ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಬಿಜೆಪಿಗೆ ಸೇರ್ಪಡೆ: ಓ..ಭಲ್ಲೇ..ಭಲ್ಲೇ..

|
Google Oneindia Kannada News

Recommended Video

Lok Sabha Elections 2019 : ಮೋದಿ ಜತೆ ಸೇರಿ ಭಲ್ಲೆ ಭಲ್ಲೆ ಮಾಡಲಿದ್ದಾರೆ ದಲೇರ್ ಮೆಹೆಂದಿ | Oneindia Kannada

ನವದೆಹಲಿ, ಏ 26: ಸನ್ನಿ ಡಿಯೋಲ್, ಹನ್ಸ್ ರಾಜ್ ಹನ್ಸ್ ನಂತರ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಹನ್ಸ್ ರಾಜ್ ಹನ್ಸ್ ಸಮ್ಮುಖದಲ್ಲಿ ದಲೇರ್ ಮೆಹೆಂದಿ ಅವರನ್ನು ಕೇಂದ್ರ ಸಚಿವ ವಿಜಯ್ ಗೋಯಲ್ ಪಕ್ಷಕ್ಕೆ ಬರಮಾಡಿಕೊಂಡು, ಪಕ್ಷದ ಬಾವುಟವನ್ನು ಅವರ ಕೈಗೆ ನೀಡಿ ಕೇಸರಿ ಶಾಲನ್ನು ಹೊದಿಸಿದ್ದಾರೆ.

ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸನ್ನಿ ಡಿಯೋಲ್?ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸನ್ನಿ ಡಿಯೋಲ್?

ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಇತ್ತೀಚೆಗೆ ಬಿಜೆಪಿ ಸೇರಿರುವ ಮತ್ತು ಪೂರ್ವ ದೆಹಲಿ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಗೌತಂ ಗಂಭೀರ್ ಕೂಡಾ ಈ ವೇಳೆ ಹಾಜರಿದ್ದರು. 2013ರಲ್ಲಿ ದಲೇರ್ ಮೆಹೆಂದಿ ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರು.

Singer Daler Mehndi joins BJP and he will campaign for party

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಖ್ಯಾತನಾಮರನ್ನು ಪಕ್ಷಕ್ಕೆ ಸೆಳೆಯುತ್ತಿದ್ದು, ಅವರಿಂದ ಪ್ರಚಾರ ಮಾಡಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಪಂಜಾಬ್ ರಾಜ್ಯದಲ್ಲಿರುವ ಹದಿಮೂರು ಲೋಕಸಭಾ ಕ್ಷೇತ್ರಗಳ ಚುನಾವಣೆ, ಏಳನೇ ಮತ್ತು ಕೊನೆಯ ಹಂತದಲ್ಲಿ (ಮೇ 19) ನಡೆಯಲಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇತ್ತೀಚೆಗೆ, ಸ್ಟಾರ್ ನಟ ಧರ್ಮೇಂದ್ರ ಅವರ ಪುತ್ರ, ನಟ ಸನ್ನಿ ಡಿಯೋಲ್ ಬಿಜೆಪಿ ಸೇರಿದ್ದರು, ಅವರಿಗೆ ಪಕ್ಷ ಗುರುದಾಸಪುರದಿಂದ (ಪಂಜಾಬ್) ಟಿಕೆಟ್ ನೀಡಿದೆ. (ಚಿತ್ರ : ANI)

English summary
Noted Punjabi Singer Daler Mehndi joins BJP on Friday (Apr 26). Daler Mehndi joined the Bharatiya Janata Party (BJP) in the presence of Hans Raj Hans and Union minister Vijay Goel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X