದಿ ಇನ್ನಷ್ಟು ಹತ್ತಿರ ಆಗಿದ್ದಾರೆ ಎಂದು ಕೂಡ ಶಾಸಕರು ಹೇಳಿಕೊಂಡಿದ್ದಾರೆ.

Now PMO website available in Kannada

ಅಂದಹಾಗೆ ಈಗ ಹೊಸದಾಗಿ ಆರಂಭವಾಗಿರುವ ವೆಬ್ ಸೈಟ್ ನ ವಿಳಾಸ ಬೇಕಲ್ಲವೆ? ಇಲ್ಲಿ ಕ್ಲಿಕ್ ಮಾಡಿ. ವಿವಿಧ ವಿಭಾಗಗಳಿರುವ ಈ ವೆಬ್ ಸೈಟ್ ನಲ್ಲಿ ವಿವಿಧ ಬಗೆಯ ಮಾಹಿತಿಗಳಿವೆ. ಇನ್ನೇಕೆ ತಡ, ಪ್ರಧಾನ ಮಂತ್ರಿಗಳ ವೆಬ್ ಸೈಟ್ ಅನ್ನು ಒಮ್ಮೆ ಕ್ಲಿಕ್ ಮಾಡಿ ನೋಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now PMO website available in regional languages. Website available in Kannada. All information related to PM Narendra Modi and government scheme details available in Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ