• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಿಂದ 13 ದೇಶಗಳಿಗೆ ಪ್ರಯಾಣಕ್ಕೆ ಅನುಮತಿ, ಮಾರ್ಗಸೂಚಿಯಲ್ಲೇನಿದೆ?

|

ನವದೆಹಲಿ, ಸೆಪ್ಟೆಂಬರ್ 22: ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸೆಪ್ಟೆಂಬರ್ 30ರವರೆಗೂ ರದ್ದುಪಡಿಸಲಾಗಿದೆ.

ಇದೀಗ ಭಾರತದಿಂದ 13 ದೇಶಗಳ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ, ಮಾಲ್ಡೀವ್ಸ್, ಯುಎಇ, ನೈಜೀರಿಯಾ, ಯುಕೆ, ಯುಎಸ್, ಅಫ್ಘಾನಿಸ್ತಾನ, ಬಹ್ರೇನ್, ಕೆನಡಾ, ಫ್ರಾನ್ಸ್, ಜರ್ಮನಿಗೆ ವಿಮಾನ ಹಾರಾಟ ಮಾಡಲಿದೆ.

ಹಲವು ನಿರ್ಬಂಧಗಳ ಜೊತೆಗೆ ವಿಮಾನ ಹಾರಾಟ ನಡೆಸಲಿದೆ. ಒಟ್ಟಿನಲ್ಲಿ ಎರಡೂ ದೇಶಗಳು ಸಮಾನ ಪ್ರಯೋಜನಗಳನ್ನು ಪಡೆಯಲಿವೆ. ಕನಿಷ್ಠ ಒಂದು ತಿಂಗಳ ಮಾನ್ಯತೆ ಹೊಂದಿರುವ ಭಾರತೀಯ ನಾಗರಿಕರು ಈ ದೇಶಗಳಿಗೆ ಪ್ರಯಾಣಿಸಬಹುದು. ಇದಲ್ಲದೆ ಒಸಿಐ ಕಾರ್ಡುದಾರರು ಈಗ ಭಾರತಕ್ಕೆ ಬರಬಹುದಾಗಿದೆ.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರಕ್ಕಿಲ್ಲ ನಿರ್ಬಂಧ

ಭಾರತಕ್ಕೆ ಆಗಮಿಸುವ ಹಾಗೂ ಭಾರತದಿಂದ ಈ ದೇಶಗಳಿಗೆ ಪ್ರಯಾಣಿಸುವವರಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಭಾರತದಿಂದ ಅಫ್ಘಾನಿಸ್ತಾನಕ್ಕೆ ಪ್ರಯಾಣ

ಭಾರತದಿಂದ ಅಫ್ಘಾನಿಸ್ತಾನಕ್ಕೆ ಪ್ರಯಾಣ

ಭಾರತವು ಅಫ್ಘಾನಿಸ್ತಾನದೊಂದಿಗೆ ವಾಯು ಸಾರಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಸೇವೆಗಳನ್ನು ನಿರ್ವಹಿಸಲು ಮತ್ತು ಅಂತಹ ವಿಮಾನಗಳಲ್ಲಿ ಈ ಕೆಳಗಿನ ವರ್ಗದ ವ್ಯಕ್ತಿಗಳು ಮಾತ್ರ ಪ್ರಯಾಣಬೆಳೆಸಬಹುದು ಎಂದು ಹೇಳಲಾಗಿದೆ.

ಭಾರತದಿಂದ ಅಮೆರಿಕಕ್ಕೆ ಹಾರಾಟ

ಭಾರತದಿಂದ ಅಮೆರಿಕಕ್ಕೆ ಹಾರಾಟ

ಯುಎಸ್ ನಾಗರಿಕರು, ಕಾನೂನು ಬದ್ಧ ಶಾಶ್ವತ ನಿವಾಸಿಗಳು ಮತ್ತು ಮಾನ್ಯ ಯುಎಸ್‌ ವೀಸಾಗಳನ್ನು ಹೊಂದಿರುವ ವಿದೇಶಿ ಪ್ರಜೆಗಳು

-ಯಾವುದೇ ರೀತಿಯ ಮಾನ್ಯ ಯುಎಸ್ ವೀಸಾ ಹೊಂದಿರುವ ಯಾವುದೇ ಭಾರತೀಯ ಪ್ರಜೆ ಟಿಕೆಟ್, ಬೋರ್ಡಿಂಗ್ ಪಾಸ್ ನೀಡುವ ಮೊದಲು ನಿರ್ದಿಷ್ಟ ವೀಸಾ ವಿಭಾಗದಲ್ಲಿ ಅಮೆರಿಕಕ್ಕೆ ಪ್ರಯಾಣಿಸಬಹುದಾಗಿದೆ.

ಅಮೆರಿಕದಿಂದ ಭಾರತ

-ಅಮೆರಿಕದಲ್ಲಿ ಸಿಲುಕಿರುವ ಭಾರತೀಯರು

-ಒಸಿಐ ಕಾರ್ಡ್‌ದಾರರು

-ಜೂನ್‌ 30 ರಂದು ಮಾಡಿರುವ ತಿದ್ದುಪಡಿಯಂತೆ ಮಾರ್ಗಸೂಚಿಗಳ ಪ್ರಕಾರ ಭಾರತಕ್ಕೆ ಪ್ರವೇಶಿಸಲು ಅರ್ಹರಾಗಿರುವ ವಿದೇಶಿಯರು.

ಭಾರತ-ಅಫ್ಘಾನಿಸ್ತಾನ

-ಅಗತ್ಯವಿದ್ದರೆ ಅಫ್ಘಾನಿಸ್ತಾನ ಪ್ರಜೆಗಳು, ವಿದೇಶಿ ಪ್ರಜೆಗಳು ಅಫ್ಘಾನಿಸ್ತಾನ ಮಾನ್ಯ ವೀಸಾಗಳನ್ನು ಹೊಂದಿರಬಹುದು

-ಯಾವುದೇ ಭಾರತೀಯ ಅಫ್ಘಾನಿಸ್ತಾನದ ವೀಸಾ ಹೊಂದಿದ್ದರೆ ಅಲ್ಲಿಗೆ ಮಾತ್ರ ತೆರಳಲು ಅವಕಾಶವಿರುತ್ತದೆ. ಭಾರತದಿಂದ ಅಫ್ಘಾನಿಸ್ತಾನಕ್ಕೆ ತೆರಳಲು ಭಾರತದಲ್ಲಿ ಯಾವುದೇ ನಿರ್ಬಂಧಗಳಿಲ್ಲ.

ಅಫ್ಘಾನಿಸ್ತಾನದಿಂದ ಭಾರತಕ್ಕೆ ಪ್ರಯಾಣ:

-ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು

-ಅಫ್ಘಾನಿಸ್ತಾನ ಪಾಸ್‌ಪೋರ್ಟ್ ಹೊಂದಿರುವ ಎಲ್ಲಾ ಒಸಿಐ ಕಾರ್ಡ್‌ದಾರರು

ಭಾರತದಿಂದ ಬಹ್ರೇನ್‌ಗೆ ಪ್ರಯಾಣ

ಭಾರತದಿಂದ ಬಹ್ರೇನ್‌ಗೆ ಪ್ರಯಾಣ

-ಬಹ್ರೇನ್ ಪ್ರಜೆಗಳು/ನಿವಾಸಿಗಳು

-ಯಾವುದೇ ಭಾರತೀಯರು ಬಹ್ರೇನ್‌ನಿಂದ ಯಾವುದೇ ರೀತಿಯ ಮಾನ್ಯ ವೀಸಾ ಹೊಂದಿದ್ದರೆ ಅದು ಬಹ್ರೇನ್‌ಗೆ ಮಾತ್ರ ಸೀಮಿತವಾಗಿರುತ್ತದೆ. ಭಾರತೀಯ ಪ್ರಯಾಣಿಕರಿಗೆ ಟಿಕೆಟ್/ಬೋರ್ಡಿಂಗ್ ಪಾಸ್ ನೀಡುವ ಮೊದಲು ನಿರ್ದಿಷ್ಟ ವೀಸಾದೊಂದಿಗೆ ಬಹ್ರೇನ್ ಪ್ರವೇಶಿಸಲು ಯಾವುದೇ ನಿರ್ಬಂಧವಿಲ್ಲ.

ಬಹ್ರೇನ್‌ನಿಂದ ಭಾರತಕ್ಕೆ ಪ್ರಯಾಣ

-ಬಹ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು

-ಒಸಿಐ ಕಾರ್ಡ್ ಇರುವವರು

ಭಾರತದಿಂದ ಭೂತಾನ್‌ಗೆ ಪ್ರಯಾಣ

ಭಾರತದಿಂದ ಭೂತಾನ್‌ಗೆ ಪ್ರಯಾಣ

ಭೂತಾನ್ ಪ್ರಜೆಗಳು ಅಥವಾ ನಿವಾಸಿಗಳು ಅಥವಾ ವಿದೇಶಿ ಪ್ರಜೆಗಳು ಅಗತ್ಯವಿದ್ದರೆ ಭೂತಾನ್ ವೀಸಾ ಇಟ್ಟುಕೊಳ್ಳಬಹುದು

-ಭಾರತೀಯ ಪ್ರಜೆ ಭಾರತೀಯ ಪ್ರಯಾಣಿಕರಿಗೆ ಟಿಕೆಟ್/ಬೋರ್ಡಿಂಗ್ ಪಾಸ್ ನೀಡುವ ಮೊದಲು ನಿರ್ದಿಷ್ಟ ವೀಸಾದೊಂದಿಗೆ ಭೂತಾನ್ ಪ್ರವೇಶಿಸಲು ಯಾವುದೇ ನಿರ್ಬಂಧವಿಲ್ಲ.

ಭೂತಾನ್‌ನಿಂದ ಭಾರತ

-ಭಾರತೀಯ ಪ್ರಜೆಗಳು

-ಎಲ್ಲಾ ಒಸಿಐ ಕಾರ್ಡ್‌ದಾರರು

ಭಾರತದಿಂದ ಕೆನಡಾ

ಭಾರತದಿಂದ ಕೆನಡಾ

-ಭಾರತದಲ್ಲಿ ಸಿಲುಕಿರುವ ಕೆನಡಾ ಪ್ರಜೆಗಳು, ನಿವಾಸಿಗಳು, ವಿದೇಶಿಯರು ಮಾನ್ಯ ಕೆನಡಾ ವೀಸಾ ಹೊಂದಿದ್ದಲ್ಲಿ ಪ್ರಯಾಣಿಸಬಹುದು.

-ಭಾರತೀಯರು ಕೆನಡಾಗೆ ತೆರಳಬೇಕಿದ್ದರೆ ಮಾನ್ಯ ವೀಸಾ ಇರಲೇಬೇಕುಆದರೆ ಭಾರತೀಯ ಪ್ರಜೆ ಭಾರತೀಯ ಪ್ರಯಾಣಿಕರಿಗೆ ಟಿಕೆಟ್/ಬೋರ್ಡಿಂಗ್ ಪಾಸ್ ನೀಡುವ ಮೊದಲು ನಿರ್ದಿಷ್ಟ ವೀಸಾದೊಂದಿಗೆ ಕೆನಡಾಗೆ ಪ್ರವೇಶಿಸಲು ಯಾವುದೇ ನಿರ್ಬಂಧವಿಲ್ಲ.

ಕೆನಡಾದಿಂದ ಭಾರತ

-ಕೆನಡಾದಲ್ಲಿ ಸಿಲುಕಿರುವ ಭಾರತೀಯರು

-ಒಡಿಐ ಕಾರ್ಡ್‌ದಾರರು

-ಜುಲೈ 30 ಮಾರ್ಗಸೂಚಿ ಪ್ರಕಾರ ಭಾರತಕ್ಕೆ ಬರಬಹುದಾಗಿದೆ.

ಭಾರತದಿಂದ ಫ್ರಾನ್ಸ್‌ಗೆ ಪ್ರಯಾಣ

ಭಾರತದಿಂದ ಫ್ರಾನ್ಸ್‌ಗೆ ಪ್ರಯಾಣ

-ಗೃಹ ಸಚಿವಾಲಯ ಜುಲೈ 1 ರಂದು ಬಿಡುಗಡೆ ಮಾಡಿರುವ ಮಾರ್ಗ ಸೂಚಿ ಪ್ರಕಾರ ಭಾರತೀಯ ಪ್ರಜೆ ಫ್ರಾನ್ಸ್ ಗೆ ಪ್ರಯಾಣ ಬೆಳೆಸಬಹುದು

ಫ್ರಾನ್ಸ್‌ನಿಂದ ಭಾರತ

-ಫ್ರಾನ್ಸ್‌ನಲ್ಲಿ ಸಿಲುಕಿರುವ ಭಾರತೀಯರು

ಭಾರತದಿಂದ ಜರ್ಮನಿಗೆ ಪ್ರಯಾಣ

ಭಾರತದಿಂದ ಜರ್ಮನಿಗೆ ಪ್ರಯಾಣ

-ಭಾರತೀಯ ಪ್ರಜೆಗಳು ಜುಲೈ 1 ರಂದು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಜರ್ಮನಿಗೆ ತೆರಳಬಹುದು.

ಜರ್ಮನಿಯಿಂದ ಭಾರತಕ್ಕೆ

-ಜರ್ಮನಿಯಲ್ಲಿ ಸಿಲುಕಿರುವ ಭಾರತೀಯರು

ಭಾರತದಿಂದ ಇರಾಖ್

ಭಾರತದಿಂದ ಇರಾಖ್

-ಇರಾಖ್‌ನ ಪ್ರಜೆಗಳು ಹಾಗೂ ನಿವಾಸಿಗಳು

ಇರಾಖ್‌ನಿಂದ ಭಾರತ

-ಇರಾಖ್‌ನಲ್ಲಿ ಸಿಲುಕಿರುವ ಭಾರತೀಯರು

-ಒಸಿಐ ಕಾರ್ಡ್‌ದಾರರು

ಭಾರತದಿಂದ ಜಪಾನ್

ಭಾರತದಿಂದ ಜಪಾನ್

-ಭಾರತದಲ್ಲಿ ಸಿಲುಕಿರುವ ಜಪಾನ್ ಪ್ರಜೆಗಳು ಅಥೌಆ ನಿವಾಸಿಗಳು, ಯಾವುದೇ ಜಪಾನ್ ವೀಸಾವನ್ನು ಹೊಂದಿದ್ದರೆ ತೆರಳಬಹುದು.

-ಭಾರತೀಯ ಪ್ರಜೆಗಳು ಯಾವುದೇ ರೀತಿಯ ಮಾನ್ಯ ವೀಸಾಗಳನ್ನು ಹೊಂದಿದ್ದರೆ ಅದು ಜಪಾನ್‌ಗೆ ಮಾತ್ರ ಸೀಮಿತವಾಗಿರುತ್ತದೆ. ಟಿಕೆಟ್, ಬೋರ್ಡಿಂಗ್ ಪಾಸ್‌ಗೂ ಮುನ್ನ ಜಪಾನ್‌ಗೆ ಪ್ರಯಾಣಿಸಬಹುದು.

ಭಾರತದಿಂದ ಮಾಲ್ಡೀವ್ಸ್‌ಗೆ ಪ್ರಯಾಣ

ಭಾರತದಿಂದ ಮಾಲ್ಡೀವ್ಸ್‌ಗೆ ಪ್ರಯಾಣ

-ಮಾಲ್ಡೀವ್ಸ್ ಪ್ರಜೆ, ನಿವಾಸಿಗಳು ಅಗತ್ಯವಿದ್ದರೆ ಮಾಲ್ಡೀವ್ಸ್ ವೀಸಾ ಹೊಂದಬಹುದಾಗಿದೆ.

-ಭಾರತೀಯ ಪ್ರಜೆಗಳು ಯಾವುದೇ ರೀತಿಯ ಮಾನ್ಯ ವೀಸಾಗಳನ್ನು ಹೊಂದಿದ್ದರೆ ಅದು ಮಾಲ್ಡೀವ್ಸ್ಗೆ ಮಾತ್ರ ಸೀಮಿತವಾಗಿರುತ್ತದೆ. ಟಿಕೆಟ್, ಬೋರ್ಡಿಂಗ್ ಪಾಸ್‌ಗೂ ಮುನ್ನ ಮಾಲ್ಡೀವ್ಸ್‌ಗೆ ಪ್ರಯಾಣಿಸಬಹುದು.

ಮಾಲ್ಡೀವ್ಸ್-ಭಾರತ

-ಭಾರತೀಯ ಪ್ರಜೆಗಳು

-ಭಾರತೀಯ ಗೃಹ ಸಚಿವಾಲಯ ಜೂನ್ 30ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ತೆರಳಲು ಅವಕಾಶ ನೀಡಲಾಗಿದೆ.

ಭಾರತದಿಂದ ನೈಜೀರಿಯಾ

ಭಾರತದಿಂದ ನೈಜೀರಿಯಾ

-ಭಾರತದಲ್ಲಿ ಸಿಲುಕಿರುವ ನೈಜೀರಿಯಾ ಪ್ರಜೆಗಳು, ನಿವಾಸಿಗಳು, ಆಫ್ರಿಕಾಕೆ ತೆರಳಲು ನಿರ್ಧರಿಸಿರುವವರು, ಸಂಗಾತಿ ಜೊತೆಗೆ ತೆರಳಲು ಬಯಸುವವರು

-ಭಾರತೀಯ ಪ್ರಜೆ ನೈಜರಿಯಾ ವೀಸಾವನ್ನು ಹೊಂದಿದ್ದರೆ ಅಲ್ಲಿಗೆ ಮಾತ್ರ ತೆರಳಲು ಅವಕಾಶವಿರುತ್ತದೆ

ನೈಜೀರಿಯಾದಿಂದ ಭಾರತ

-ಆಫ್ರಿಕಾದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು

-ಒಸಿಐ ಕಾರ್ಡ್‌ದಾರರು

ಭಾರತದಿಂದ ಖತಾರ್‌ಗೆ ತೆರಳುವವರು

ಭಾರತದಿಂದ ಖತಾರ್‌ಗೆ ತೆರಳುವವರು

-ಖತಾರ್ ಪ್ರಜೆಗಳು

-ಯಾರಾದರೂ ಖತಾರ್ ವೀಸಾವನ್ನು ಹೊಂದಿದ್ದರೆ ಖತಾರ್‌ವರೆಗೆ ಮಾತ್ರ ಪ್ರವೇಶಿಸಲು ಅವಕಾಶ

-ಖತಾರ್‌ನಿಂದ ಭಾರತಕ್ಕೆ

-ಖತಾರ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು

-ಒಸಿಐ ಕಾರ್ಡ್‌ದಾರರು

-ಭಾರತೀಯ ಮಿಷನ್ ನೀಡಿರುವ ವೀಸಾವನ್ನು ಖತಾರ್ ಪ್ರಜೆಗಳು ಹೊಂದಿರಬೇಕು

ಭಾರತದಿಂದ ಯುಎಇ

ಭಾರತದಿಂದ ಯುಎಇ

-ಯುಎಇ ಪ್ರಜೆಗಳು

-ಐಸಿಎ ಅನುಮೋದಿತ ಯುಎಇ ನಿವಾಸಿಗಳಿಗೆ ಯುಎಇಗೆ ತೆರಳಲು ಮಾತ್ರ ಅವಕಾಶ

ಯುಎಇಯಿಂದ ಭಾರತ

-ಯುಎಇಯಲ್ಲಿ ಸಿಲುಕಿರುವ ಭಾರತ ಪ್ರಜೆಗಳು

-ಒಸಿಐ ಕಾರ್ಡ್‌ದಾರರು

ಭಾರತದಿಂದ ಯುಕೆ

ಭಾರತದಿಂದ ಯುಕೆ

-ಭಾರತದಲ್ಲಿ ಸಿಲುಕಿರುವ ಯುಕೆ ಪ್ರಜೆ, ಸಂಗಾತಿಯೊಂದಿಗೆ ಯುಕೆಗೆ ಪ್ರಯಾಣ ಬೆಳೆಸುವವರು

-ಭಾರತೀಯರು ಯಾವುದೇ ರೀತಿಯ ಯುಕೆ ವೀಸಾ ಹೊಂದಿದ್ದರೆ ಅದು ಯುಕೆ ಹೋಗಲು ಮಾತ್ರ ಅವಕಾಶವಿರುತ್ತದೆ

ಯುಕೆಯಿಂದ ಭಾರತ

-ಯುಕೆಯಲ್ಲಿ ಸಿಲುಕಿರುವ ಭಾರತೀಯರು

-ಒಸಿಐ ಕಾರ್ಡ್‌ದಾರರು

English summary
Though International flights in India will remain suspended till September 30, the country has established bilateral air bubble arrangements with 13 countries — Afghanistan, Bahrain, Canada, France, Germany, Iraq, Japan, Maldives, Nigeria, Qatar, UAE, UK and US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X