ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡಲಿದೆ ಅಮೆಜಾನ್ ಅಲೆಕ್ಸಾ

|
Google Oneindia Kannada News

ನವದೆಹಲಿ, ಆಗಸ್ಟ್‌ 03: ಅಮೆಜಾನ್ ಅಲೆಕ್ಸಾವು ಕೊರೊನಾ ಲಸಿಕಾ ಕೇಂದ್ರದ ಕುರಿತು ಮಾಹಿತಿಯನ್ನು ನೀಡಲಿದೆ.

ನಿಮ್ಮ ಸಮೀಪದಲ್ಲಿರುವ ಕೊರೊನಾ ಲಸಿಕೆ ಕೇಂದ್ರ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಆದರೆ ಆ ಗೊಂದಲಕ್ಕೆ ಉತ್ತರ ನೀಡಲು ಅಮೆಜಾನ್ ಅಲೆಕ್ಸಾ ರೆಡಿ ಇದೆ.

ನವೆಂಬರ್ ವೇಳೆಗೆ ಮತ್ತೆ 4 ಕಂಪನಿಗಳಿಂದ ಕೊರೊನಾ ಲಸಿಕೆ ಉತ್ಪಾದನೆನವೆಂಬರ್ ವೇಳೆಗೆ ಮತ್ತೆ 4 ಕಂಪನಿಗಳಿಂದ ಕೊರೊನಾ ಲಸಿಕೆ ಉತ್ಪಾದನೆ

ವಿಶ್ವಾದ್ಯಂತ ಡೆಡ್ಲಿ ಕೊರೊನಾವೈರಸ್ ಹಾವಳಿ ಆರಂಭವಾಗಿ ಒಂದೂವರೆ ವರ್ಷವೇ ಕಳೆದಿದೆ, ರೂಪಾಂತರಿ ವೈರಸ್‌ಗಳು ಜನರನ್ನು ನರಕಕ್ಕೆ ತಳ್ಳಿದೆ. ಈಗಾಗಲೇ ವಿವಿಧ ದೇಶಗಳ ಸರ್ಕಾರಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೊರೊನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ.

Now Amazon Alexa Can Help Locate COVID Vaccine, Testing Centres Near You

ಅಮೆಜಾನ್ ಅಲೆಕ್ಸಾ ಮೂಲಕ ನೀವು ಇನ್ಮುಂದೆ ನಿಮ್ಮ ಹತ್ತಿರದ ಕೊರೊನಾ ಲಸಿಕಾ ಕೇಂದ್ರಗಳು ಎಲ್ಲಿವೆ ಎಂಬುದನ್ನು ಪತ್ತೆಹಚ್ಚಬಹುದು. ಅಲೆಕ್ಸಾ ಸರಿಸುಮಾರು 85 ದೇಶಗಳಲ್ಲಿರುವ ಕೊರೊನಾ ಲಸಿಕೆಯ ಅರ್ಹತೆ ಬಗ್ಗೆ ಹಾಗೂ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಿದೆ.

ಗ್ರಾಹಕರು ಕೇಳಿರುವ ಕೊರೊನಾ ಸಂಬಂಧಿ ಮಿಲಿಯನ್‌ಗಟ್ಟಲೇ ಪ್ರಶ್ನೆಗಳಿಗೆ ಅಲೆಕ್ಸಾ ಸರಿಯಾದ ಉತ್ತರ ನೀಡಲಿದೆ ಎಂದು ಅಮೆಜಾನ್ ಹೇಳಿದೆ.

ಅಮೆರಿಕದಲ್ಲಿರುವ ಅಮೆಜಾನ್ ಅಲೆಕ್ಸಾ ಬಳಕೆದಾರರಿಗಾಗಿ Alexa where can I get a COVID vaccine? ಎಂಬ ಆಯ್ಕೆಯನ್ನು ನೀಡಲಾಗಿದೆ. ಈ ಸೌಲಭ್ಯವನ್ನು ಭಾರತದಲ್ಲೂ ನೀಡುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.

ಕೇವಲ ಕೊರೊನಾ ಲಸಿಕಾ ಕೇಂದ್ರ ಮಾತ್ರವಲ್ಲದೆ ಎಲ್ಲೆಲ್ಲಿ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ ಅಲ್ಲಿಯ ಮಾಹಿತಿಯೂ ಕೂಡ ದೊರೆಯಲಿದೆ. MapMyIndia ಹಾಗೂ Amex ಮೂಲಕ ಹತ್ತಿದ ಕೊರೊನಾ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯಬಹುದು.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಹೆಚ್ಚಿಸಿರುವ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ವಿರುದ್ಧ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ಹೇಳಿದೆ.

ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಸೂಕ್ಷ್ಮಾಣು ಪ್ರಯೋಗಾಲಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊವ್ಯಾಕ್ಸಿನ್ ಲಸಿಕೆಯನ್ನು ಸಂಶೋಧಿಸಿ ಉತ್ಪಾದಿಸಲಾಗುತ್ತಿದೆ.

ಕೊವ್ಯಾಕ್ಸಿನ್ ಲಸಿಕೆಯು ಕೊರೊನಾವೈರಸ್ ಸೋಂಕಿನ ವಿರುದ್ಧ ಶೇ.77.80ರಷ್ಟು ಪರಿಣಾಮಕಾರಿಯಾಗಿದ್ದು, ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಶೇ.65.20ರಷ್ಟು ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆಯು ತಿಳಿಸಿದೆ.

ಈವರೆಗೆ ಕೇಂದ್ರವು ರಾಜ್ಯಗಳಿಗೆ 49.85 (49,85,51,660) ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು 2,75,88,573 ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ.

ಮಂಗಳವಾರ ಲಭ್ಯವಿರುವ ಮಾಹಿತಿಯ ಪ್ರಕಾರ, ತ್ಯಾಜ್ಯಗಳು ಸೇರಿದಂತೆ ಒಟ್ಟು 47,52,49,554 ಪ್ರಮಾಣದಷ್ಟು ಲಸಿಕೆಗಳು ಬಳಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 20,94,890 ಡೋಸ್ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ 1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 47,85,44,114 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

English summary
People who are looking for COVID vaccine and testing centres at this time of Coronavirus pandemic, here comes a piece of good news for you. Amazon India has now updated its virtual assistant Alexa to help users find more COVID-related information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X