ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ, ಹಣ ಹಿಂಪಡೆತ: ಬ್ಯಾಂಕುಗಳಿಗೆ ಕೇಂದ್ರದ ಮಹತ್ವದ ಸೂಚನೆ

ಎಟಿಎಂ, ಹಣ ಹಿಂಪಡೆತ: ಬ್ಯಾಂಕುಗಳಿಗೆ ಕೇಂದ್ರದ ಮಹತ್ವದ ಸೂಚನೆ. ಭಾನುವಾರ ರಾತ್ರಿ (ನ 13) ಸಭೆಯಲ್ಲಿ ಅಂತಿಮಗೊಂಡ ಕೆಲವೊಂದು ಪ್ರಮುಖ ನಿರ್ಧಾರಗಳು.

By Balaraj
|
Google Oneindia Kannada News

ನವದೆಹಲಿ, ನ 13: ಎರಡು ದೊಡ್ಡ ಮೊತ್ತದ ಕರೆನ್ಸಿ ನೋಟನ್ನು ನಿಷೇಧಿಸಿ ಮಹತ್ವದ ನಿರ್ಧಾರ ತೆಗೆದುಕೊಂಡ ಕೇಂದ್ರ ಸರಕಾರ, ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಭಾನುವಾರ ರಾತ್ರಿ (ನ 13) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿದ ನಂತರ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ಸೇರಿದ ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು, ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುತ್ತಿರುವ ಕರೆನ್ಸಿಯ ಬಗ್ಗೆ ಸಭೆಯಲ್ಲಿ ಪರಮಾರ್ಶೆ ನಡೆಸಿತು. (500 ರು ಹೊಸ ನೋಟುಗಳು ಬ್ಯಾಂಕಲ್ಲಿ ಸಿಗುತ್ತಿವೆ)

ಬುಧವಾರ (ನ 9) ದಿಂದ ಶನಿವಾರದ (ನ 12) ವರೆಗೆ ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಸುಮಾರು ಮೂರು ಲಕ್ಷ ಕೋಟಿ ರೂಪಾಯಿ ಮೊತ್ತದಲ್ಲಿ ಬ್ಯಾಂಕುಗಳಲ್ಲಿ ಜಮಾಗೊಂಡಿದ್ದರೆ, ಐವತ್ತು ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ನೋಟು ಇತರ ಕರೆನ್ಸಿಗಳಿಗೆ ಬದಲಾವಣೆಗೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ರಾತ್ರಿ ಕೇಂದ್ರ ಹಣಕಾಸು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಅರಿವಿದೆ, ಕಪ್ಪುಹಣ ತಡೆಗಟ್ಟಲು ಇಂತಹ ಕಠಿಣ ಕ್ರಮದ ಅವಶ್ಯಕತೆಯಿದೆ, ಜನರು ಸಹಕರಿಸುವಂತೆ ಪ್ರಧಾನಿ ಜನತೆಯಲ್ಲಿ ಕೋರಿದ್ದಾರೆ.

ರೈತಾಪಿ ವರ್ಗ ಬ್ಯಾಂಕುಗಳಲ್ಲಿ ಜಮಾ ಮಾಡುವ ದುಡ್ಡಿನ ಮೇಲೆ ತೆರಿಗೆ ವಿಧಿಸುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಹಣಕಾಸು ಅಧಿಕಾರಿಗಳ ಸಭೆಯಲ್ಲಿ ಅಂತಿಮಗೊಂಡ ಮಹತ್ವದ ನಿರ್ಧಾರಗಳು ಇಂತಿವೆ, ಮುಂದೆ ಓದಿ..

ಎಟಿಎಂ Withdrawl

ಎಟಿಎಂ Withdrawl

ಎಟಿಎಂ ಮತ್ತು Withdrawl ಸಂದರ್ಭಗಳಲ್ಲಿ ಎಲ್ಲಾ ಬ್ಯಾಂಕುಗಳಿಗೆ ಐನೂರು ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಹೆಚ್ಚಾಗಿ ಬಳಸುವಂತೆ ಸೂಚನೆ. ಐನೂರು ರೂಪಾಯಿ ನೋಟನ್ನು ಠಂಕಶಾಲೆಯಿಂದ ಹೆಚ್ಚಾಗಿ ರವಾನಿಸಲಾಗಿದೆ - ಸಭೆಯಲ್ಲಿ ಆರ್ಬಿಐ ಅಧಿಕಾರಿಗಳು.

ಮಿತಿ ಏರಿಕೆ

ಮಿತಿ ಏರಿಕೆ

ಎಟಿಎಂನಲ್ಲಿ ಹಣ ಪಡೆಯುವ ಮೊತ್ತವನ್ನು ಎರಡರಿಂದ ಎರಡೂವರೆ ಸಾವಿರ ರೂಪಾಯಿಗಳಿಗೆ ಏರಿಸಲು ಕೇಂದ್ರ ಹಣಕಾಸು ಸಚಿವಾಲಯ ಬ್ಯಾಂಕುಗಳಿಗೆ ಆದೇಶ ನೀಡಿದೆ.

ನೋಟು ಬದಲಾವಣೆ

ನೋಟು ಬದಲಾವಣೆ

ಈಗಿರುವ ನೋಟು ಬದಲಾವಣೆ ಮೊತ್ತವಾದ ನಾಲ್ಕು ಸಾವಿರ ಮೊತ್ತವನ್ನು ನಾಲ್ಕೂವರೆ ಸಾವಿರ ರೂಪಾಯಿಗಳಿಗೆ ಏರಿಸಲು ಸೂಚನೆ.

ವಾರದ ಮೊತ್ತ

ವಾರದ ಮೊತ್ತ

ವಾರದ ಹಣ ಹಿಂಪಡೆತ ಮೊತ್ತವನ್ನು ಇಪ್ಪತ್ತರಿಂದ 24ಸಾವಿರ ರೂಪಾಯಿಗಳಿಗೆ ಏರಿಸಲು ನಿರ್ಧಾರ, ಅಂತೆಯೇ ಬ್ಯಾಂಕುಗಳಿಗೆ ಕೇಂದ್ರದ ಸೂಚನೆ.

ದಿನಕ್ಕೆ ಹತ್ತು ಸಾವಿರ

ದಿನಕ್ಕೆ ಹತ್ತು ಸಾವಿರ

ದಿನವೊಂದಕ್ಕೆ ಹತ್ತು ಸಾವಿರ ರೂಪಾಯಿ ಹಿಂಪಡೆತ ಪದ್ದತಿಯನ್ನು ವಾಪಸ್ ಪಡೆಯಲು ಬ್ಯಾಂಕುಗಳಿಗೆ ಕೇಂದ್ರದ ಸೂಚನೆ.

English summary
Banks asked to increase exchange limit from Rs 4000 to Rs 4500, ATM withdrawal limit raised to Rs 2,500.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X