ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎನ್ನುವ ಕಂಡು ಕೇಳರಿಯದ ಲಾಬಿ: ಕೇಂದ್ರ ಸರಕಾರಕ್ಕೆ ವೈದ್ಯರ 10 ಪ್ರಶ್ನೆಗಳು

|
Google Oneindia Kannada News

"ಕೊರೊನಾ ಎನ್ನುವುದು ಒಂದು ಸಾಮಾನ್ಯ ವೈರಸ್ ಆಗಿದ್ದು, ಇದೊಂದು ಶೀತಜ್ವರ ಸಮಸ್ಯೆಯನ್ನು ಮಾತ್ರ ತರಬಲ್ಲದು" ಎಂದು ಡಾ.ತರುಣ್ ಕೊಠಾರಿ ನೇತೃತ್ವದ ತಂಡ ದೆಹಲಿಯಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನು ಕರೆದು, ಕೆಲವೊಂದು ಅಂಶಗಳನ್ನು ವಿವರಿಸಿತ್ತು.

ಆದರೆ, ಕೊರೊನಾ ಎನ್ನುವುದನ್ನು ಮಾರಣಾಂತಿಕ ವೈರಸ್ ಎನ್ನುವ ಮೂಲಕ ಬಹುದೊಡ್ಡ ಅಂತರಾಷ್ಟ್ರೀಯ ಲಾಬಿ ಇದರ ಹಿಂದೆ ಎಂದು ಡಾ.ತರುಣ್ ಅಭಿಪ್ರಾಯ ಪಟ್ಟಿದ್ದಾರೆ. ಒಂದೇ ರೋಗಿಯ ಟೆಸ್ಟ್ ರಿಪೋರ್ಟ್ ಅನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದ ಈ ವೈದ್ಯರು, "ಒಂದೇ ದಿನ,ಒಂದೇ ರೋಗಿಯ ರಿಪೋರ್ಟ್, ಬೇರೆ ಬೇರೆ ಲ್ಯಾಬ್ ನಲ್ಲಿ ಪಾಸಿಟೀವ್, ನೆಗೆಟೀವ್ ಬರಲು ಹೇಗೆ ಸಾಧ್ಯ" ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಮೆಡಿಕಲ್ ಅಶೋಷಿಯೇಯನ್ ಸದಸ್ಯರಾಗಿರುವ ಡಾ. ತರುಣ್, ಎಂಬಿಬಿಎಸ್, ಎಂಡಿ ಪದವೀಧರರಾಗಿದ್ದು, 18 ವರ್ಷಗಳ ಅನುಭವವನ್ನು (Radiologist) ಹೊಂದಿದ್ದು, ದೆಹಲಿಯಲ್ಲಿ ಇಂಡೋ ಅಮೆರಿಕನ್ ಹೆಲ್ತ್ ಲ್ಯಾಬ್ ಮತ್ತು ಕ್ಲಿನಿಕ್ ಅನ್ನು ಹೊಂದಿದ್ದಾರೆ. ಎಂಆರ್ಐ, ನ್ಯೂರೋರಾಡಿಯಾಲಜಿ, ಕಾರ್ಡಿಯಾಕ್ ಸಿಟಿ ಸ್ಕ್ಯಾನ್ ಪರಿಣತರಾಗಿದ್ದಾರೆ.

ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!ಚೀನಾಗೆ ಬೆನ್ನಿಗೆ ಗುನ್ನಾ ಇಡಲು ಹೊರಟ ಅಮೆರಿಕ..!

"ಈಗಾಗಲೇ ಕೊರೊನಾ ಎನ್ನುವುದು ಮಹಾಮಾರಿ ಎನ್ನುವುದನ್ನು ಯಾರಾದರೂ ಸಾಬೀತು ಪಡಿಸಿದರೆ, ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದೇನೆ" ಎಂದು ಹೇಳಿರುವ ಈ ಡಾಕ್ಟರ್, "ಸಾವಿನ ಪ್ರಮಾಣ ಭಾರತದಲ್ಲಿ ಶೇ.3 ಎಂದು ಏನು ಹೇಳುತ್ತಿದ್ದಾರೋ, ಅದು ಸರಿಯಾದ ಅಂಕಿ ಅಂಶ ಅಲ್ಲ"ಎಂದು ಹೇಳಿದ್ದಾರೆ. ಕೇಂದ್ರ ಸರಕಾರಕ್ಕೆ ಹತ್ತು ಪ್ರಶ್ನೆಗಳು:

ಮಾಸ್ಕ್ ಧರಿಸಲು ಹೇಳಿದರು ಇದರಿಂದ ಉಪಯೋಗವಾದರೂ ಏನು

ಮಾಸ್ಕ್ ಧರಿಸಲು ಹೇಳಿದರು ಇದರಿಂದ ಉಪಯೋಗವಾದರೂ ಏನು

"ಮಾಸ್ಕ್ ಧರಿಸಲು ಹೇಳಿದರು ಇದರಿಂದ ಉಪಯೋಗವಾದರೂ ಏನು, ವಿಶ್ವದಲ್ಲಿ ಕೊರೊನಾ ವೈರಸ್ ಅನ್ನು ಫಿಲ್ಟರ್ ಮಾಡುವ ಯಾವುದೇ ಮಾಸ್ಕ್ ಇನ್ನೂ ಸಾಧ್ಯವಾಗಿಲ್ಲ. ಈ ವಿಚಾರವನ್ನು ಈ ಹಿಂದೆಯೂ ಹೇಳಿದ್ದೆವು. ಈಗ, ದೇಶದ ಆರೋಗ್ಯ ಮಂತ್ರಿ ಡಾ.ಹರ್ಷವರ್ಧನ್ ಈ ಮಾತನ್ನು ಹೇಳುತ್ತಿದ್ದಾರೆ"ಎಂದು ಡಾ. ತರುಣ್ ಕೊಠಾರಿ ಹೇಳಿದ್ದಾರೆ.

ಮಾಸ್ಕ್ ಧರಿಸದೇ ದಿನಕ್ಕೆ 15-20 ರೋಗಿಗಳ ತಪಾಸಣೆಯನ್ನು ಮಾಡುತ್ತಿದ್ದೇನೆ

ಮಾಸ್ಕ್ ಧರಿಸದೇ ದಿನಕ್ಕೆ 15-20 ರೋಗಿಗಳ ತಪಾಸಣೆಯನ್ನು ಮಾಡುತ್ತಿದ್ದೇನೆ

"ಮಾಸ್ಕ್ ಧರಿಸದೇ ದಿನಕ್ಕೆ 15-20 ರೋಗಿಗಳ ತಪಾಸಣೆಯನ್ನು ನಾನು ಮಾಡುತ್ತಿದ್ದೇನೆ. ಸ್ಯಾನಿಟೈಸರ್ ಬಳಸಲು ಹೇಳಿದರು, ಇದರಿಂದ, ಜನರ ರೋಗ ನಿರೋಧಕ ಶಕ್ತಿ ಕಮ್ಮಿಯಾಗುತ್ತದೆ. ಇನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ, ಜನರು ಇನ್ನೊಬ್ಬರ ಬಳಿ ಮಾತನಾಡಲು ಹಿಂಜರಿಯುತ್ತಾರೆ. ಲಾಕ್ ಡೌನ್ ಎನ್ನುವುದು ಪರಿಹಾರವೇ ಆಗಿರಲಿಲ್ಲ"ಎಂದು ಡಾ.ತರುಣ್ ಅಭಿಪ್ರಾಯ ಪಟ್ಟಿದ್ದಾರೆ.

ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!

ವಿಶ್ವ ಆರೋಗ್ಯ ಸಂಸ್ಥೆ (WHO) ದೊಡ್ಡ ಆಟವನ್ನು ಈ ವಿಚಾರದಲ್ಲಿ ಆಡಿದೆ

ವಿಶ್ವ ಆರೋಗ್ಯ ಸಂಸ್ಥೆ (WHO) ದೊಡ್ಡ ಆಟವನ್ನು ಈ ವಿಚಾರದಲ್ಲಿ ಆಡಿದೆ

"ಈ ಎಲ್ಲಾ ಷಡ್ಯಂತ್ರ್ಯಕ್ಕಿಂತಲೂ ಹೆಚ್ಚು ವಿಶ್ವ ಆರೋಗ್ಯ ಸಂಸ್ಥೆ (WHO) ದೊಡ್ಡ ಆಟವನ್ನು ಈ ವಿಚಾರದಲ್ಲಿ ಆಡಿದೆ. ಕ್ಲಿನಿಕಲ್ ಟೆಸ್ಟ್ ಟ್ರಯಲ್ ಎನ್ನುವುದು ಇದು ಆರಂಭಿಸಿತು. ಇದರಲ್ಲಿ ನಾಲ್ಕು ಡ್ರಗ್ಸ್ ಗಳನ್ನು ಇಲ್ಲಿ ಪ್ರಯೋಗಿಸಿತು. ಈ ಎಲ್ಲಾ ಲಸಿಕೆಗಳು ಒಂದಕ್ಕೊಂದು ಒಂದು ತೀರಾ ಡೇಂಜರ್. ಇದನ್ನು ಆರೋಗ್ಯ ಸಂಸ್ಥೆ ಅರಿತಿದ್ದರೂ, ಭಾರತದಲ್ಲಿ ಇದನ್ನು ಪ್ರಯೋಗಿಸಲಾಯಿತು"ಎಂದು ಡಾಕ್ಟರ್ ದೂರಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್

ಭಾರತದ ಆರೋಗ್ಯ ಸಚಿವರಾದ ಡಾ.ಹರ್ಷವರ್ಧನ್ ಅವರಿಗೆ ನನ್ನ ಹತ್ತು ಪ್ರಶ್ನೆಗಳು. ನನಗೆ ಅವರು ಉತ್ತರ ನೀಡುವುದು ಬೇಡ, ಸಾರ್ವಜನಿಕರಿಗೆ ಉತ್ತರ ನೀಡಲಿ ಎಂದು ಡಾ. ತರುಣ್ ಕೊಠಾರಿ ಕೇಳಿರುವ ಹತ್ತು ಪ್ರಶ್ನೆಗಳು ಹೀಗಿವೆ:
1. ಕೊರೊನಾ ವೈರಸಿನ ಗಾತ್ರ ಏನು ಮತ್ತು ಸರಕಾರ ಬಳಸಲು ಸೂಚಿಸಿರುವ ಮಾಸ್ಕಿನ ಸೈಜ್ ಏನು?
2. ಕೊರೊನಾ ವೈರಸಿನ ಪ್ರೊಡಕ್ಷನ್ ರೇಟ್ ಎಷ್ಟು?
3. ಕೊರೊನಾದಿಂದ ಮಾತ್ರ ಸಂಭವಿಸುತ್ತಿರುವ ಸಾವಿನ ಪ್ರಮಾಣ ಎಷ್ಟು?
4. ನಾಲ್ಕು ರೀತಿಯ ಟೆಸ್ಟ್ ಅನ್ನು ಈಗ ಮಾಡಲಾಗುತ್ತಿದೆ. ಇದರಲ್ಲಿ ಕೋವಿಡ್ 19 ಟೆಸ್ಟಿನ ಫಲಿತಾಂಶ ಮಾತ್ರ ಯಾವ ವರದಿಯಲ್ಲಿ ಸಿಗುತ್ತದೆ?
5. ಈಗ ನಡೆಸಲಾಗುತ್ತಿರುವ ಟೆಸ್ಟಿನ ನಿಖರತೆಯ ಪ್ರಮಾಣ ಎಷ್ಟಿದೆ?

ಡಾ.ತರುಣ್ ಕೊಠಾರಿ, ಎಂಬಿಬಿಎಸ್, ಎಂಡಿ

ಡಾ.ತರುಣ್ ಕೊಠಾರಿ, ಎಂಬಿಬಿಎಸ್, ಎಂಡಿ

6. ವೈದ್ಯಕೀಯ ವರದಿಯಲ್ಲಿ ಮಲೇರಿಯಾ, ಟೈಫಾಯಿಡ್, ಕೊರೊನಾ ಮುಂತಾದ ಕಾಯಿಲೆಗಳು ಪಾಸಿಟೀವ್ ಬಂದರೆ, ಅದನ್ನು ಆರೋಗ್ಯ ಇಲಾಖೆ ಯಾವುದಕ್ಕೆ ಸೇರಿಸುತ್ತದೆ?
7. ಕೊರೊನಾ ಬರುವ ಮುನ್ನ ನಮ್ಮ ದೇಶದಲ್ಲಿನ ಮರಣ ಪ್ರಮಾಣ ಎಷ್ಟಿತ್ತು, ಈಗ ಅದು ಎಷ್ಟಿದೆ. ಹೆಚ್ಚಾಗಿದೆಯೋ, ಕಮ್ಮಿಯಾಗಿದೆಯೋ?
8. ಟಿಬಿ ಮುಂತಾದ ಕಾಯಿಲೆಯಿಂದಲೂ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಅದಕ್ಕಾಗಿ ಸರಕಾರ ಲಾಕ್ ಡೌನ್ ಮಾಡುತ್ತಾ?
9. ವಿಶ್ವ ಆರೋಗ್ಯ ಸಂಸ್ಥೆ (WHO) ಭ್ರಷ್ಟ ಎಂದು ಹಿಂದೆಯೂ ಸಾಬೀತಾಗಿತ್ತು. ಇಂತಹ ಸಂಸ್ಥೆಯ ಮೇಲೆ ಇಷ್ಟು ನಂಬಿಕೆ ಯಾಕೆ?
10. ಪ್ರಧಾನಿ ಮೋದಿ ವೈದ್ಯಕೀಯ ವೃತ್ತಿಯವರ ಸಲಹೆಯನ್ನು ಕೇಳದೇ, ಬಿಲ್ ಗೇಟ್ಸ್ ಅವರಲ್ಲಿ ಸಲಹೆಯನ್ನು ಯಾಕೆ ಕೇಳುತ್ತಿದ್ದಾರೆ?

English summary
Noted Radiologist Dr. Tarun Kothari Ten Questions To Union Health Ministry On Corona,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X