ಪ್ರಧಾನಮಂತ್ರಿಗಳ ಕಾರ್ಯಾಲಯ ವೆಬ್ ಸೈಟ್ ಕನ್ನಡದಲ್ಲಿ ಲಭ್ಯ
ಬೆಂಗಳೂರು, ಜನವರಿ 2: ಪ್ರಧಾನಮಂತ್ರಿಗಳ ಕಾರ್ಯಾಲಯ (ಪಿಎಂಒ) ದ ವೆಬ್ ಸೈಟ್ ಈಗ ಕನ್ನಡದಲ್ಲೇ ಲಭ್ಯವಿದೆ. ಇನ್ನು ಮುಂದೆ ಕನ್ನಡದಲ್ಲಿಯೂ ನಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹಂಚಿಕೊಳ್ಳಬಹುದು. ಪ್ರಾದೇಶಿಕ ಭಾಷೆಗಳಲ್ಲೂ ಪ್ರಧಾನಮಂತ್ರಿಗಳ ವೆಬ್ ಸೈಟ್ ಆರಂಭಿಸಲಾಗಿದೆ.
ಮೋದಿ ಪಿಎಂ ಆದ ನಂತರ ಹಾಕಿದ ರಜೆ ಎಷ್ಟು, ಆರ್ಟಿಐನಲ್ಲಿ ಬಹಿರಂಗ
ಆದರೆ, ಕನ್ನಡದಲ್ಲಿ ಶುರು ಮಾಡಿರುವುದು ಸಹ ಒಳ್ಳೆ ವಿಷಯವೇ. ಈ ವಿಚಾರವನ್ನು ಮಲ್ಲೇಶ್ವರ ಶಾಸಕ ಡಾ.ಅಶ್ವಥನಾರಾಯಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಚಿಕೊಂಡಿದ್ದಾರೆ. ಈ ಟ್ವೀಟ್ ಗೆ ಎರಡು ಕಾಮೆಂಟ್ ಮತ್ತು ಹತ್ತು ಮಂದಿ ರೀಟ್ವೀಟ್ ಮಾಡಿದ್ದಾರೆ. ಕನ್ನಡಿಗರಿಗೆ ಪ್ರಧಾನಿ ಮೋದಿ ಇನ್ನಷ್ಟು ಹತ್ತಿರ ಆಗಿದ್ದಾರೆ ಎಂದು ಕೂಡ ಶಾಸಕರು ಹೇಳಿಕೊಂಡಿದ್ದಾರೆ.
ಅಂದಹಾಗೆ ಈಗ ಹೊಸದಾಗಿ ಆರಂಭವಾಗಿರುವ ವೆಬ್ ಸೈಟ್ ನ ವಿಳಾಸ ಬೇಕಲ್ಲವೆ? ಇಲ್ಲಿ ಕ್ಲಿಕ್ ಮಾಡಿ. ವಿವಿಧ ವಿಭಾಗಗಳಿರುವ ಈ ವೆಬ್ ಸೈಟ್ ನಲ್ಲಿ ವಿವಿಧ ಬಗೆಯ ಮಾಹಿತಿಗಳಿವೆ. ಇನ್ನೇಕೆ ತಡ, ಪ್ರಧಾನ ಮಂತ್ರಿಗಳ ವೆಬ್ ಸೈಟ್ ಅನ್ನು ಒಮ್ಮೆ ಕ್ಲಿಕ್ ಮಾಡಿ ನೋಡಿ.
The @PMOIndia website is now available in #Kannada: https://t.co/RCfC95hUTH.
— Dr. Ashwathnarayan (@drashwathcn) January 2, 2018
ಈಗ ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಹತ್ತಿರವಾಗಿದ್ದಾರೆ. ಕನ್ನಡ ಭಾಷೆಯ ಮೂಲಕ. @PMOIndia ಜಾಲತಾಣ ಕನ್ನಡದಲ್ಲಿ ಲಭ್ಯವಿದ್ದು, ಜನರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕನ್ನಡದಲ್ಲೇ ಪ್ರಧಾನಿಯ ಜತೆ ಹಂಚಿಕೊಳ್ಳಬಹುದು.