ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೂ ಅನಿರೀಕ್ಷಿತವಲ್ಲ, ನಮಗೆ ಬಹುಮತವಿದೆ: ತ್ರಿಪುರಾ ಬಿಜೆಪಿ

|
Google Oneindia Kannada News

ಅಗರ್ತಲಾ, ಫೆಬ್ರವರಿ 8: ''ಇಬ್ಬರು ಬಿಜೆಪಿ ಶಾಸಕರ ರಾಜೀನಾಮೆ ಅನಿರೀಕ್ಷಿತವೇನೂ ಅಲ್ಲ, ನಮಗೆ ಬಹುಮತವಿದೆ'' ಎಂದು ತ್ರಿಪುರಾ ಬಿಜೆಪಿ ಹೇಳಿದೆ.

ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹಾ ಅವರು ಸೋಮವಾರ ತ್ರಿಪುರಾ ವಿಧಾನಸಭೆಗೆ ರಾಜೀನಾಮೆ ನೀಡಿದ್ದು ಈ ಕುರಿತು ತ್ರಿಪುರ ಸಚಿವ ಸುಶಾಂತ ಚೌಧುರಿ ಹೇಳಿಕೆ ನೀಡಿದ್ದಾರೆ.

ತ್ರಿಪುರಾ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯತ್ರಿಪುರಾ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

ಈ ಇಬ್ಬರು ಶಾಸಕರು ಪದೇ ಪದೇ ಸಭೆಯನ್ನು ಸೇರುತ್ತಿದ್ದರು, ಒಂದು ದಿನ ಹೀಗೆ ಆಗುತ್ತದೆ ಎಂಬ ಅರಿವು ನಮಗಿತ್ತು ಎಂದಿದ್ದಾರೆ.

Nothing Unexpected, We Have Comfortable Majority, Says Tripura BJP After Two MLAs Quit Party

ರಾಯ್ ಬರ್ಮನ್ ಮತ್ತು ಸಾಹಾ ಅವರು ಸ್ಪೀಕರ್ ರತನ್ ಚಕ್ರವರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

ಇಬ್ಬರು ಶಾಸಕರು ಕಾಂಗ್ರೆಸ್ ಸೇರಬಹುದು ಎಂಬ ಊಹಾ ಪೋಹಗಳ ನಡುವೆ ಇಬ್ಬರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ತಮ್ಮ ಮುಂದಿನ ನಡೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಂಗಳವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

"ನಾವು ಫೆಬ್ರವರಿ 12 ರಂದು ತ್ರಿಪುರಾಕ್ಕೆ ಹಿಂತಿರುಗುತ್ತೇವೆ. ನಾವು ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರಿಗೆ ಪತ್ರವನ್ನು ಕಳುಹಿಸಿದ್ದೇವೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ" ಎಂದು ಸಾಹಾ ಹೇಳಿದರು. ಇಬ್ಬರು ಶಾಸಕರ ರಾಜೀನಾಮೆಯಿಂದ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 33ಕ್ಕೆ ಕುಸಿದಿದೆ.

ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಭಾರತೀಯ ಜನತಾ ಪಕ್ಷದ ಬಂಡಾಯ ಶಾಸಕ ಹಾಗೂ ತ್ರಿಪುರಾ ಮಾಜಹಿ ಆರೋಗ್ಯ ಸಚಿವ ಸುದೀಪ್ ರಾಯ್ ಬರ್ಮನ್ ಅವರು ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ತಾನು ಮಂಗಳವಾರ ಕಾಂಗ್ರೆಸ್‌ಗೆ ಸೇರಬಹುದು ಎಂಬ ಊಹಾಪೋಹಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಗೆ ಪ್ರಯಾಣಿಸಿ ಬಳಿಕ ಮುಂದಿನ ಕ್ರಮಗಳನ್ನು ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.

Recommended Video

ಮದರಸಾಗೆ ಹೇಗ್ ಹೋಗ್ಬೇಕು ಅಂತಾ ಪ್ರತಾಪ್ ಸಿಂಹ ಹೇಳಿಕೊಡ್ಬೇಕಾಗಿಲ್ಲ | Oneindia Kannada

English summary
Tripura unit of BJP on Monday said that resignation of two rebel MLAs was nothing unexpected for the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X