ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಚಾಲಕರಿಗೆ ಇಲ್ಲೊಂದು ಸಿಹಿ ಸುದ್ದಿ

ಎಲ್ ಎಲ್ ಅನ್ನು ಆನ್ ಲೈನ್ ಮೂಲಕವೇ ಪಡೆಯಬಹುದಾದ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.

|
Google Oneindia Kannada News

ನವದೆಹಲಿ, ಏಪ್ರಿಲ್ 1: ವಾಹನ ಚಾಲನೆಯನ್ನು ಕಲಿಯುತ್ತಿರುವವರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಲರ್ನಿಂಗ್ ಲೈಸೆನ್ಸ್ ಅನ್ನು ಪಡೆಯಲು ಇನ್ನು ಮುಂದೆ ಆರ್ ಟಿ ಒ ಆಫೀಸ್ ಗಳ ಮುಂದೆ ಸಾಲುಗಟ್ಟುವ ಅಗತ್ಯವಿರೋಲ್ಲ, ಯಾಕಂದ್ರೆ ಎಲ್ ಎಲ್ ಅನ್ನು ಆನ್ ಲೈನ್ ಮೂಲಕವೇ ಪಡೆಯಬಹುದಾದ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.

Now get your learning driving licence online

ಮಾರ್ಚ್ 31 ರಂದು ನಡೆದ ಮಂತ್ರಿಮಂಡಲ ಸಭೆಯ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಈ ವ್ಯವಸ್ಥೆ ದೇಶದಾದ್ಯಂತ ಲಭ್ಯವಿದ್ದು, ಇದರಿಂದಾಗಿ ನಕಲಿ ವಾಹನ ಪರವಾನಗಿಯ ಪ್ರಕರಣಗಳು ನಿಯಂತ್ರಣಕ್ಕೆ ಬರಲಿವೆ ಎಂದಿದ್ದಾರೆ.

ಮೋಟಾರ್ ವೆಹಿಕಲ್ ಬಿಲ್ -2016 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇದರ ಅನ್ವಯ ಆಧಾರ್ ಸಂಖ್ಯೆಯ ಮೂಲಕವೇ ಆನ್ ಲೈನ್ ನಲ್ಲಿ ವಾಹನ ಚಾಲನಾ ಪರವಾನಗಿ(ಡ್ರೈವಿಂಗ್ ಲೈಸೆನ್ಸ್) ಅರ್ಜಿ ಸಲ್ಲಿಸಬಹುದು. ಮತ್ತು ಲರ್ನಿಂಗ್ ಲೈಸೆನ್ಸ್ ಅನ್ನು ಪಡೆಯುವುದಕ್ಕೆ ಆರ್ ಟಿ ಒ ಕಚೇರಿಗೆ ತೆರಳುವ ಅಗತ್ಯವಿಲ್ಲ. ವಾಹನದ ದಾಖಲಾತಿ ಸಂಖ್ಯೆಗೂ ಆಧಾರ್ ಲಿಂಕ್ ಮಾಡುವುದರಿಂದ ವಾಹನ ಕಳ್ಳರಿಗೂ ಶಾಸ್ತಿಯಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

English summary
"We have proposed an amendment in the Motor Vehicle Act where people need to have Aadhaar number to apply for driving licence and need not to visit transport offices to get a learning driving licence as it all will be online," Road Transport and Highways Minister Nitin Gadkari told after the Cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X